ಮತ್ತೆ ಗಗನಕ್ಕೇರಿದ ಪೆಟ್ರೋಲ್ ಡಿಸೇಲ್ ದರ!

ಇಂಧನ ಬೆಲೆಗಳು ಭಾನುವಾರದಂದು ಹೊಸದಾಗಿ ಏರಿಕೆ ಕಂಡಿವೆ. ಆ ಮೂಲಕ ಗ್ರಾಹಕರು ಮೇಲೆ ಈ ಪೆಟ್ರೋಲ್ ದರದ ನಿರಂತರ ಏರಿಕೆಯಿಂದ ಪರದಾಡುವಂತಾಗಿದೆ.ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ 82.61, 73.97 ರೂ ದರದಲ್ಲಿ ಏರಿಕೆ ಆ ಮೂಲಕ ಕ್ರಮವಾಗಿ 12 ಮತ್ತು 10 ಪೈಸೆ ಹೆಚ್ಚಳವಾಗಿದೆ.

Last Updated : Sep 23, 2018, 11:33 AM IST
 ಮತ್ತೆ ಗಗನಕ್ಕೇರಿದ ಪೆಟ್ರೋಲ್ ಡಿಸೇಲ್ ದರ! title=

ನವದೆಹಲಿ: ಇಂಧನ ಬೆಲೆಗಳು ಭಾನುವಾರದಂದು ಹೊಸದಾಗಿ ಏರಿಕೆ ಕಂಡಿವೆ. ಆ ಮೂಲಕ ಗ್ರಾಹಕರು ಮೇಲೆ ಈ ಪೆಟ್ರೋಲ್ ದರದ ನಿರಂತರ ಏರಿಕೆಯಿಂದ ಪರದಾಡುವಂತಾಗಿದೆ.ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ 82.61, 73.97 ರೂ ದರದಲ್ಲಿ ಏರಿಕೆ ಆ ಮೂಲಕ ಕ್ರಮವಾಗಿ 12 ಮತ್ತು 10 ಪೈಸೆ ಹೆಚ್ಚಳವಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 89.97 ರೂ.ಆಗಿದೆ.ಕಳೆದ ಕೆಲವು ವಾರಗಳಿಂದ ಇಂಧನ ಬೆಲೆಗಳು ನಿರಂತರ ಏರಿಕೆ ಕಂಡಿವೆ. ಇದರಿಂದ ಇತ್ತೀಚಿಗಷ್ಟೇ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಭಾರತ ಬಂದ್ ಗೆ ಕರೆ ನೀಡಿದ್ದರು. ಕೇಂದ್ರ ಸರಕಾರವು ಬೆಲೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದರು. ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ಇತರ ಅಂತರರಾಷ್ಟ್ರೀಯ ಅಂಶಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳಲ್ಲಿ ಏರಿಕೆಯನ್ನು ಉಂಟು ಮಾಡುತ್ತಿದೆ ಎಂದು ಸರ್ಕಾರದ ಬೆಲೆ ಏರಿಕೆಗೆ ಕಾರಣವನ್ನು ನೀಡಿತ್ತು.

ಏತನ್ಮಧ್ಯೆ,ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರಗಾರ್ಗ್ ಶುಕ್ರವಾರದಂದು ಇರಾನ್ನಿಂದ ತೈಲ ಆಮದುಗಳನ್ನು ಕಡಿತಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನವೆಂಬರ್ 4 ರ ಹೊತ್ತಿಗೆ ಸರ್ಕಾರವು ಕ್ರಮಗಳನ್ನು ಕೈಗೊಳ್ಳಲಿದೆ. ಅಗತ್ಯವಿದ್ದಲ್ಲಿ, ಭಾರತೀಯ ರೂಪಾಯಿ ವಿಷಯದಲ್ಲಿ ತೈಲ ವ್ಯಾಪಾರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಗಾರ್ಗ್ ಹೇಳಿದ್ದಾರೆ.

Trending News