ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್.! ಈ ಪೇಮೆಂಟ್ ಗೆ ನೀಡಬೇಕಾಗುತ್ತದೆ 1% ಶುಲ್ಕ

ICICI Bank Credit Card : ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್ ನಲ್ಲಿ  ಬಾಡಿಗೆ ಪಾವತಿಸಿದರೆ, ಆ ಪೇಮೆಂಟ್ ಮೇಲೆ  1 ಪ್ರತಿಶತದಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.  ಅಕ್ಟೋಬರ್ 20, 2022 ರಿಂದ ಈ ನಿಯಮ ಜಾರಿಗೆ ಬರಲಿದೆ.  

Written by - Ranjitha R K | Last Updated : Sep 20, 2022, 04:37 PM IST
  • ಕ್ರೆಡಿಟ್ ಕಾರ್ಡ್ ಹೊಂದಿದವರಿಗೆ ಇದು ಮುಖ್ಯ ಸುದ್ದಿ
  • ಆನ್ ಲೈನ್ ಮೂಲಕ ಬಾಡಿಗೆ ಕಟ್ಟಿದರೆ ಪಾವತಿಸಬೇಕು ಹೆಚ್ಚುವರಿ ಶುಲ್ಕ
  • ಹೊಸ ನಿಯಮ ಅಕ್ಟೋಬರ್ 20 ರಿಂದ ಜಾರಿಗೆ
ICICI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್.!  ಈ  ಪೇಮೆಂಟ್ ಗೆ   ನೀಡಬೇಕಾಗುತ್ತದೆ 1% ಶುಲ್ಕ title=
icici bank credit card rules (file photo)

ICICI Bank Credit Card : ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಕೋಟಿಗಟ್ಟಲೆ ಗ್ರಾಹಕರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಸುದ್ದಿ ನಿಮಗೂ ತಿಳಿದಿರಲಿ. ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್ ನಲ್ಲಿ  ಬಾಡಿಗೆ ಪಾವತಿಸಿದರೆ, ಆ ಪೇಮೆಂಟ್ ಮೇಲೆ  1 ಪ್ರತಿಶತದಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.  ಅಕ್ಟೋಬರ್ 20, 2022 ರಿಂದ ಈ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಮೆಸೇಜ್ ಕಳುಹಿಸುವ ಮೂಲಕ ಬ್ಯಾಂಕ್ ಗ್ರಾಹಕರಿಗೆ ಸೂಚಿಸುತ್ತಿದೆ. 

ಹೊಸ ನಿಯಮ ಅಕ್ಟೋಬರ್ 20 ರಿಂದ ಜಾರಿಗೆ : 
ICICI ಬಾಡಿಗೆಗೆ 1% ವಿಧಿಸುವ ಮೊದಲ ಬ್ಯಾಂಕ್ ಆಗಿರಲಿದೆ. ಈ ಬದಲಾವಣೆಯ ನಂತರ, ಮನೆ ಬಾಡಿಗೆಯನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬೇಕೇ ಬೇಡವೇ ಎನ್ನುವುದನ್ನು ಗ್ರಾಹಕರು ನಿರ್ಧರಿಸಬೇಕಾಗುತ್ತದೆ. ಈ ನಿಯಮವನ್ನು ಬ್ಯಾಂಕ್ ಅಕ್ಟೋಬರ್ 20 ರಿಂದ ಜಾರಿಗೆ ತರಲಿದೆ. ಅಂದರೆ, ಮುಂದಿನ ತಿಂಗಳಿನಿಂದ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ  ಬಾಡಿಗೆ ಪಾವತಿಸಿದರೆ, 1 ಪ್ರತಿಶತದಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : ಇನ್ನು 10 ದಿನಗಳಲ್ಲಿ ಪಿಪಿಎಫ್ , ಸುಕನ್ಯ ಸಮೃದ್ದಿ ಹೂಡಿಕೆದಾರರಿಗೆ ಸಿಹಿ ಸುದ್ದಿ ಘೋಷಿಸಲಿದೆ ಸರ್ಕಾರ

ಯಾರಿಗೆ ಅನ್ವಯವಾಗುತ್ತದೆ ಈ ನಿಯಮ : 
Paytm, Cred, MyGet, RedGiraffe ಅಥವಾ Magic Bricks ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ಬಾಡಿಗೆಯನ್ನು ಪಾವತಿಸುವ ಜನರ ಮೇಲೆ ಈ ನಿಯಮ ಅನ್ವಯವಾಗುತ್ತದೆ.  ಐಸಿಐಸಿಐ ಬ್ಯಾಂಕ್ ಈ ನಿಯಮವನ್ನು ಜಾರಿಗೆ ತಂದ ನಂತರ, ಶೀಘ್ರದಲ್ಲೇ ಇತರ ಬ್ಯಾಂಕ್‌ಗಳು ಸಹ ಈ ನಿಯಮವನ್ನು ರೂಪಿಸಲಿದೆ ಎಂದು ಹೇಳಲಾಗುತ್ತಿದೆ. 

ICICI ತೆಗೆದುಕೊಂಡ ಈ ನಿರ್ಧಾರವು ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ತಮ್ಮ ಮನೆ ಬಾಡಿಗೆಯನ್ನು ಪಾವತಿಸುವ ಬಾಡಿಗೆದಾರರ ಮೇಲೆ ಪರಿಣಾಮ ಬೀರುತ್ತದೆ. ಈ ನಿಯಮವನ್ನು ಜಾರಿಗೆ ತರಲು ಒಂದು ತಿಂಗಳ ಸಮಯಾವಕಾಶ ವಿದೆ. ಇದರಿಂದ ಗ್ರಾಹಕರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬಹುದು.

ಇದನ್ನೂ ಓದಿ : ಅಗ್ಗದ ಬೆಲೆಯ ಬೈಕ್ ಬಿಡುಗಡೆ ಮಾಡಿದ ಹೀರೋ.! ಅತ್ಯಾಕರ್ಷಕವಾಗಿದೆ ಇದರ ಕಲರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News