Gas making Vegetables:ಈ ತರಕಾರಿಗಳು ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.! ಪರಿಹಾರಕ್ಕೆ ಏನು ಮಾಡಬೇಕು ?

ಯಾವ ತರಕಾರಿಗಳು ಹೆಚ್ಚು ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತವೆ ಮತ್ತು ಅದನ್ನು ಹೇಗೆ ತಪ್ಪಿಸಬಹುದು  ಎನ್ನುವುದನ್ನು ಇಂದು ತಿಳಿದುಕೊಳ್ಳೋಣ. 

Written by - Ranjitha R K | Last Updated : Jun 27, 2022, 12:56 PM IST
  • ಕೆಲವು ತರಕಾರಿಗಳು ಗ್ಯಾಸ್ ಉಂಟಾಗಲು ಕಾರಣವಾಗುತ್ತದೆ
  • ಈ ತರಕಾರಿಗಳು ಗ್ಯಾಸ್ ಸಮಸ್ಯೆ ಹೆಚ್ಚಿಸುತ್ತವೆ
  • ಗ್ಯಾಸ್ ಆಗದಿರಲು ಏನು ಮಾಡಬೇಕು
Gas making Vegetables:ಈ ತರಕಾರಿಗಳು ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.! ಪರಿಹಾರಕ್ಕೆ ಏನು ಮಾಡಬೇಕು ?  title=
Gas making Vegetables (file photo)

ಬೆಂಗಳೂರು : Gas making Vegetables: ಅನೇಕ ಬಾರಿ ನಾವು ಸೇವಿಸುವ ಆಹಾರದಿಂದಲೇ ನಮಗೆ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗೋಬಿ, ತೊಗರಿ ಬೇಳೆ  ಮತ್ತು ಹೊರಗಿನ ಆಹಾರ ಪದಾರ್ಥ ಸೇವನೆ ಕೂಡಾ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಯಾವ ತರಕಾರಿಗಳು ಹೆಚ್ಚು ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತವೆ ಮತ್ತು ಅದನ್ನು ಹೇಗೆ ತಪ್ಪಿಸಬಹುದು  ಎನ್ನುವುದನ್ನು ಇಂದು ತಿಳಿದುಕೊಳ್ಳೋಣ. 

ಈ ತರಕಾರಿಗಳು ಗ್ಯಾಸ್ ಸಮಸ್ಯೆ ಹೆಚ್ಚಿಸುತ್ತದೆ : 
ನೀವು ಪ್ರತಿದಿನ ಗೋಬಿ ಅಥವಾ ಕ್ವಾಲಿ ಫ್ಲವರ್ ತಿನ್ನುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಈ ತರಕಾರಿ ಹೊಟ್ಟೆಯಲ್ಲಿ ಗ್ಯಾಸ್ ಅನ್ನು ಉಂಟು ಮಾಡುತ್ತದೆ. ಅನೇಕ ಜನರು ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತಾರೆ. ಅನೇಕರಿಗೆ ಇದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ತಂದೊಡ್ಡುತ್ತದೆ. ಆದರೆ  ಕ್ವಾಲಿ ಫ್ಲವರ್ ಅನ್ನು  ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿ ಕುದಿಸಿ ನಂತರ ಬಳಸಿದರೆ  ಗ್ಯಾಸ್  ರಚನೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಥವಾ ಇದನ್ನು ಅಡುಗೆಗೆ ಬಳಸುವಾಗ ಅದಕ್ಕೆ ಇಂಗು ಸೇರಿಸಿ. 

ಇದನ್ನೂ ಓದಿ : ಈ ತರಕಾರಿಯಲ್ಲ ಅದರ ಬೀಜ ನಿಯಂತ್ರಣಕ್ಕೆ ತರುತ್ತದೆ ರಕ್ತದಲ್ಲಿನ ಸಕ್ಕರೆ ಪ್ರಮಾಣ

ಬೇಳೆಕಾಳುಗಳು ಪ್ರೋಟೀನ್ ಅನ್ನು ಒದಗಿಸುತ್ತವೆ ಎನ್ನುವ ವಿಷಯ  ಎಲ್ಲರಿಗೂ ತಿಳಿದಿರುತ್ತದೆ. ಆದರೆ ಹೊಟ್ಟೆಯಲ್ಲಿ  ಗ್ಯಾಸ್ ಉಂಟುಮಾಡುವ ಅನೇಕ ಕಾಳುಗಳಿವೆ. ತೊಗರಿಬೇಳೆಯನ್ನು ತಿಂದರೆ ಅದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡುತ್ತದೆ. ಈ ಕಾರಣಕ್ಕಾಗಿ ಅದನ್ನು ತಯಾರಿಸುವ ಮೊದಲು  ಬೇಳೆಯನ್ನು  ನೀರಿನಲ್ಲಿ ನೆನೆಸಿಡಬೇಕು. ಮಾತ್ರವಲ್ಲ ಇದನ್ನು  ಅಡುಗೆಗೆ ಬಳಸುವಾಗ ಇಂಗು ಬಳಸುವುದನ್ನು ಮರೆಯಬೇಡಿ. 

ಹಲಸಿನ ಹಣ್ಣಿನಿಂದಲೂ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಿಮಗೆ ಹೊಟ್ಟೆಯ ಸಮಸ್ಯೆಯೂ ಉಂಟಾಗಬಹುದು. ನೀವು ಇದನ್ನು ಹೆಚ್ಚು ಸೇವಿಸಿದರೆ, ಹೊಟ್ಟೆ ಉಬ್ಬಿದ ಅನುಭವವಾಗುತ್ತದೆ.  ಈ ಹಿನ್ನೆಲೆಯಲ್ಲಿ ಹಲಸಿನ ಹಣ್ಣನ್ನು ಕಡಿಮೆ ತಿನ್ನಲು ಪ್ರಯತ್ನಿಸಿ. 

ಇದನ್ನೂ ಓದಿ : Brown Rice: ರಕ್ತದೊತ್ತದದಿಂದ ಹಿಡಿದು ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಬ್ರೌನ್ ರೈಸ್ ರಾಮಬಾಣ

ಸಾಮಾನ್ಯವಾಗಿ, ಹೆಚ್ಚಿನ ಜನರು ಕಿಡ್ನಿ ಬೀನ್ಸ್ ಮತ್ತು ಬಿಳಿ ಕಡಲೆಗಳನ್ನು ತಿನ್ನುತ್ತಾರೆ. ಆದರೆ ಇವೆರಡೂ ಹೊಟ್ಟೆಯಲ್ಲಿ ಬಹಳಷ್ಟು ಗ್ಯಾಸ್ ಅನ್ನು ಉಂಟುಮಾಡುತ್ತವೆ. ಮಾತ್ರವಲ್ಲ ಇದನ್ನು ಜೀರ್ಣಿಸಿಕೊಳ್ಳುವುದು ಕೂಡಾ ಸುಲಭವಲ್ಲ.  ಇದು ಜೀರ್ಣವಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಪರಿಣಾಮವಾಗಿ ಹೊಟ್ಟೆಯಲ್ಲಿ ಗ್ಯಾಸ್  ಆಗಲು ಕಾರಣವಾಗುತ್ತದೆ. 

 

( ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿರಲು ಸಾಧ್ಯವಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News