ನವದೆಹಲಿ: ಕಂಬಳ ಕ್ರೀಡೆ ತಡೆಗೆ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಕರಾವಳಿ ಕ್ರೀಡೆ 'ಕಂಬಳ'ಕ್ಕೆ ಗ್ರೀನ್ ಸಿಗ್ನಲ್ ದೊರೆತಿದೆ.
ಕರಾವಳಿ ಕ್ರೀಡೆ 'ಕಂಬಳ'ವನ್ನು ನಡೆಸದಂತೆ ಪೇಟಾದವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಜಾ ಮಾಡಿದೆ. ಈ ಕುರಿತ ಮುಂದಿನ ವಿಚಾರಣೆ ನ. 13ಕ್ಕೆ ನಡೆಯಲಿದ್ದು, ಆ ಸಮಯದಲ್ಲಿ ಅಟಾರ್ನಿ ಜನರಲ್ ಹಾಜರಿರುವಂತೆ ಸುಪ್ರೀಂ ಆಜ್ಞೆ ಹೊರಡಿಸಿದೆ.
ಕಂಬಳ ಕ್ರೀಡೆಗೆ ಸಂಬಂಧಿಸಿದಂತೆ ನಿರಂತರವಾಗಿ ವಾದ-ವಿವಾದಗಳು ನಡೆದಿದ್ದವು. ಕರ್ನಾಟಕ ಸರ್ಕಾರವು ಕಂಬಳದ ಪರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣ ಕ್ರೀಡೆಗಳು ಉಳಿಯಬೇಕು. ಹಾಗಾಗಿ ಕಂಬಳಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೇ ಎಂದು ತಿಳಿಸಿದ್ದರು.