ಬೆಂಗಳೂರು : ಕೆಲವರಿಗೆ ಮೊಸರು ಇಲ್ಲದೆ ಹೋದರೆ ಭೋಜನ ಪೂರ್ಣವಾದಂತೆ ಆಗುವುದಿಲ್ಲ. ಮೊಸರನ್ನು ಕೇವಲ ರುಚಿಗಾಗಿ ಮಾತ್ರವಲ್ಲ , ಆರೋಗ್ಯ ದೃಷ್ಟಿಯಿಂದಲೂ ಸೇವಿಸಲಾಗುತ್ತದೆ. ಯಾಕೆಂದರೆ ಮೊಸರು ಅನೇಕ ಆರೋಗ್ಯ ಸಮಸ್ಯೆಗಳಿಂದ ದೇಹವನ್ನು ಕಾಪಾಡುತ್ತದೆ. ಆದರೆ ಮೊಸರು ಸೇವಿಸುವಾಗ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊಸರು ತಿಂದ ನಂತರ ಅಥವಾ ಮೊಸರಿನ ಜೊತೆಗೆ ಕೆಲವು ಪದಾರ್ಥಗಳನ್ನು ಸೇವಿಸಬಾರದು. ಹಾಗೊಮ್ಮೆ ಸೇವಿಸಿದರೆ ಆರೋಗ್ಯ ಬಿಗಡಾಯಿಸಲು ಆರಂಭವಾಗುತ್ತದೆ.
ಮೊಸರಿನ ಜೊತೆಗೆ ಅಥವಾ ಮೊಸರು ತಿಂದ ನಂತರ ತಪ್ಪಿಯೂ ಈ ವಸ್ತುಗಳನ್ನು ತಿನ್ನಬಾರದು :
1. ಮೊಸರು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಹಾಗಾಗಿ ಮೊಸರಿನ ಜೊತೆಗೆ ಬಿಸಿ ಪ್ರಭಾವ ಬೀರುವ ಪದಾರ್ಥಗಳನ್ನು ಸೇವಿಸಬಾರದು. ಹೀಗಾದಾಗ ದೇಹದಲ್ಲಿ ಶೀತ ಮತ್ತು ಬಿಸಿಯ ಸಮಸ್ಯೆ ಇರುತ್ತದೆ.
ಇದನ್ನೂ ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವಿಸುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
2. ಮೊಸರು ತಿಂದ ನಂತರ ಕರಿದ ಆಹಾರವನ್ನು ಸೇವಿಸಬಾರದು. ಮೊಸರು ಸೇವಿಸಿದ ನಂತರ ಕರಿದ ಆಹಾರವನ್ನು ಸೇವಿಸಿದರೆ, ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಜೀರ್ಣಕ್ರಿಯೆಯ ವೇಗದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
3. ಮೊಸರಿನ ಜೊತೆಗೆ ಅಥವ ಮೊಸರು ತಿಂದ ನಂತರ ಈರುಳ್ಳಿಯನ್ನು ಸೇವಿಸಬಾರದು. ಸಾಮಾನ್ಯವಾಗಿ ಮೊಸರು ತಿಂದ ಬಳಿಕ ಸಲಾಡ್ ರೂಪದಲ್ಲಿ ಈರುಳ್ಳಿಯನ್ನು ಸೇವಿಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಜನರು ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಾಗಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡಾ ಎದುರಾಗಬಹುದು. ಹೊಟ್ಟೆ ನೋವು, ವಾಯು ಅಥವಾ ಅತಿಸಾರ, ವಾಂತಿ ಇತ್ಯಾದಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ : Heart Attack: ಈ ಒಂದೇ ಒಂದು ಟೆಸ್ಟ್ ನಿಂದ ಹೃದ್ರೋಗಗಳನ್ನು ಮೊದಲೇ ಪತ್ತೆಹಚ್ಚಬಹುದು
4. ಮೊಸರಿನ ಜೊತೆಗೆ ಉಪ್ಪಿನಕಾಯಿಯನ್ನು ಸೇವಿಸಬಾರದು. ಇದರಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.