ಬೆಂಗಳೂರು: ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ, ವಾಟ್ಸಾಪ್ ಮುಖಾಂತರ ಗ್ರೂಪ್ ರಚಿಸಿ ಜಿಹಾದ್ ಗೆ (ಧರ್ಮ) ಪ್ರಚೋದನೆ ನೀಡುತ್ತಿದ್ದ ಆರೋಪದಡಿ ಬಂಧಿತನವಾಗಿರುವ ಅಖ್ತರ್ ಹುಸೇನ್ ಬಗ್ಗೆ ಮತ್ತಷ್ಟು ರೋಚಕ ಮಾಹಿತಿ ದೊರೆತಿದೆ.
ಚಿಕ್ಕ ವಯಸ್ಸಿನಿಂದಲೇ ಉಗ್ರ ಸಂಘಟನೆಗಳ ಪ್ರಮುಖ ನಾಯಕರ ಭಾಷಣದ ವಿಡಿಯೋ ನೋಡಿ ಪ್ರಭಾವಿತನಾಗಿದ್ದ ಅಖ್ತರ್ ಆನ್ ಲೈನ್ ಮೂಲಕ ಧಾರ್ಮಿಕ ಮುಖಂಡರ ಪ್ರವಚನ ಕೇಳುತ್ತಿದ್ದ. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರುದ್ಧ ಸದಾ ಕಿಡಿಕಾರುತ್ತಿದ್ದ. ತನ್ನ ಸಮುದಾಯದ ಅಮಾಯಕರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಧರ್ಮ ಯುದ್ಧದಲ್ಲಿ ಭಾಗಿಯಾಗುವಂತೆ ಯುವಕರಿಗೆ ಕರೆ ನೀಡುತ್ತಿದ್ದ.
ಇದನ್ನೂ ಓದಿ- ಕಳ್ಳತನದ ಹಾದಿ ಹಿಡಿದ ಗುರು: ತೊಗರಿ ಬೇಳೆ ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ
ಉಗ್ರ ಸಂಘಟನೆಗಳ ಮೇಲೆ ಒಲವು ಹೊಂದಿದ್ದ ಅಖ್ತರ್, ಇದೇ ವರ್ಷ ಅಫ್ಘಾನಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗುತ್ತಿದೆ. ಧರ್ಮದ ಉಳಿವಿಗಾಗಿ ಜಿಹಾದ್ ಯುದ್ಧ ಮಾಡಬೇಕು. ಈ ನಮ್ಮ ಸಮುದಾಯ ಶೋಷಣೆಯಾಗುವುದನ್ನು ತಪ್ಪಿಸಬೇಕೆಂದು ಗ್ರೂಪ್ ಸದಸ್ಯರಿಗೆ ಕರೆ ನೀಡುತ್ತಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಈತ ಇದುವರೆಗೂ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ಸಂಘಟನೆಗೆ ಸೇರಲು ಮುಖ ಮಾಡಿದ್ದ. ಇದರಂತೆ ಕೊಲ್ಕತ್ತಾದಿಂದ ಒಬ್ಬ, ಬಾಂಗ್ಲಾದೇಶದಲ್ಲಿ ಇಬ್ಬರು ಹಾಗೂ ತಾನು ಸೇರಿ ಒಟ್ಟು ನಾಲ್ವರು ಅಫ್ಫಾನಿಸ್ತಾನಕ್ಕೆ ತೆರಳಲು ಯೋಜನೆ ರೂಪಿಸಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ- ಉದಯಪುರ ಪ್ರಕರಣ: ಕನ್ಹಯ್ಯಾ ಲಾಲ್ ಹತ್ಯೆ ಮಾಡಿದ್ದು ಇಬ್ಬರಲ್ಲ, 10 ಮಂದಿ!
ಅಖ್ತರ್ ಹುಸೇನ್ ಯಾರು ? ಹಿನ್ನೆಲೆ ಏನು ?
ಅಸ್ಸಾಂ ಮೂಲದ ಅಖ್ತರ್ 2015ರಲ್ಲಿ ಕೆಲಸ ಅರಸಿ ರಾಜಧಾನಿಗೆ ಕಾಲಿಟ್ಟಿದ್ದಾಗ ಆಗ ಅವನಿಗೆ ಕೇವಲ 17 ವರ್ಷ. 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಶಂಕಿತ ಉಗ್ರ, ನಗರದ ಮಾಯ್ಯಾಸ್ ಹೋಟೆಲ್ಗೆ ಕೆಲಸಕ್ಕೆ ಸೇರಲು ಮುಂದಾಗಿದ್ದ. ಆದರೆ ಬಾಲಕನಾಗಿದ್ದ ಕಾರಣ ಕೆಲಸ ನೀಡಲು ಮಾಲೀಕರು ನಿರಾಕರಿಸಿದ್ದರು. ಇದಾದ ಬಳಿಕ ಮೆಡಿಸಿನ್ ಕಂಪನಿಯಲ್ಲಿ ಎರಡು-ಮೂರು ತಿಂಗಳ ಕೆಲಸ ಮಾಡುತ್ತಿದ್ದಾಗ ಅನಾರೋಗ್ಯ ಹಿನ್ನೆಲೆ ಕೆಲಸ ತೊರೆದಿದ್ದ. ದ್ವಿತೀಯ ಪಿಯುಸಿಯಾದರೆ ಕೆಲಸ ಸಿಗಬಹುದೆಂಬ ಆಸೆಯಿಂದ 2015 ರಲ್ಲಿ ಅಸ್ಸಾಂಗೆ ತೆರಳಿ ಎರಡು ವರ್ಷದ ಬಳಿಕ 2017ಕ್ಕೆ ಮತ್ತೆ ಬೆಂಗಳೂರಿಗೆ ಬಂದಿದ್ದ. ಗಾರ್ಮೆಂಟ್ಸ್, ಸೆಕ್ಯೂರಿಟಿ ಗಾರ್ಡ್ ಹೀಗೆ ಅನೇಕ ಕೆಲಸ ಮಾಡಿದ್ದ. ಕೆಲ ತಿಂಗಳ ಹಿಂದೆ ಆತನ ತಾಯಿ ನಿಧನರಾದ ಹಿನ್ನೆಲೆ ಅಸ್ಸಾಂಗೆ ಹೋಗಿ ಬಂದಿದ್ದ. ಬಳಿಕ ಪುಡ್ ಡೆಲಿವರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.