Mahila Naga Sadhu Mahakumbh: ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಯಿಂದಲೂ ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. 13 ಅಖಾಡಗಳ ನಾಗಾ ಸಾಧುಗಳು ಮತ್ತು ಮಹಿಳಾ ಸಾಧ್ವಿಗಳು ಪ್ರಯಾಗರಾಜ್ ಗೆ ಬಂದಿದ್ದಾರೆ. ಮಹಾ ಕುಂಭ ಮೇಳಕ್ಕೆ ಬಂದ ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್ ಸಮಯದಲ್ಲಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಆಗಾಗ್ಗೆ ಉದ್ಭವಿಸಬಹುದು. ಈ ಪ್ರಶ್ನೆಗೆ ಉತ್ತರವನ್ನು ನಾವು ಇಂದು ನಿಮಗೆ ಹೇಳುತ್ತೇವೆ.
ಮಹಿಳಾ ನಾಗಾ ಸಾಧುಗಳು ಪಿರಿಯಡ್ಸ್ ಇರದ ದಿನಗಳಲ್ಲಿ ಮಾತ್ರ ಗಂಗಾ ಸ್ನಾನ ಮಾಡುತ್ತಾರೆ. ಕುಂಭಮೇಳದ ಸಮಯದಲ್ಲಿ ಪಿರಿಯಡ್ಸ್ ಆದರೆ ತನ್ನ ಮೇಲೆ ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ಬರುತ್ತಾರೆ. ಗಂಗಾ ನದಿಯಲ್ಲಿ ಮುಳುಗಿ ಸ್ನಾನ ಮಾಡುವುದಿಲ್ಲ.
ವಿಶೇಷವೆಂದರೆ, ಮಹಾಕುಂಭದಲ್ಲಿ ಪುರುಷ ನಾಗ ಸಾಧು ಸ್ನಾನ ಮಾಡಿದ ನಂತರ ಅಖಾಡದ ಮಹಿಳಾ ನಾಗಾ ಸಾಧುಗಳು ಸ್ನಾನ ಮಾಡುತ್ತಾರೆ. ನಾಗಾ ಸಾಧುಗಳಾಗುವ ಮೊದಲು ಅವರು ಜೀವಂತವಾಗಿರುವಾಗ ಪಿಂಡ ದಾನ ಮಾಡಬೇಕು. ತಲೆ ಬೋಳಿಸಿಕೊಳ್ಳಬೇಕು. 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು.
ಇದನ್ನೂ ಓದಿ: ಸೌಂದರ್ಯವೇ ಮುಳುವಾಯ್ತು ಕುಂಭಮೇಳ ಸುಂದರಿಗೆ..! ಏನಾಗಬಾರದಿತ್ತೋ ಅದೇ ಆಯ್ತು ಚೆಲುವೆಗೆ.. ಪಾಪ..
ಮಹಿಳಾ ನಾಗಾ ಸಾಧುಗಳು, ಪುರುಷ ನಾಗಾ ಸಾಧುಗಳಿಗಿಂತ ಭಿನ್ನವಾಗಿ ಇರುತ್ತಾರೆ. ಅವರು ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಹೀಗಾಗಿ ಪಿರಿಯಡ್ಸ್ ಸಮಯದಲ್ಲಿ ಸಮಸ್ಯೆ ಕಾಡುವುದಿಲ್ಲ. ಬೆಳಗಿನಿಂದ ಸಂಜೆಯವರೆಗೂ ಶಿವನ ಆರಾಧನೆಯಲ್ಲಿಯೇ ಕಾಲ ಕಳೆಯುತ್ತಾರೆ.
ಪುರುಷ ನಾಗಾ ಸಾಧುಗಳಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ನಾಗಾ ಸಾಧುಗಳು ವಿವಸ್ತ್ರರಾಗಿ ಓಡಾಡಲು ಅವಕಾಶ ಇರುವುದಿಲ್ಲ. ದೀಕ್ಷೆ ಪಡೆದು ನಾಗಾ ಸಾಧುಗಳಾದ ಮಹಿಳೆಯರು ಹೊಲಿಗೆ ಹಾಕದ ಕೇಸರಿ ವಸ್ತ್ರ ಧರಿಸಬೇಕು. ಸ್ತ್ರೀ ನಾಗಾ ಸಾಧುಗಳು ಹಣೆಯ ಮೇಲೆ ತಿಲಕ ಇಡುತ್ತಾರೆ.
ನಾಗ ಸಾಧು ಆಗಲು 10 ರಿಂದ 15 ವರ್ಷಗಳ ಕಾಲ ಕಠಿಣ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಮಹಿಳಾ ನಾಗ ಸಾಧು ಆಗಲು ಅರ್ಹಳು ಮತ್ತು ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾಳೆ ಎಂದು ಗುರುಗಳಿಗೆ ಭರವಸೆ ನೀಡಬೇಕು. ಇದಾದ ನಂತರ ಗುರುಗಳು ನಾಗ ಸಾಧು ಆಗಲು ಅನುಮತಿ ನೀಡುತ್ತಾರೆ. ನಾಗ ಸಾಧುವಾಗುವ ಮೊದಲು ಮಹಿಳೆಯ ಹಿಂದಿನ ಜೀವನವನ್ನು ನೋಡಿ ಅವಳು ದೇವರಿಗೆ ಭಕ್ತಿ ಹೊಂದಿದ್ದಾಳೋ ಇಲ್ಲವೋ ಮತ್ತು ನಾಗ ಸಾಧುವಾದ ನಂತರ ಅವಳು ಕಷ್ಟಕರವಾದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ನಾಗಾ ಸಾಧುವಾಗುವ ಮೊದಲು, ಮಹಿಳೆ ಜೀವಂತವಾಗಿರುವಾಗಲೇ ತನಗೆ ತಾನೇ ಪಿಂಡ ದಾನ ಮಾಡಬೇಕು ಮತ್ತು ತಲೆ ಬೋಳಿಸಿಕೊಳ್ಳಬೇಕು.
ಮಹಿಳಾ ನಾಗಾ ಸಾಧುಗಳು ಏನು ತಿನ್ನುತ್ತಾರೆ?
ಕ್ಷೌರದ ನಂತರ ನದಿಯಲ್ಲಿ ಸ್ನಾನ ಮಾಡಿಸಲಾಗುತ್ತದೆ. ನಂತರ ಮಹಿಳಾ ನಾಗಾ ಸಾಧು ಇಡೀ ದಿನ ದೇವರ ಹೆಸರನ್ನು ಜಪಿಸುತ್ತಾರೆ. ಪುರುಷರಂತೆ ಮಹಿಳಾ ನಾಗಾ ಸಾಧುಗಳು ಸಹ ಶಿವನನ್ನು ಪೂಜಿಸುತ್ತಾರೆ. ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದು ಶಿವನ ಹೆಸರನ್ನು ಜಪಿಸುತ್ತಾಳೆ. ಸಂಜೆ ದತ್ತಾತ್ರೇಯನನ್ನು ಪೂಜಿಸುತ್ತಾಳೆ. ಊಟದ ನಂತರ ಅವಳು ಮತ್ತೆ ಶಿವನನನ್ನು ಜಪಿಸುತ್ತಾಳೆ. ನಾಗಾ ಸಾಧುಗಳು ಹಣ್ಣುಗಳು, ಗಿಡಮೂಲಿಕೆಗಳು ಮತ್ತು ಹಲವು ಬಗೆಯ ಎಲೆಗಳನ್ನು ತಿನ್ನುತ್ತಾರೆ. ಮಹಿಳಾ ನಾಗಾ ಸಾಧುಗಳ ನಿವಾಸಕ್ಕಾಗಿ ಪ್ರತ್ಯೇಕ ಅಖಾಡಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಸೌಂದರ್ಯವೇ ಮುಳ್ಳಾಗಿ ಮನೆ ಸೇರಿದ ವೈರಲ್ ಬೆಡಗಿ : ಇದೀಗ ಈಕೆಯ ತಂಗಿಯೊಂದಿಗೂ ನಡೆಯಿತು ಈ ಘಟನೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.