Vikrant Rona: ಕಿಕ್ ಎಬ್ಬಿಸುವ ಕಿಚ್ಚನ ನಟನೆ ಯಾರಿಗೆ ತಾನೆ ಇಷ್ಟ ಇಲ್ಲಾ ಹೇಳಿ? ಅಭಿನಯ ಚಕ್ರವರ್ತಿ ಎಂಬ ಟೈಟಲ್ ಗೆ ತಕ್ಕಂತೆ ಸಿನಿ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಕಿಚ್ಚ ಸುದೀಪ್ ನಟನೆಯ ʻವಿಕ್ರಾಂತ್ ರೋಣʼ ಚಿತ್ರ ಬಿಡುಗಡೆಗೆ ಸಿದ್ಧವಾಗಿ ಇದೇ ಜುಲೈ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸ್ಯಾಂಡಲ್ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲೆ ಸಂಚಲನ ಸೃಷ್ಟಿಸಿರುವ ವಿಕ್ರಾಂತ್ರೋಣ ಗೆ ಅಭಿಮಾನಿಗಳು ದಿನೆ ದಿನೆ ಹೆಚ್ಚಾಗ್ತಾನೆ ಇದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಕಿಚ್ಚನ ಕಟೌಟ್ಗಳು ರಾರಾಜಿಸುತ್ತಿವೆ. ಅದ್ರಲ್ಲೂ ಅಪ್ಪು ರವರ ಜೊತೆ ಇರುವ ಕಿಚ್ಚನ ಕಟೌಟ್ಳು ಪ್ರೇಕ್ಷಕರನ್ನ ಮತ್ತಷ್ಟು ಆಕರ್ಷಿಸುತ್ತಿವೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಬಾಲಾಜಿ ಚಿತ್ರ ಮಂದಿರದಲ್ಲಿ ಈ ಕಟೌಟ್ ಎಲ್ಲರ ಗಮನ ಸೆಳೆದಿತ್ತು. ಈಗಾಗಲೇ ಥಿಯೇಟರ್ ಎದುರು ಸುದೀಪ್ ಹಾಗು ಪುನೀತ್ ರಾಜ್ ಕುಮಾರ್ ಕಟೌಟ್ ಕಟ್ಟಲಾಗಿದ್ದು, ಸಿನಿಮಾ ಯಶಸ್ಸಿಗೆ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಒಡೆದು ಕಿಚ್ಚ ಸುದೀಪ್ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಮುಂಗಡ ಟಿಕೆಟ್ ಬುಕಿಂಗ್ಗಾಗಿ ಕಾಯ್ತಿದ್ದೀರಾ? ಇಲ್ಲಿದೆ ಮಹತ್ವದ ಅಪ್ಡೇಟ್
ಕೋಲಾರ ಮಾತ್ರವಲ್ಲದೆ ರಾಜ್ಯಾದ್ಯಂತ ಈ ರೀತಿಯ ಕಟೌಟ್ಗಳು ಗಮನ ಸೆಳೆಯುತ್ತಿವೆ. ಸದ್ಯ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಗೆ ಸಜ್ಜಾಗಿದೆ. ಜುಲೈ 28 ರಂದು ನಟ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ರಾಜ್ಯದ ವಿವಿಧ ಭಾಗದಲ್ಲಿ ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ.
ವಿಕ್ರಾಂತ್ ರೋಣ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಸಿನಿಮಾ. ಹೀಗಾಗಿ ಈ ಸಿನಿಮಾ ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಒಂದು ಮಾಹಿತಿ ಪ್ರಕಾರ ಚಿತ್ರವು ಈವರೆಗಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 3500 ಸ್ಕ್ರೀನ್ ಗಳಲ್ಲಿ ತೆರೆಕಾಣಲಿದೆ. ಹೊರ ದೇಶಗಳಲ್ಲೂ ವಿಕ್ರಾಂತ್ ರೋಣ ಭರ್ಜರಿ ಬಿಡುಗಡೆಗೆ ಸಿದ್ದವಾಗಿದೆ. ಕರ್ನಾಟಕದಲ್ಲಿ ಸುಮಾರು 450 ಸ್ಕ್ರೀನ್ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ 450 ಸ್ಕ್ರೀನ್, ತಮಿಳುನಾಡಿನಲ್ಲಿ 200 ಸ್ಕ್ರೀನ್ ಮತ್ತು ಕೇರಳದಲ್ಲಿ 150 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆಯಂತೆ ವಿಕ್ರಾಂತ್ ರೋಣ. ಉತ್ತರ ಭಾರತ ಭಾಗದಲ್ಲಿ ಬರೋಬ್ಬರಿ 1000 ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಹೇಳಲಾಗ್ತಾ ಇದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕರಿಯರ್ನಲ್ಲೇ ಬಹಳ ಸ್ಪೆಷಲ್ ಸಿನಿಮಾ 'ವಿಕ್ರಾಂತ್ ರೋಣ'. ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ರೋಲ್ನಲ್ಲಿ ನಟಿಸಿರೋ ಕಿಚ್ಚ ಸಾಕಷ್ಟು ಸರ್ಪ್ರೈಸ್ಗಳನ್ನು ಹೊತ್ತು ಬರ್ತಿದ್ದಾರೆ.
ಇನ್ನೂ ಸಿನಿಮಾ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಹಾಗೂ ಅಭೀಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ. 2ಡಿ, 3ಡಿ ಎರಡರಲ್ಲೂ ಸಿನಿಮಾ ಬಿಡುಗಡೆಹೊಳ್ಳುತ್ತಿದ್ದು ಎರಡಕ್ಕೂ ಒಳ್ಳೆಯ ರೆಸ್ಪಾನ್ಸ್ ದೊರಕುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ದಿಂದ ಇದೀಗ ಮತ್ತೊಮ್ಮೆ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ಮುಖಮಾಡುವ ನಿರೀಕ್ಷೆ ದುಪ್ಪಟ್ಟಾಗಿದೆ. ವರದಿಗಳ ಅಂದಾಜಿನ ಪ್ರಕಾರ, ಬಾಕ್ಸ್ ಆಫೀಸ್ ಪ್ರದರ್ಶನದಲ್ಲಿ 'ವಿಕ್ರಾಂತ್ ರೋಣ' 1 ನೇ ದಿನದಂದು 15-20 ಕೋಟಿ ರೂಪಾಯಿಗಳಷ್ಟು ಸಂಗ್ರಹಿಸಬಹುದು. ಇದು ವಾರದ ಮಧ್ಯದಲ್ಲಿ ಬಿಡುಗಡೆಯಾಗುತ್ತಿರುವ ಕಾರಣ 4-ದಿನಗಳ ವಿಸ್ತೃತ ಆರಂಭಿಕ ವಾರಾಂತ್ಯದಲ್ಲಿ 50-75 ಕೋಟಿಗಳನ್ನು ಕಲೆ ಹಾಕಬುದುಎಂಬ ನಿರೀಕ್ಷಿಯಿದೆ. ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್ ಮತ್ತು ಇನ್ವೆನಿಯೊ ಫಿಲ್ಮ್ಸ್ ಇಂಡಿಯಾ ಬ್ಯಾನರ್ ಅಡಿಯಲ್ಲಿ ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ತಂಡವು ಇತ್ತೀಚೆಗೆ ವಿಶ್ವಾದ್ಯಂತ ವಿತರಕರ ಪಟ್ಟಿಯನ್ನು ಅನಾವರಣಗೊಳಿಸಿದೆ. ಸಲ್ಮಾನ್ ಖಾನ್ ಫಿಲ್ಮ್ಸ್ ಪ್ರೆಸೆಂಟ್ಸ್, ಪಿವಿಆರ್ ಪಿಕ್ಚರ್ಸ್ ಡಿಸ್ಟ್ರಿಬ್ಯೂಷನ್ ಹಿಂದಿ ಆವೃತ್ತಿಯನ್ನು ವಿತರಿಸಲಿದೆ. ಯೋಗೇಶ್ ದ್ವಾರಕೀಶ್ ಬಂಗಲೆ ಅವರ ಒನ್ಟ್ವೆಂಟಿ 8 ಮತ್ತು ಮೀಡಿಯಾ ಸಾಗರೋತ್ತರ ಮಾರುಕಟ್ಟೆಯನ್ನು ನೋಡಿಕೊಳ್ಳಲಿದೆ.
ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ!? ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ
ಬಿಡುಗಡೆಗೆ ಸಿದ್ದವಾಗಿರೊ ಚಿತ್ರಮಂದಿಗಳನ್ನ ಕಟೌಟ್, ಬ್ಯಾನರ್ಗಳ ಮೂಲಕ ಸಿಂಗಾರಿಸಿ ಅಭಿಮಾನವನ್ನ ವ್ಯಕ್ತ ಪಡಿಸುತ್ತಿದ್ದಾರೆ ಕಿಚ್ಚನ ಅಭಿಮಾನಿಗಳು. ಅಭಿಮಾನಿಗಳನ್ನ ನನ್ನ ಸ್ನೇಹಿತರು ಎನ್ನೋ ಕಿಚ್ಚನ ಪ್ರೀತಿಗೆ ಅಪಾರ ಗೌರವದಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನ ಬರಮಾಡಿಕೊಳ್ಳುತಿದ್ದಾರೆ. ಥಿಯೇಟರ್ ಮುಂದೆ 20ಕ್ಕೂ ಹೆಚ್ಚು ಅಡಿಯ ಕಟೌಟ್ಗಳು, ಆ ಕಟೌಟ್ಗಳ ತುಂಬಾ ಹೂ ಮಾಲೆಗಳು, ಹೆಜ್ಜೆ ಹೆಜ್ಜೆಗೂ ಬ್ಯಾನರ್ಗಳು, ಸಿನಿಮಾದ ಪೋಸ್ಟರ್ಗಳು, ಬಾನೆತ್ತರದಲ್ಲಿ ಸಿಡಿವ ಪಟಾಕಿಗಳು ಹೀಗೆ ಸಿನಿಮಾವನ್ನ ಬರಮಾಡಿಕೊಳ್ಳೋದನ್ನ ನೋಡೊದೆ ಚಂದ, ಈ ಸಡಗರ ಇದೀಗ ವಿಕ್ರಾಂತ್ರೋಣ ಸಿನಿಮಾ ಮೂಲಕ ಮತ್ತೇ ಶುರುವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.