DKS Vs Siddu: ‘ಟಗರಿನ ಕೊಂಬು ಮುರಿಯುತ್ತಾ ಅಥವಾ ಬಂಡೆ ಪುಡಿ ಪುಡಿಯಾಗುತ್ತಾ?’

#ಕಾಂಗ್ರೆಸ್‌ಮುಕ್ತಕರ್ನಾಟಕ ನಿರಮಿಸಲು ಪಣತೊಟ್ಟ ಈ ಇಬ್ಬರು ನಾಯಕರಿಗೆ ಜನತೆಯ ಪರವಾಗಿ ಅಭಿನಂದನೆಗಳು ಎಂದು BJP ವ್ಯಂಗ್ಯವಾಡಿದೆ.

Written by - Puttaraj K Alur | Last Updated : Jul 20, 2022, 03:30 PM IST
  • ಟಗರು & ಬಂಡೆ ನಡುವೆ ಕಾದಾಟದಲ್ಲಿ ಕೊಂಬು ಮುರಿಯಬಹುದೇ ಅಥವಾ ಬಂಡೆ ಪುಡಿಯಾಗಬಹುದೇ?
  • ಸಿದ್ದರಾಮಯ್ಯ & ಡಿಕೆಶಿ ನಡುವಿನ ಕಾದಾಟದಲ್ಲಿ ಕಾಂಗ್ರೆಸ್‌ ಮನೆ ಖಾಲಿಯಾಗಲಿದೆ
  • ಸಿದ್ದರಾಮಯ್ಯ ಮತ್ತು ಡಿಕೆಶಿ ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಬಹಿರಂಗ ಹೆಜ್ಜೆಯಿಡುತ್ತಿದ್ದಾರೆಯೇ?
DKS Vs Siddu: ‘ಟಗರಿನ ಕೊಂಬು ಮುರಿಯುತ್ತಾ ಅಥವಾ ಬಂಡೆ ಪುಡಿ ಪುಡಿಯಾಗುತ್ತಾ?’ title=
ಕಾಂಗ್ರೆಸ್ ನಾಯಕರ ಲೇವಡಿ ಮಾಡಿದ ಬಿಜೆಪಿ

ಬೆಂಗಳೂರು: ರಾಜ್ಯ ವಿಧಾಸಭಾ ಚುನಾವಣೆಗೆ 9 ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಶೀತಲ ಸಮರ ತಾರಕ್ಕೇರಿದ್ದು, ಬಹಿರಂಗ ಸ್ವರೂಪ ಪಡೆದುಕೊಂಡಿದೆ. ತಾವು ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂಬುದನ್ನು ಸಿದ್ದರಾಮಯ್ಯ ತವರಿನಲ್ಲಿಯೇ ಡಿಕೆಶಿ ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಸಿದ್ದರಾಮಯ್ಯರ ಬೆಂಬಲಿಗರನ್ನು ಕೆರಳಿಸಿದ್ದು, ಕುರ್ಚಿ ಕದನ ಸಂಘರ್ಷದ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್ ನಾಯಕ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಟಗರು ಮತ್ತು ಬಂಡೆ ನಡುವೆ ಕಾದಾಟ ಆರಂಭಗೊಂಡಿದೆ. ಟಗರಿನ ಕೊಂಬು ಮುರಿಯಬಹುದೇ ಅಥವಾ ಬಂಡೆ ಪುಡಿಯಾಗಬಹುದೇ? ಸಿದ್ದರಾಮಯ್ಯ & ಡಿಕೆಶಿ ನಡುವಿನ ಕಾದಾಟದಲ್ಲಿ ಕಾಂಗ್ರೆಸ್‌ ಮನೆ ಖಾಲಿಯಾಗಲಿದೆ. #ಕಾಂಗ್ರೆಸ್‌ಮುಕ್ತಕರ್ನಾಟಕ ನಿರಮಿಸಲು ಪಣತೊಟ್ಟ ಈ ಇಬ್ಬರು ನಾಯಕರಿಗೆ ಜನತೆಯ ಪರವಾಗಿ ಅಭಿನಂದನೆಗಳು’ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿ ಪರಿಚಯಿಸಿದ್ದೇ ಕಾಂಗ್ರೆಸ್: ಬಿಜೆಪಿ ಆರೋಪ

‘ಕಾಂಗ್ರೆಸ್ ಮುಕ್ತ ಕರ್ನಾಟಕದ ಅಘೋಷಿತ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಾಲ್ವರು ನೇಮಕವಾಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಜಿ.ಪರಮೇಶ್ವರ್ ಸೇರಿ ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಬೇರು ಸಮೇತ ಕಿತ್ತು ಹಾಕಲು ಭಾರೀ ಪೈಪೋಟಿ ನಡೆಸುತ್ತಿದ್ದಾರೆ!’ ಎಂದು ಟೀಕಿಸಿದೆ.

‘ಸಿದ್ದರಾಮಯ್ಯ ಮತ್ತು ಡಿಕೆಶಿ ಕಾಂಗ್ರೆಸ್ ಮುಕ್ತ ಕರ್ನಾಟಕದತ್ತ ಬಹಿರಂಗ ಹೆಜ್ಜೆಯಿಡುತ್ತಿದ್ದಾರೆಯೇ? ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿಯಾಗುವುದು ಸಹಜ ಎಂದು ಡಿಕೆಶಿ ಹೇಳಿದ್ದಾರೆ. ನಾನೇನೂ ಸಂನ್ಯಾಸಿಯಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. "ಫೈಯರ್ ಇನ್ ದಿ ಮೌಂಟೇನ್ ರನ್ ರನ್ ರನ್" ಎಂದು ಇವರಿಬ್ಬರು ಕಾಲ್ಪನಿಕ ಖುರ್ಚಿಯ ಸುತ್ತ ಓಡುತ್ತಿರುವುದೇಕೆ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: 'ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ'

‘ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗುವುದು ವಾಡಿಕೆ ಎಂದಿದ್ದ ಡಾ.ಜಿ.ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಬಣ ಸೋಲಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ! "ತಾನು ಉಳಿಯಬೇಕೆಂದರೆ ಇನ್ನೊಬ್ಬರನ್ನು ಮಕಾಡೆ ಮಲಗಿಸುವ" ತಂತ್ರದಿಂದ #ಕಾಂಗ್ರೆಸ್‌ಮುಕ್ತಕರ್ನಾಟಕ ವಾಗುವುದರಲ್ಲಿ ಸಂಶಯವಿಲ್ಲ’ವೆಂದು ಬಿಜೆಪಿ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News