8 ಬ್ಯಾಂಕುಗಳ ಮೇಲೆ ಲಕ್ಷ ಲಕ್ಷ ದಂಡ ವಿಧಿಸಿದ RBI: ನಿಮ್ಮ ಖಾತೆಯೂ ಇಲ್ಲಿದೆಯೇ?

ಆರ್‌ಬಿಐ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ, ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್‌ಗೆ ಗರಿಷ್ಠ 55 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ ಎಂದು ಅದು ಹೇಳಿದೆ.ಆರ್‌ಬಿಐ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ, ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್‌ಗೆ ಗರಿಷ್ಠ 55 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ ಎಂದು ಅದು ಹೇಳಿದೆ.

Written by - Bhavishya Shetty | Last Updated : Aug 30, 2022, 08:34 AM IST
    • ಎಂಟು ಸಹಕಾರಿ ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ವಿಧಿಸಿದೆ.
    • ಆರ್‌ಬಿಐ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡಿದ ಸಂಸ್ಥೆ
    • ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್‌ಗೆ ಗರಿಷ್ಠ 55 ಲಕ್ಷ ರೂ.ಗಳ ದಂಡ
8 ಬ್ಯಾಂಕುಗಳ ಮೇಲೆ ಲಕ್ಷ ಲಕ್ಷ ದಂಡ ವಿಧಿಸಿದ RBI: ನಿಮ್ಮ ಖಾತೆಯೂ ಇಲ್ಲಿದೆಯೇ?  title=
RBI Penalty On Banks

ನಿಯಮಗಳ ಅನುಸರಣೆಯಲ್ಲಿ ಲೋಪಗಳನ್ನು ಕಂಡುಬಂದ ಹಿನ್ನೆಲೆಯಲ್ಲಿ ಎಂಟು ಸಹಕಾರಿ ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದಂಡ ವಿಧಿಸಿದೆ. ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್‌ಗೆ ಗರಿಷ್ಠ 55 ಲಕ್ಷ ದಂಡ ವಿಧಿಸಲಾಗಿದೆ. ಕೇಂದ್ರ ಬ್ಯಾಂಕ್‌ನಿಂದ ಹೇಳಿಕೆ ನೀಡುವ ಮೂಲಕ 8 ಬ್ಯಾಂಕ್‌ಗಳಿಗೆ ದಂಡ ವಿಧಿಸಿದೆ ಎಂದು ತಿಳಿಸಲಾಗಿದೆ.

ಆರ್‌ಬಿಐ ಪರವಾಗಿ ಹಲವಾರು ಹೇಳಿಕೆಗಳನ್ನು ನೀಡುವ ಮೂಲಕ, ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್‌ಗೆ ಗರಿಷ್ಠ 55 ಲಕ್ಷ ರೂ.ಗಳ ದಂಡವನ್ನು ವಿಧಿಸಿದೆ ಎಂದು ಅದು ಹೇಳಿದೆ. 

ಇದನ್ನೂ ಓದಿ: ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದ ಕೆಎಂಎಫ್..!

ಇದಲ್ಲದೇ, ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ತಮಿಳುನಾಡಿನ ತಿರುಚಿರಾಪಳ್ಳಿಯ ಕೈಲಾಸಪುರಂನ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 10 ಲಕ್ಷ ರೂ., ಕೇರಳದ ಒಟ್ಟಪಾಲಂ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್‌ನಲ್ಲಿ 5 ಲಕ್ಷ ರೂ. ದರುಸ್ಸಲಾಮ್ ಕೋ-ಆಪರೇಟಿವ್, ಹೈದರಾಬಾದ್ ಅರ್ಬನ್ ಬ್ಯಾಂಕ್‌ಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ.

ನೆಲ್ಲೂರು ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಗಾಂಧಿನಗರ, ಕಾಕಿನಾಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್ ಕಾಕಿನಾಡ ಎರಡಕ್ಕೂ ತಲಾ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರಪಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ಗೆ 1 ಲಕ್ಷ ರೂ., ಉತ್ತರ ಪ್ರದೇಶದ ಪ್ರತಾಪಗಢದ ನ್ಯಾಷನಲ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 5 ಲಕ್ಷ ರೂ. ದಂಡ ವಿಧಿಸಲಾಗಿದೆ. 

ಇದನ್ನೂ ಓದಿ: ದೇಶದ ರೈತರಿಗೊಂದು ಸಂತಸದ ಸುದ್ದಿ, ಕೇಂದ್ರ ಸರ್ಕಾರದಿಂದ ರೈತರಿಗೆ 3 ಲಕ್ಷ ಧನಸಹಾಯ

ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ, ವಸತಿ ಯೋಜನೆಗಳ ಒದಗಿಸುವಿಕೆ ಮತ್ತು ಹಣಕಾಸು ವಿಚಾರಗಳಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿಶಾಖಪಟ್ಟಣಂನ ವಿಶಾಖಪಟ್ಟಣಂ ಸಹಕಾರಿ ಬ್ಯಾಂಕ್‌ಗೆ ಈ ದಂಡವನ್ನು ವಿಧಿಸಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ ಬ್ಯಾಂಕ್‌ಗಳ ನಿರ್ಲಕ್ಷ್ಯಕ್ಕೆ ದಂಡ ವಿಧಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಇನ್ನು ಈ ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ತಮ್ಮ ಗ್ರಾಹಕರೊಂದಿಗೆ ಮಾಡಿಕೊಂಡ ಯಾವುದೇ ವಹಿವಾಟು ಅಥವಾ ಒಪ್ಪಂದ ಮೇಲೆ ಪರಿಣಾಮ ಬೀರುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News