ಸ್ತ್ರೀರೂಪದ ಗಣೇಶನ ಬಗ್ಗೆ ನಿಮಗೆಷ್ಟು ಗೊತ್ತು?

       

Last Updated : Sep 13, 2018, 01:48 PM IST
ಸ್ತ್ರೀರೂಪದ ಗಣೇಶನ ಬಗ್ಗೆ ನಿಮಗೆಷ್ಟು ಗೊತ್ತು? title=
Photo:WIKIPEDIA

ಭಾರತೀಯ ಪುರಾಣ ಪರಂಪರೆಗಳಲ್ಲಿ ಗಣೇಶನಿಗೆ ಅತಿ ಮಹತ್ವದ ಸ್ಥಾನವಿದೆ.ಅದರಲ್ಲೂ ಗಣೇಶ ಚತುರ್ಥಿ ಬಂದರೆ ಸಾಕು ಇಡೀ ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.ಈ ಹಬ್ಬ ಅದರಲ್ಲೂ ಮಹಾರಾಷ್ಟ್ರದಲ್ಲಿ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಈ ಹಬ್ಬವನ್ನು ಜನಪ್ರಿಯಗೊಳಿಸಿದರು.ಈ ಪ್ರಭಾವದಿಂದಾಗಿ ಗಣೇಶನ ಹಬ್ಬ ಇಂದಿಗೂ ಮಹಾರಾಷ್ಟ್ರದಲ್ಲಿ ಕೂಡ ವಿಜ್ರಂಭಣೆಯಿಂದ ನಡೆಯುತ್ತದೆ.

ಸಾಮಾನ್ಯವಾಗಿ ನೀವೆಲ್ಲ ಗಣಪನನ್ನು ಪುರುಷ ರೂಪದಲ್ಲಿ ಆರಾಧನೆ ಮಾಡುವುದನ್ನು ಹಾಗೂ ಪೂಜಿಸುವುದನ್ನು ನೋಡಿದ್ದೇವೆ.ಆದರೆ ಈಗ ಇಲ್ಲಿ ನಾವು ಈಗ ಹೇಳ ಹೊರಟಿರುವುದು ಸ್ತ್ರೀರೂಪದ ಗಣಪನ ಬಗ್ಗೆ. ಹೌದು ಸ್ತ್ರೀ ರೂಪದ ಗಣಪನನ್ನು ಸ್ತ್ರೀ ಗಣೇಶ, ವೈನಾಯಕಿ,ವಿಘ್ನೇಶ್ವರಿ,ಗಣೇಶನಿ ಎಂದು ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ.

ವಿನಾಯಕಿಯು 64 ಯೋಗಿನಿ ಮಾತ್ರಿಕಾ ದೇವತೆಗಲ್ಲಿ ಒಬ್ಬಳು.ಜೈನ ಮತ್ತು ಬೌದ್ದ ಪರಂಪರೆಯಲ್ಲಿ ವಿನಾಯಕಿಯನ್ನು ಗಣಪತಿರಿದಾಯ ಎಂದು ಕರೆಯಲಾಗುತ್ತದೆ.ಸ್ತ್ರೀ ರೂಪದ ವಿನಾಯಕಿ ಕ್ರಿ.ಪೂ 1ನೇ ಶತಮಾನದಲ್ಲಿ ಮೊದಲ ಬಾರಿಗೆ ರಾಜಸ್ಥಾನದ ರೈರ್ಹ್ನಲ್ಲಿ ಕಂಡು ಬಂದಿತು. ವಿನಾಯಕಿ ಮೂರ್ತಿಯಲ್ಲೇ ಅತಿ ಪ್ರಸಿದ್ದವಾದ ಶಿಲ್ಪವೆಂದರೆ ನಲವೊತ್ತೊಂದು ಯೋಗಿನಿಯರಲ್ಲಿ ಒಬ್ಬಳಾದ ಚೌಸಾತ್ ಯೋಗಿಣಿ ಮಧ್ಯಪ್ರದೇಶದ ಬೇದಾಘಾಟನಲ್ಲಿದೆ.

ಪುರಾಣಗಳ ಪ್ರಕಾರ ಆನೆಯ ರೂಪವನ್ನು ಹೊಂದಿರುವ ಗಣಪನ ಪ್ರಸ್ತಾವ ಪುರಾಣಗಳಲ್ಲಿ ಕಂಡುಬರುತ್ತದೆ.ಅಲ್ಲಿ ಗಣೇಶನ ಜನ್ಮದ ಕುರಿತಾದ ವಿವರಣೆ ಇದೆ.ಮಾಲಿನಿಯು ಪಾರ್ವತಿಯ ಸ್ನಾನ ಮಾಡಿದ ನೀರನ್ನು ಕುಡಿದು ಗಣೇಶನಿಗೆ ಜನ್ಮನಿಡುತ್ತಾಳೆ.ಇನ್ನು ಸ್ಕಂದಪುರಾಣದಲ್ಲಿ ಲಕ್ಷ್ಮಿಯು ಬ್ರಹ್ನನ ಕಿರುಕುಳವನ್ನು ತಪ್ಪಿಸಲು ಗಣೇಶನಿಗೆ ಜನ್ಮನಿಡುತ್ತಾಳೆ. ಇನ್ನು ವಾಯು ಪುರಾಣ, ಹರಿವಂಶದ ಪ್ರಕಾರ ಗಣಪನ್ನು ಮಾತ್ರಿಕಳು ಎಂದು ಕರೆಯಲಾಗುತ್ತದೆ. 

Trending News