ನವದೆಹಲಿ: iQOO Z6 Lite 5G ಇಂದಿನಿಂದ ಅಂದರೆ ಸೆಪ್ಟೆಂಬರ್ 14ರಿಂದ ಭಾರತೀಯ ಮಾರುಕಟ್ಟೆಗೆ ಎಂಟ್ರಿಯಾಗಿದೆ. ಇದು Snapdragon 4 Gen 1 ಚಿಪ್ಸೆಟ್ನಿಂದ ಚಾಲಿತವಾಗಿರುವ ವಿಶ್ವದ ಮೊದಲ ಸ್ಮಾರ್ಟ್ಫೋನ್ ಅನ್ನೋ ಹೆಗ್ಗಳಿಕೆ ಹೊಂದಿದೆ. ಇದು 120Hz LCD ಡಿಸ್ಪ್ಲೇ, 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾ ಮತ್ತು 18W ಚಾರ್ಜಿಂಗ್ ಬೆಂಬಲದೊಂದಿಗೆ ದೊಡ್ಡ ಬ್ಯಾಟರಿ ಜೊತೆಗೆ ಬಂದಿದೆ. ಇದರ ಬೆಲೆ ಕೇವಲ 13,999 ರೂ. ಆಗಿದ್ದು, ಸೆಪ್ಟೆಂಬರ್ 15ರವರೆಗೆ 11,499 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿರುತ್ತದೆ.
iQOO Z6 Lite 5Gನ ಬೆಲೆ
iQOO Z6 Lite 5G ಅಮೆಜಾನ್ ಇಂಡಿಯಾದಲ್ಲಿ ಮಧ್ಯಾಹ್ನ 12:15ರಿಂದ ಖರೀದಿಗೆ ಲಭ್ಯವಿದೆ. ಇದು ಸ್ಟೆಲ್ಲರ್ ಗ್ರೀನ್ ಮತ್ತು ಮಿಸ್ಟಿಕ್ ನೈಟ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. iQOO ಇಂಡಿಯಾದ ಆನ್ಲೈನ್ ಸ್ಟೋರ್ನಿಂದಲೂ ಹ್ಯಾಂಡ್ಸೆಟ್ ಖರೀದಿಸಬಹುದು. Z6 ಲೈಟ್ 2 ಕಾನ್ಫಿಗರೇಶನ್ಗಳಲ್ಲಿ ಬರುತ್ತದೆ. 4GB RAM + 64GB ಸ್ಟೋರೇಜ್ ಫೋನಿಗೆ 13,999 ರೂ. ಆದರೆ, 6GB RAM + 128GB ಸ್ಟೋರೇಜ್ ಹೊಂದಿರುವ ಫೋನಿಗೆ 15,499 ರೂ. ಬೆಲೆ ಇದೆ. Amazonನಲ್ಲಿ SBI ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ EMI ವಹಿವಾಟಿನ ಮೂಲಕ Z6 Lite ಖರೀದಿಸುವವರಿಗೆ 2,500 ರೂ. ರಿಯಾಯಿತಿ ಸಿಗುತ್ತದೆ. ಈ ಆಫರ್ನೊಂದಿಗೆ Z6 ಲೈಟ್ನ 2ರೂಪಾಂತರಗಳನ್ನು ಕ್ರಮವಾಗಿ 11,499 ರೂ. ಮತ್ತು 12,999 ರೂ.ಗೆ ಖರೀದಿಸಬಹುದು. ಈ ಕೊಡುಗೆಯು ಸೆಪ್ಟೆಂಬರ್ 15ರವರೆಗೆ ಮಾತ್ರ ಲಭ್ಯವಿರುತ್ತದೆ.
ಇದನ್ನೂ ಓದಿ: POCO M5: 700 ರೂ.ಗಿಂತ ಕಡಿಮೆ ಬೆಲೆಗೆ 50MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್ ಖರೀದಿಸಿ!
iQOO Z6 Lite 5G ವೈಶಿಷ್ಟ್ಯಗಳು
iQOO Z6 Lite 5G ಸ್ಮಾರ್ಟ್ಫೋನ್ 6.58-ಇಂಚಿನ IPS LCD FHD+ ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡುತ್ತದೆ. 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾ ಮತ್ತು 50-ಮೆಗಾಪಿಕ್ಸೆಲ್ (ಮುಖ್ಯ) + 2-ಮೆಗಾಪಿಕ್ಸೆಲ್ (ಮ್ಯಾಕ್ರೋ) ಡ್ಯುಯಲ್-ಕ್ಯಾಮೆರಾ ಸೆಟಪ್ ಇದೆ.
iQOO Z6 Lite 5G ಬ್ಯಾಟರಿ
ಇದು FunTouch OS UI ಜೊತೆಗೆ Android 12 OSನಲ್ಲಿ ಕಾರ್ಯನಿರ್ವಹಿಸುತ್ತದೆ. Z6 ಲೈಟ್ನ 5,000mAh ಬ್ಯಾಟರಿ USB-C ಪೋರ್ಟ್ ಮೂಲಕ 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಭದ್ರತೆಗಾಗಿ ಇದು ಸೈಡ್-ಫೇಸಿಂಗ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿದೆ. Snapdragon 4 Gen 1-ಚಾಲಿತ ಸಾಧನವು 6GB RAM ಮತ್ತು 128GBವರೆಗೆ ಸ್ಟೋರೇಜ್ ನೀಡುತ್ತದೆ.
ಇದನ್ನೂ ಓದಿ: ಇದ್ದಕ್ಕಿದ್ದಂತೆ ಕಡಿಮೆಯಾದ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಬೆಲೆ.! ಹೊಸ ಬೆಲೆ ಕೇಳಿ ಗ್ರಾಹಕರು ಫುಲ್ ಖುಷ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.