ಬೆಂಗಳೂರು: ಏನ್ ಗುರು ನಮ್ಗೆ ಯಾರ್ ಬೀಳ್ತಾರೆ.. ಅಂತ ಅದೇಷ್ಟೋ ಹುಡುಗರು ಸಿಂಗಲ್ ಆಗಿ ಇರ್ತಾರೆ. ಡೋಂಟ್ ವರಿ ಬಾಯ್ಸ್ ನಾವು ನಿಮ್ಗೆ ಒಂದಿಷ್ಟು ಟಿಪ್ಸ್ ಕೋಡ್ತೀವಿ ನೀವೇನಾದ್ರೂ ಈ ರೀತಿ ಮಾಡಿದ್ರೆ... ಲವ್ ಆಗೋದಂತೂ ಖಂಡಿತ, ಇಲ್ಲವೇ ನೀವೇ ಅವರ ಕ್ರಷ್ ಆದ್ರೂ ಆಗ್ತೀರಾ.
ಹೌದು.. ಪ್ರೀತಿ ಒಂದು ಸುಂದರ ಅನುಭವ, ಒಂಟಿ ಜೀವನ ಬಾಳಿನ ಭರವಸೆಯನ್ನು ಕುಗ್ಗಿಸುತ್ತೆ. ಅಲ್ಲದೆ ನಮ್ಗೆ ಇಷ್ಟವಾಗುವ ಬಾಳ ಸಂಗಾತಿ ಸಿಗೋದು ಇಂದಿನ ದಿನಗಳಲ್ಲಿ ಕಷ್ಟ. ಅದಕ್ಕಾಗಿ ಇಂದಿನ ಯುವಜನತೆ ಲವ್ ಮ್ಯಾರೇಜ್, ಲಿವಿಂಗ್ ಟುಗೆದರ್ ನಂತಹ ಹೊಸ ಸಂಪ್ರದಾಯದ ಮೊರೆ ಹೋಗ್ತೀದಾರೆ. ಅದು ಏನೇ ಇರಲಿ ಬಿಡಿ. ನಿಮಗ್ಗೆ ಯಾರದ್ದೋ ಮೇಲೆ ಕ್ರಷ್ ಇದ್ದು, ಆ ಹುಡುಗಿನಾ ಇಂಪ್ರೇಸ್ ಮಾಡಿ ಸಾಕಾಗಿದ್ರೆ ಕೊರಗಬೇಡಿ. ಜಸ್ಟ್ ಈ ಟಿಪ್ಸ್‌ಗಳನ್ನ ಫಾಲೋ ಮಾಡಿ ಸಾಕು.
ಗೌರವನೀಡಿ
ಎಸ್ ಮೊದಲು ಹೆಚ್ಚಿನ ಹೆಣ್ಮಕ್ಕಳು ತಮಗೆ ಗೌರವ ನೀಡುವವರನ್ನು ತುಂಬಾ ಇಷ್ಟ ಪಡ್ತಾರೆ. ಇದು ಹುಡುಗಿನಾ ಇಂಪ್ರೇಸ್ ಮಾಡುವ ಲಿಸ್ಟ್‌ನಲ್ಲಿ ಫಸ್ಟ್ ಪಾಯಿಂಟ್. ಸಂಬಂಧದಲ್ಲಿ ಪ್ರೀತಿ ಇದ್ದರೆ ಅಲ್ಲಿ ಗೌರವ ಕೂಡಾ ಇರಬೇಕು. ಆದ್ದರಿಂದ, ಸಾಧ್ಯವಾದಷ್ಟು, ಆಕೆಯ ಭಾವನೆಗಳನ್ನು, ನಿರ್ಧಾರಗಳನ್ನು ಗೌರವಿಸಿ.
ಇದನ್ನೂ ಓದಿ: ಅಬ್ಬಬ್ಬಾ…ಇಷ್ಟೊಂದು ಅಗ್ಗದ ಬೆಲೆಗೆ Honda ಕಾರುಗಳ ಮಾರಾಟ: ಇಂದೇ ಖರೀದಿಸಿ ನಿಮ್ಮ ನೆಚ್ಚಿನ ವಾಹನ
ಆಕೆ ಇಷ್ಟಪಡುವುದನ್ನು ಮಾಡಿ
ಹುಡುಗಿರು ತುಂಬಾ ಹಠಮಾರಿ, ಅವರ ಜೊತೆ ಮಾತ್ರ ವಾದಕ್ಕೆ ಇಳಿಬೇಡಿ. ಅದಕ್ಕಾಗಿ ನಿಮಗೆ ಕಷ್ಟವಾದ್ರೂ ಪರವಾಗಿಲ್ಲ ಅವಳಿಗೆ ಇಷ್ಟವಾದದ್ದನ್ನು ಮಾಡಿ. ಶಾಪಿಂಗ್ ಇಷ್ಟವಾದರೆ ಆಕೆಯೊಂದಿಗೆ ನೀವೂ ಶಾಪಿಂಗ್‌ಗೆ ಹೋಗಿ. ಮ್ಯೂಸಿಕ್ ಕೇಳಲು ಬೀಡಿ. ಆಕೆ ಇಷ್ಟಪಡುವುದನ್ನೇ ಮಾಡಿ. ಅವಳ ಇಷ್ಟ ಕಷ್ಟಗಳಿಗೆ ಬೆಲೆ ಕೊಡಿ. ಇಲ್ಲಾ ಅಂದ್ರೆ ಇರಿಟೇಟ್ ಫೆಲೋ ಅಂತ ಗುಡ್ ಬೈ ಹೇಳ್ತಾರೆ ಹುಷಾರು.
ಹೇರ್ ಸ್ಟೈಲ್
ಅದೇಷ್ಟೋ ಹುಡುಗಿಯರಿಗೆ ಹುಡುಗರು ಗಡ್ಡ ಬಿಟ್ಟರೆ ತುಂಬಾ ಇಷ್ಟ ಆಗ್ತಾರೆ. ಹಾಗಂತ ಹುಚ್ಚರ ಹಾಗೆ ಗಡ್ಡ ಬಿಡ್ಬೇಡಿ ನೀಟಾಗಿ ಶೇಪ್ ಮಾಡಿಸಿ, ನೋಡಿದ್ರೆ ಆಕರ್ಷಿತರಾಗ್ಬೇಕು. ಇನ್ನು ಸ್ವಲ್ಪ ಹುಡುಗಿಯರು ಉದ್ದ ಕೂದಲು ಬಿಟ್ಟ ಹುಡುಗರನ್ನ ಇಷ್ಟ ಪಡ್ತಾರೆ. ಇವಾಗಂತೂ ಸಾಧು ಸಂತರ ಲೆವೆಲ್‌ಗೆ ಬಾಯ್ಸ್ ಗಡ್ಡ ಮತ್ತು ಕೂದಲು ಬಿಡ್ತಾರೆ ಬಿಡಿ ಅದರಲ್ಲೇನಿದೆ. ಮುಖ್ಯವಾದ ವಿಚಾರ ಅಂದ್ರೆ ಡ್ಯಾಂಡ್ರಫ್ ಆಗದೆ ಇರೋ ತರ ನೋಡ್ಕೋಳ್ಳಿ. ಹಾಗೇ ಉಗುರುಗಳನ್ನ ಕಟ್ ಮಾಡಿ
ಗುಡ್ ಡ್ರೆಸ್ಸಿಂಗ್
ಹುಡುಗಿಯನ್ನ ಇಂಪ್ರೇಸ್ ಮಾಡೋಕೆ ಡ್ರೆಸ್ಸಿಂಗ್ ಸೆನ್ಸ್ ತುಂಬಾ ಮುಖ್ಯ. ಆಕಾರ ವಿಕಾರವಾಗಿ ಅವಳ ಮುಂದೆ ಹೋಗಿ ನಿಂತ್ರೆ ಬಿಕ್ಷುಕ ಇಲ್ಲಾ ರೌಡಿ ಅಂತ ಅನ್ಕೋಬಾರದು ಅಲ್ವಾ.. ಅದಕ್ಕಾಗಿ ಆಕರ್ಷಕವಾದ ಡ್ರೆಸ್ ಸೆನ್ಸ್ ಹೊಂದಿರಬೇಕು. ಏಕೆಂದರೆ ಅನೇಕ ಹುಡುಗಿಯರು ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಮೂಲಕ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ. ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಸ್ವಲ್ಪ ಗಮನ ಕೊಡಿ.
ಇದನ್ನೂ ಓದಿ: Ganeshotsava: ಇಂದು ರಾಜಧಾನಿ ಬೆಂಗಳೂರಿನ ಈ ರಸ್ತೆಗಳು ಬಂದ್!
ಫಿಟ್ನೆಸ್
ಸಿಕ್ಸ್ ಪ್ಯಾಕ್ ಇಲ್ಲಾ ಅಂದ್ರೂ ಚಿಂತೆ ಇಲ್ಲ ಆದ್ರೆ ಡೊಳ್ಳು ಹೊಟ್ಟೆ ಮಾತ್ರ ಇರ್ಬಾದು, ಯಾಕಂದ್ರೆ ಹುಡುಗಿ ಒಬ್ಬ ಹುಡುಗನಲ್ಲಿ ಗಮನಿಸುವ ಮೊದಲ ವಿಷಯವೇ ನೀವು ಫಿಟ್ ಆಗಿದ್ದಿರಾ.. ಇಲ್ಲವೇ.. ಅಂತ. ಅದಕ್ಕಾಗಿ ವ್ಯಾಯಾಮ, ಯೋಗ, ಈಜುವುದರಿಂದ ದೇಹವನ್ನು ಸಧೃಡವಾಗಿ ಇಟ್ಟುಕೊಳ್ಳಿ. ಫಿಟ್ ಆಂಡ್ ಪೈನ್ ಹುಡುಗರು ಅಂದ್ರೆ ಹುಡುಗಿಯರಿಗೆ ತುಂಬಾ ಇಷ್ಟ.
ಜಂಟಲ್ ಮ್ಯಾನ್
ಹುಡುಗಿ ತನ್ನ ಬಾಯ್ ಫ್ರೆಂಡ್ ಸದಾ ಕಾಲ ಶಾಂತ ಸ್ವಭಾದವನಾಗಿರಬೇಕು ಅಂತ ಇಷ್ಟಪಡ್ತಾಳೆ. ಅದಕ್ಕಾಗಿ ಆಕೆಯ ಮೇಲೆ ಕೋಪ ಮಾಡಿಕೊಳ್ಳದೆ ಮುದ್ದು ಮುದ್ದಾದ ಮಾತುಗಳಿಂದ ಅವಳು ನಗುವಂತೆ ಮಾಡಿ. ಅಲ್ಲದೆ ಅವಳ ಮಾತನ್ನು ಕೇಳುವಂತಹ ಸಹನೆ ಹಾಗೂ ತಾಳ್ಮೆ ನಿಮ್ಮಲ್ಲಿ ಇದ್ರೆ ತುಂಬಾ ಒಳ್ಳೆಯದು.
ಇಂಪ್ರೆಸ್‌ಗೂ ಮುನ್ನ ಪ್ರಿಪರೇಶನ್ ಇರಲಿ
ಇಷ್ಟೇಲ್ಲಾ ಹೇಳಿದಾರೆ ಅಂತ ಬ್ರಾಂಡೆಡ್ ಬಟ್ಟೆ ಹಾಕ್ಕೊಂಡು ಟ್ಯಾಗ್ಸ್ ತೋರಿಸಿ ಇಂಪ್ರೇಸ್ ಮಾಡೋಕೆ ಹೋಗ್ಬೇಡಿ. ಸಿಂಪಲ್ ಅಂಡ್ ಸ್ಮಾರ್ಟ್ ಆಗಿರುವ ಡ್ರೆಸ್ ಧರಿಸಿ ಆಕೆಯ ಜತೆ ಕಂಫರ್ಟ್ ಆಗಿ ಮಾತನಾಡಿ, ಅವಳು ನಿಮ್ಮ ಪ್ರತಿ ಮಾತನ್ನು ಇಷ್ಟಪಟ್ಟು ನಗುತ್ತಾ ಕೇಳುವಂತಿರಬೇಕು. ನೀವು ಅವಳ ಜೊತೆ ಮಾತನಾಡುವ ಆ ಸಮಯ ಯಾಕಾದ್ರೂ ವೇಗವಾಗಿ ಹೋಗುತ್ತಿದೆ ಅಂತ ಅವಳು ಬೇಜಾರಾಗ್ಬೇಕು ಹಾಗೆ ಮಾತನಾಡಿ. ಹಾಗೇ ಅವಳ ಮಾತನ್ನು ನಿಧಾನವಾಗಿ ಕೇಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.