ಅತ್ಯುತ್ತಮ ಮೈಲೇಜ್ ಸಿಎನ್ಜಿ ಕಾರು: ಸಾಮಾನ್ಯವಾಗಿ ಹೆಚ್ಚು ಇಂಧನ ದಕ್ಷತೆಯ ಸಿಎನ್ಜಿ ಕಾರುಗಳ ಬಗ್ಗೆ ಯೋಚಿಸುವಾಗ ಮಾರುತಿ ವ್ಯಾಗನ್ ಆರ್, ಮಾರುತಿ ಆಲ್ಟೊ, ಮಾರುತಿ ಎಸ್-ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೊ ಹೆಸರುಗಳು ಮನಸ್ಸಿಗೆ ಬರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಇದಕ್ಕಿಂತ ಹೆಚ್ಚು ಮೈಲೇಜ್ ನೀಡುವ ಸಿಎನ್ಜಿ ಕಾರು ಕೂಡ ಲಭ್ಯವಿದೆ. ಮಾರುತಿ ಕಂಪನಿಯ ಈ ಕಾರ್ ವ್ಯಾಗನ್ ಆರ್, ಆಲ್ಟೊ, ಎಸ್-ಪ್ರೆಸ್ಸೊ ಮತ್ತು ಸ್ಯಾಂಟ್ರೊಗಿಂತ ಹೆಚ್ಚಿನ ಮೈಲೇಜ್ ನೀಡಬಲ್ಲದು ಎಂದು ಹೇಳಲಾಗುತ್ತದೆ. ಅದುವೇ ಮಾರುತಿ ಸೆಲೆರಿಯೋ ಸಿಎನ್ಜಿ ಕರು.
ಈ ವರ್ಷದ ಆರಂಭದಲ್ಲಿ ಮಾರುತಿ ಕಂಪನಿಯು ಸೆಲೆರಿಯೊದ ಸಿಎನ್ಜಿ ಆವೃತ್ತಿಯನ್ನು ಬಿಡುಗಡೆ ಮಾಡಿತು. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕಾರುಗಳಲ್ಲಿ ಇದೂ ಸಹ ಒಂದಾಗಿದೆ. ಬೇರೆ ಕಾರುಗಳಿಗೆ ಹೋಲಿಸಿದರೆ ಮಾರುತಿ ಸೆಲೆರಿಯೊ ಸಿಎನ್ಜಿ ಕಾರಿನ ವಿಶೇಷತೆ, ಮೈಲೇಜ್ ಬಗ್ಗೆ ತಿಳಿಯೋಣ...
ಇದನ್ನೂ ಓದಿ- ಇನ್ನು ಪೆಟ್ರೋಲ್ ಮೇಲಿಲ್ಲ ಅಬಕಾರಿ ಸುಂಕ : ಡೀಸೆಲ್ ಮೇಲಿನ ಸುಂಕವೂ ಕಡಿತ
ವ್ಯಾಗನ್ ಆರ್, ಆಲ್ಟೊ, ಎಸ್-ಪ್ರೆಸ್ಸೊ ಮತ್ತು ಸ್ಯಾಂಟ್ರೊ ಸಿಎನ್ಜಿ ಮೈಲೇಜ್:
* ಮಾರುತಿ ವ್ಯಾಗನ್ಆರ್ ಸಿಎನ್ಜಿಯಲ್ಲಿ 32.52 ಕಿಮೀ ಮೈಲೇಜ್ ನೀಡುತ್ತದೆ.
* ಮಾರುತಿ ಆಲ್ಟೊ ಸಿಎನ್ಜಿ 31.59 ಕಿಮೀ ಮೈಲೇಜ್ ನೀಡಬಹುದು.
* ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿಎನ್ಜಿ 31.2 ಕಿಮೀ ಮೈಲೇಜ್ ನೀಡಬಲ್ಲದು.
* ಹ್ಯುಂಡೈ ಸ್ಯಾಂಟ್ರೋ ಸಿಎನ್ಜಿ 30.48 ಕಿಮೀ ಮೈಲೇಜ್ ನೀಡಬಲ್ಲದು.
* ಮಾರುತಿ ಸೆಲೆರಿಯೊ ಸಿಎನ್ಜಿ ಅತಿ ಹೆಚ್ಚು ಮೈಲೇಜ್ ಅಂದರೆ 35.60 km/kg ನೀಡುವ ಸಾಮರ್ಥ್ಯ ಹೊಂದಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ- 7th Pay Commission : ಕೇಂದ್ರ ನೌಕರರಿಗೆ ಟ್ರಿಪಲ್ Bonanza : ನಿಮ್ಮ ಸಂಬಳದಲ್ಲಿ ಭಾರಿ ಹೆಚ್ಚಳ!
ಮಾರುತಿ ಸುಜುಕಿ ಸೆಲೆರಿಯೊ ಸಿಎನ್ಜಿ ಬೆಲೆ:
ಮಾರುತಿ ಸುಜುಕಿ ಸೆಲೆರಿಯೊ ಸಿಎನ್ಜಿ ಬೆಲೆ ರೂ 6.69 ಲಕ್ಷ (ಎಕ್ಸ್ ಶೋ ರೂಂ) ಆದರೆ ಅದರ ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆ ರೂ 5.25 ಲಕ್ಷ. ಸೆಲೆರಿಯೊದ ಟಾಪ್ ರೂಪಾಂತರದ ಬೆಲೆ 7 ಲಕ್ಷ ರೂ. ಆಗಿದೆ. ಗಮನಾರ್ಹ ವಿಷಯವೆಂದರೆ ಸಿಎನ್ಜಿಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ 5 ಕಾರುಗಳಲ್ಲಿ 4 ಕಾರುಗಳು ಮಾರುತಿ ಕಂಪನಿಯ ಕಾರುಗಳು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.