ಸ್ಟೇರ್ಲೈಟ್ ಪ್ಲಾಂಟ್ : ತುರ್ತು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್ ಮಂಗಳವಾರದಂದು ತಮಿಳುನಾಡು ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ವೇದಾಂತ ಗ್ರೂಪ್ ಗೆ ಸ್ಥಗೀತಗೊಂಡಿರುವ ಮುಖ್ಯ ಸ್ಟೇರ್ಲೈಟ್ ತಾಮ್ರ ಘಟಕವನ್ನು ನಿರ್ವಹಿಸಲು ನೀಡಿರುವ ಅವಕಾಶವನ್ನು ಪ್ರಶ್ನಿಸಿ ತುರ್ತು ಅರ್ಜಿ ವಿಚಾರಣೆ ನಡೆಸಲು ಕೋರಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ.

Last Updated : Sep 4, 2018, 03:03 PM IST
ಸ್ಟೇರ್ಲೈಟ್ ಪ್ಲಾಂಟ್ : ತುರ್ತು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್ title=

ನವದೆಹಲಿ: ಸುಪ್ರೀಂಕೋರ್ಟ್ ಮಂಗಳವಾರದಂದು ತಮಿಳುನಾಡು ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ವೇದಾಂತ ಗ್ರೂಪ್ ಗೆ ಸ್ಥಗೀತಗೊಂಡಿರುವ ಮುಖ್ಯ ಸ್ಟೇರ್ಲೈಟ್ ತಾಮ್ರ ಘಟಕವನ್ನು ನಿರ್ವಹಿಸಲು ನೀಡಿರುವ ಅವಕಾಶವನ್ನು ಪ್ರಶ್ನಿಸಿ ತುರ್ತು ಅರ್ಜಿ ವಿಚಾರಣೆ ನಡೆಸಲು ಕೋರಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ,ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಈ ಅರ್ಜಿ ವಿಚಾರಣೆಯನ್ನು ಮುಂದಿನ ವಾರ ನಡೆಸಲಿದೆ ಎಂದು ಹೇಳಿದೆ. 

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಗಸ್ಟ್ 9 ರಂದು  ವೇದಾಂತ್ ಗ್ರೂಪ್ ಗೆ ಸ್ಟೇರ್ಲೈಟ್ ತಾಮ್ರ ಘಟಕ ನಿರ್ವಹಿಸಲು ಅವಕಾಶ ನೀಡಿತ್ತು,ಆಗ ಅದು ಈ ಘಟಕದ ನಿರ್ವಹಣೆಗೆ ಯಾವುದೇ ರೀತಿಯ ಪರಿಸರ ಹಾನಿಯಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.ಅಲ್ಲದೆ ನ್ಯಾಯಾಧಿಕರಣ ಇನ್ನು ಮುಂದುವರೆದು ಈ ಪ್ಲಾಂಟ್ ಸ್ಥಗೀತಗೊಂಡಿರುತ್ತದೆ ಕಂಪನಿಗೆ ಉತ್ಪಾದನೆ ಘಟಕದ ನಿರ್ವಹಣೆ ನಿಡುವ ವಿಚಾರವನ್ನು  ಜಿಲ್ಲಾಧಿಕಾರಿಗಳು ತೀರ್ಮಾನಿಸಬೇಕು ಎಂದು ಎನ್ಜಿಟಿ ತಿಳಿಸಿತ್ತು.

ಈಗ ಈ ಎನ್ಜಿಟಿ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಅಗಸ್ಟ್ 14 ರಂದು ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದೆ 

 

Trending News