RBI Imposes Penalty on Ola: ಭಾರತೀಯ ರಿಸರ್ವ್ ಬ್ಯಾಂಕ್ ಓಲಾ ಫೈನಾನ್ಷಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ವಿರುದ್ದ 1.67 ಕೋಟಿ ರೂ.ಗಳ ಭಾರೀ ದಂಡ ವಿಧಿಸಿದೆ. ಪ್ರಿಪೇಯ್ಡ್ ಪೇಮೆಂಟ್ ಸಿಸ್ಟಮ್ ಮತ್ತು ಕೆವೈಸಿ ನಿಯಮಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸದಿರುವ ಹಿನ್ನೆಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಓಲಾ ಫೈನಾನ್ಶಿಯಲ್ ಸರ್ವೀಸಸ್ ಆಪ್ ಆಧಾರಿತ ಕ್ಯಾಬ್ ಸೇವೆಯನ್ನು ಒದಗಿಸುವ ಓಲಾದ ಅಂಗ ಸಂಸ್ಥೆಯಾಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಹೊರತಾಗಿ, ಇದು ವೈಯಕ್ತಿಕ ಸಾಲಗಳನ್ನು ಸಹ ನೀಡುತ್ತದೆ.
ಮೊದಲ ನೋಟಿಸ್ ನೀಡಿ ವಿವರಣೆ ಕೋರಿದ ಆರ್ ಬಿಐ :
ಓಲಾ ಫೈನಾನ್ಶಿಯಲ್ ಸರ್ವಿಸಸ್ ಕೆವೈಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬುದು ತನಿಖೆಯಲ್ಲಿ ಕಂಡುಬಂದಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಂಕ್ ಪ್ರಕಾರ, ಈ ಬಗ್ಗೆ ಕಂಪನಿಗೆ ಮೊದಲೇ ನೋಟಿಸ್ ನೀಡಲಾಗಿತ್ತು ಮತ್ತು ಸೂಚನೆಗಳನ್ನು ಅನುಸರಿಸದಿದ್ದಕ್ಕಾಗಿ ಏಕೆ ದಂಡ ವಿಧಿಸಬಾರದು ಎಂದು ಕೇಳಲಾಗಿತ್ತು.
ಇದನ್ನೂ ಓದಿ : Gold Price Today : ಅಗ್ಗವಾಯಿತು ಚಿನ್ನ, ಬೆಳ್ಳಿ ಮಾತ್ರ ಬಲು ದುಬಾರಿ
ಆರ್ಬಿಐ ನೋಟೀಸ್ ಗೆ ಕಂಪನಿ ಉತ್ತರ :
"ಕಂಪನಿಯ ಉತ್ತರವನ್ನು ಪರಿಗಣಿಸಿದ ನಂತರ, ನಿರ್ದೇಶನಗಳ ಅನುಷ್ಠಾನದಲ್ಲಿ ಲೋಪವಾಗಿದೆ ಎಂದು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಓಲಾಗೆ ದಂಡವನ್ನು ವಿಧಿಸುವುದು ಅವಶ್ಯಕ" ಎಂದು ಆರ್ಬಿಐ ಹೇಳಿದೆ. ನಿಯಂತ್ರಕ ಅನುಸರಣೆಯಲ್ಲಿನ ಲೋಪಗಳಿಗಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.
ಈ ಬ್ಯಾಂಕ್ಗಳಿಗೂ ಬಿತ್ತು ದಂಡ :
ಸೋಮವಾರ, ಆರ್ಬಿಐ ನಿಯಮಗಳನ್ನು ಪಾಲಿಸದ ಮೂರು ಸಹಕಾರಿ ಬ್ಯಾಂಕ್ಗಳಿಗೆ ದಂಡ ವಿಧಿಸಲಾಗಿದೆ. ದಿ ನಾಸಿಕ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್, ಮಹಾರಾಷ್ಟ್ರ ಸ್ಟೇಟ್ ಕೋಆಪರೇಟಿವ್ ಬ್ಯಾಂಕ್ ಮತ್ತು ನ್ಯಾಷನಲ್ ಸೆಂಟ್ರಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್. ವಿರುದ್ದ ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ : ಉಚಿತ ಪಡಿತರ ಪಡೆಯಲು ತೊಂದರೆ ಆಗುತ್ತಿದೆಯೇ? ತಕ್ಷಣವೇ ಈ ರೀತಿ ದೂರು ಸಲ್ಲಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.