Loan on Aadhaar Card : ಮೋದಿ ಸರಕಾರ ದೇಶವಾಸಿಗಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳಲ್ಲಿ ವಿದ್ಯಾರ್ಥಿಗಳಿಂದ ಉದ್ಯೋಗಿಗಳವರೆಗೂ ಮತ್ತು ರೈತರಿಂದ ಉದ್ಯಮಿಗಳವರೆಗೂ ಕಾಳಜಿ ವಹಿಸಲಾಗಿದೆ. ಉದ್ಯಮವನ್ನು ಉತ್ತೇಜಿಸಲು, ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಸಾಲವನ್ನು ಪ್ರಾರಂಭಿಸಿತು. ಇದರ ಹೊರತಾಗಿಯೂ, ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಜನರನ್ನು ವಂಚಿಸುವ ಕಾರ್ಯಕ್ಕೆ ಕೆಲವರು ಕೈ ಹಾಕಿದ್ದಾರೆ.
ಏನಿದು ವೈರಲ್ ಪೋಸ್ಟ್ :
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ನಲ್ಲಿ ಕೇಂದ್ರ ಸರ್ಕಾರದ ಹೆಸರಲ್ಲಿ ನೀಡಲಾಗುವ ಸಾಲ ಯೋಜನೆಯ ಬಗ್ಗೆ ಹೇಳಲಾಗುತ್ತಿದೆ. ಆಧಾರ್ ಕಾರ್ಡ್ ಹೊಂದಿರುವ ಎಲ್ಲಾ ನಾಗರಿಕರಿಗೆ ಕೇಂದ್ರ ಸರ್ಕಾರವು ಸುಲಭವಾಗಿ ಸಾಲವನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಜನರಿಗೆ ಆಧಾರ್ ಕಾರ್ಡ್ ಮೂಲಕ 4.78 ಲಕ್ಷ ಸಾಲ ನೀಡಬಹುದು ಎಂದು ಕೂಡಾ ಹೇಳಲಾಗುತ್ತಿದೆ.
ಇದನ್ನೂ ಓದಿ : Gold Price Today : ಎರಡು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ , ಬೆಳ್ಳಿ ಕೂಡಾ ಅಗ್ಗ
ಸರ್ಕಾರ ಬಯಲು ಮಾಡಿದೆ ಸತ್ಯ :
ವೈರಲ್ ಪೋಸ್ಟ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ, ಈ ವೈರಲ್ ಪೋಸ್ಟ್ ನಲ್ಲಿ ಹೇಳಲಾದ ವಿಚಾರಗಳು ಸಂಪೂರ್ಣ ಸುಳ್ಳು ಎಂದು ಪಿಐಬಿ ಹೇಳಿದೆ. ಅಂತಹ ಯಾವುದೇ ಸಾಲವನ್ನು ಸರ್ಕಾರ ನೀಡುತ್ತಿಲ್ಲ. ಅಲ್ಲದೆ, ಇಂತಹ ನಕಲಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಜನರಿಗೆ ಪಿಐಬಿ ಸಲಹೆ ನೀಡಿದೆ. ಸರ್ಕಾರದ ಯೋಜನೆಯ ನೆಪದಲ್ಲಿ ಕಿಡಿಗೇಡಿಗಳು ಜನರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಮೂಲಕ ಬ್ಯಾಂಕ್ ಖಾತೆಗಳಿಗೆ ಸುಲಭವಾಗಿ ಕನ್ನ ಹಾಕಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
It is being claimed that the central government is providing a loan of ₹4,78,000 to all Aadhar card owners#PibFactCheck
▶️ This claim is #fake
▶️ Do not forward such messages
▶️ Never share your personal/financial details with anyone pic.twitter.com/U5gbE3hCLD
— PIB Fact Check (@PIBFactCheck) August 16, 2022
ಇದಕ್ಕೂ ಮುನ್ನ ವಾಟ್ಸಾಪ್ನಲ್ಲಿ ವೈರಲ್ ಆದ ಸಂದೇಶವೊಂದು ಪ್ರಧಾನ ಮಂತ್ರಿ ಬೇರೋಜ್ಗರಿ ಭತ್ಯೆ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 6,000 ರೂ. ನೀಡುವುದು ಎಂದು ಹೇಳಾಗಿತ್ತು. ಅಷ್ಟೇ ಅಲ್ಲ, ಯೋಜನೆಗೆ ನೋಂದಣಿ ಆರಂಭವಾಗಿದೆ ಎಂದು ಕೂಡಾ ಸಂದೇಶದಲ್ಲಿ ಹೇಳಲಾಗಿದೆ. ಆದರೆ ಇದನ್ನು ಪಿಐಬಿ ಪರಿಶೀಲಿಸಿದಾಗ, ಈ ಸುದ್ದಿ ಸಂಪೂರ್ಣವಾಗಿ ನಕಲಿ ಎನ್ನುವುದು ತಿಳಿದು ಬಂದಿತ್ತು. ಆದ್ದರಿಂದ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು , ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದು ಬಹಳ ಮುಖ್ಯವಾಗಿರುತ್ತದೆ.
ಇದನ್ನೂ ಓದಿ : Best Bikes: 100 ಕಿ.ಮೀಗೂ ಅಧಿಕ ಮೈಲೇಜ್ ನೀಡುವ ಈ ಬೈಕ್ ಖರೀದಿಸಿ ಮಜಾ ಮಾಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.