Rice Price Today : ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಖಾರಿಫ್ ಋತುವಿನಲ್ಲಿ ಕಡಿಮೆ ಇಳುವರಿ ಮತ್ತು ಬಾಸ್ಮತಿ ಅಲ್ಲದ ಅಕ್ಕಿ ರಫ್ತಿನಲ್ಲಿ ಶೇಕಡಾ 11 ರಷ್ಟು ಬೆಳವಣಿಗೆಯ ಮುನ್ಸೂಚನೆಯ ದೃಷ್ಟಿಯಿಂದ ಮೇಲ್ಮುಖ ಪ್ರವೃತ್ತಿಯು ಮತ್ತಷ್ಟು ಮುಂದುವರಿಯುವ ಸಾಧ್ಯತೆಯಿದೆ. ಈ ಮಾಹಿತಿಯನ್ನು ಆಹಾರ ಸಚಿವಾಲಯ ನೀಡಿದೆ.
ರಫ್ತು ನೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ
ಆಹಾರ ಸಚಿವಾಲಯ ನೀಡಿದ ಮಾಹಿತಿಯಲ್ಲಿ, ಭಾರತದ ಅಕ್ಕಿ ರಫ್ತು ನೀತಿಯಲ್ಲಿ ಇತ್ತೀಚಿನ ತಿದ್ದುಪಡಿಗಳ ಹಿಂದಿನ ವಿವರವಾದ ಕಾರಣಗಳನ್ನು ವಿವರಿಸಲಾಗಿದೆ. ಭಾರತದ ಅಕ್ಕಿ ರಫ್ತು ನಿಯಮಗಳಲ್ಲಿ ಇತ್ತೀಚಿನ ಬದಲಾವಣೆಗಳು ರಫ್ತಿಗೆ ಲಭ್ಯತೆಯನ್ನು ಕಡಿಮೆ ಮಾಡದೆಯೇ "ದೇಶೀಯ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ" ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ : ಆಧಾರ್ನಲ್ಲಿ ದೊಡ್ಡ ಬದಲಾವಣೆಗೆ ಮುಂದಾದ ಯುಐಡಿಎಐ
ನುಚ್ಚಕ್ಕಿ (ಒಡೆದ ಅಕ್ಕಿ) ರಫ್ತು ನಿಷೇಧಿಸಲಾಗಿದೆ
ಸೆಪ್ಟೆಂಬರ್ ಆರಂಭದಲ್ಲಿ, ನುಚ್ಚಕ್ಕಿಯ (ಒಡೆದ ಅಕ್ಕಿಯ) ರಫ್ತನ್ನು ಸರ್ಕಾರ ನಿಷೇಧಿಸಿತು ಮತ್ತು ಬಾಸ್ಮತಿ ಅಲ್ಲದ ಅಕ್ಕಿಗೆ ಶೇ.20 ರಷ್ಟು ರಫ್ತು ಸುಂಕವನ್ನು ವಿಧಿಸಿತು.
ಆಹಾರ ಸಚಿವಾಲಯವು ಫ್ಯಾಕ್ಟ್ ಶೀಟ್ನಲ್ಲಿ, “ದೇಶೀಯ ಅಕ್ಕಿ ಬೆಲೆಗಳ ಏರಿಕೆಯ ಪ್ರವೃತ್ತಿಯನ್ನು ತೋರಿಸುತ್ತಿವೆ ಮತ್ತು ಸುಮಾರು 6 ಮಿಲಿಯನ್ ಟನ್ ಭತ್ತದ ಉತ್ಪಾದನೆ ಮತ್ತು ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನಲ್ಲಿ ಶೇ. 11 ರಷ್ಟು ಬೆಳವಣಿಗೆಯ ಮುನ್ಸೂಚನೆಯಿಂದಾಗಿ ಏರಿಕೆಯಾಗಬಹುದು.
ಚೀನಾದಲ್ಲಿ ಉಂಟಾಗಬಹುದು 'ಆಹಾರ ಬಿಕ್ಕಟ್ಟು'
ಭಾರತದಿಂದ ರಫ್ತು ನಿಷೇಧದಿಂದ ಚೀನಾದಲ್ಲಿ ಆಹಾರ ಬಿಕ್ಕಟ್ಟಿಗೆ ಕಾರಣವಾಗಬಹುದು. ಸರ್ಕಾರದ ಈ ನಿರ್ಧಾರದಿಂದ ಬೆಲೆ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ಸರಕಾರ ನೀಡಿರುವ ಮಾಹಿತಿಯಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.
ಭಾರತವು ಅಕ್ಕಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ
ಚೀನಾದ ನಂತರ ಭಾರತವು ಅತಿ ಹೆಚ್ಚು ಅಕ್ಕಿಯನ್ನು ಉತ್ಪಾದಿಸುವ ದೇಶವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಅಕ್ಕಿ 40 ಪ್ರತಿಶತವನ್ನು ಹೊಂದಿದೆ. 2021-22ರ ಆರ್ಥಿಕ ವರ್ಷದಲ್ಲಿ ಭಾರತವು 21.2 ಮಿಲಿಯನ್ ಟನ್ ಅಕ್ಕಿಯನ್ನು ರಫ್ತು ಮಾಡಿದೆ. ಅದರಲ್ಲಿ 34.9 ಲಕ್ಷ ಟನ್ ಬಾಸ್ಮತಿ ಅಕ್ಕಿ ಇತ್ತು. ಭಾರತದಲ್ಲಿ ಪ್ರಸ್ತುತ ಖಾರಿಫ್ ಋತುವಿನಲ್ಲಿ, ಭತ್ತದ ಬೆಳೆ ಪ್ರದೇಶವು ಗಣನೀಯವಾಗಿ ಕಡಿಮೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ : NPS ನಲ್ಲಿ ಹೂಡಿಕೆ ಮಾಡಿ ನಿವೃತ್ತಿಯ ನಂತರ ತಿಂಗಳಿಗೆ 50 ಸಾವಿರ ಪಿಂಚಣಿ ಸಿಗಲಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.