WhatsApp ಬಳಕೆದಾರರಿಗೊಂದು ಗುಡ್ ನ್ಯೂಸ್, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಈ ಬಹುನಿರೀಕ್ಷಿತ ವೈಶಿಷ್ಟ್ಯ

Whats App New Feature - ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವಾಗಿರುವ 'ಎಡಿಟ್ ಬಟನ್' ಆಯ್ಕೆಯನ್ನು ನೀಡಲಿದೆ ಎಂದು ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರಲ್ಲಿ ಹೇಳಲಾಗಿದೆ. ತಪ್ಪು ಮತ್ತು ಮುದ್ರಣದೋಷದಿಂದ ಕೂಡಿದ ಸಂದೇಶಗಳನ್ನು ಸರಿಪಡಿಸಲು ಈ ಬಟನ್ ಬಳಕೆದಾರರಿಗೆ ಇದು ಸಹಾಯ ಮಾಡಲಿದೆ.  

Written by - Nitin Tabib | Last Updated : Jun 1, 2022, 12:56 PM IST
  • ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವಾಗಿರುವ 'ಎಡಿಟ್ ಬಟನ್' ಆಯ್ಕೆಯನ್ನು ನೀಡಲಿದೆ.
  • ಇತ್ತೀಚಿಗೆ ಪ್ರಕಟಗೊಂಡ ವರದಿಯೊಂದರಲ್ಲಿ ಹೇಳಲಾಗಿದೆ.
  • ತಪ್ಪು ಮತ್ತು ಮುದ್ರಣದೋಷದಿಂದ ಕೂಡಿದ ಸಂದೇಶಗಳನ್ನು ಸರಿಪಡಿಸಲು ಈ ಬಟನ್ ಬಳಕೆದಾರರಿಗೆ ಇದು ಸಹಾಯ ಮಾಡಲಿದೆ.
WhatsApp ಬಳಕೆದಾರರಿಗೊಂದು ಗುಡ್ ನ್ಯೂಸ್, ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಈ ಬಹುನಿರೀಕ್ಷಿತ ವೈಶಿಷ್ಟ್ಯ title=
WhatsApp New Feature

WhatsApp ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಈ ತ್ವರಿತ ಸಂದೇಶ ರವಾನೆಯ ಆಪ್‌ನ ಮುಂಬರುವ ವೈಶಿಷ್ಟ್ಯಗಳ ಪಟ್ಟಿಗೆ ಮತ್ತೊಂದು ಹೊಸ ವೈಶಿಷ್ಟ್ಯದ ಹೆಸರು ಸೇರ್ಪಡೆಯಾಗಿದೆ. ಈ ಹೊಸ ವೈಶಿಷ್ಟ್ಯಕ್ಕೆ 'ಎಡಿಟ್ ಬಟನ್' ಎಂದು ಕರೆಯಲಾಗುತ್ತಿದೆ. ಹೌದು, ಟ್ವಿಟರ್ ಬಳಕೆದಾರರು ಈ 'ಎಡಿಟ್' ವೈಶಿಷ್ಟ್ಯಕ್ಕಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ, ಆದರೆ ಟ್ವಿಟರ್ ಗೂ ಮುನ್ನವೇ ವಾಟ್ಸಾಪ್ ತನ್ನ ಬಳಕೆದಾರರಿಗೆ ಈ ಫೀಚರ್ ಒದಗಿಸಲಿದೆ ಎಂದು ವರದಿಯಾಗಿದೆ.
Wabetainfo ನ ಇತ್ತೀಚಿನ ವರದಿಯಲ್ಲಿ, WhatsApp ಶೀಘ್ರದಲ್ಲೇ ಹೊಸ ಮೆಸೇಜಿಂಗ್ ವೈಶಿಷ್ಟ್ಯವಾಗಿ ತನ್ನ ಬಳಕೆದಾರರಿಗೆ 'Edit' ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ವರದಿಯ ಪ್ರಕಾರ, ಪ್ರಸ್ತುತ, ಈ ವೈಶಿಷ್ಟ್ಯವು WhatsApp ಬೀಟಾದ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಆದರೆ, ಭವಿಷ್ಯದ ನವೀಕರಣದೊಂದಿಗೆ, ಇದನ್ನು iOS ಮತ್ತು ಡೆಸ್ಕ್‌ಟಾಪ್ ಬಳಕೆದಾರರಿಗೆ ಸಹ ನೀಡಲಾಗುತ್ತದೆ ಎನ್ನಲಾಗಿದೆ.

'ಇನ್ಫೋ' ಮತ್ತು 'ಕಾಪಿ' ಜೊತೆಗೆ ಎಡಿಟ್ ಆಯ್ಕೆ ಲಭ್ಯವಿರಲಿದೆ
Wabetainfo ನ  ವರದಿಯಲ್ಲಿ  ಹೊಸ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಳ್ಳಲಾಗಿದೆ, ಇದರಲ್ಲಿ WhatsApp ನ ಮುಂಬರುವ ಎಡಿಟ್ ಬಟನ್ ಅನ್ನು ನೀವು ನೋಡಬಹುದು. ಈ ಎಡಿಟ್ ಬಟನ್ ಅನ್ನು ಇನ್ಫೋ ಮತ್ತು ಕಾಪಿ ಆಯ್ಕೆಯೊಂದಿಗೆ ಸೇರಿಸಲಾಗಿರುವುದನ್ನು ನೀವು ಸ್ಕ್ರೀನ್‌ಶಾಟ್‌ನಲ್ಲಿ ನೋಡಬಹುದು. ತಪ್ಪು ಮತ್ತು ಮುದ್ರಣದೋಷದಿಂದ ಕೂಡಿದ ಸಂದೇಶವನ್ನು ಸರಿಪಡಿಸಲು ಈ ಬಟನ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. 

ಇದನ್ನೂ ಓದಿ-Airtel ಉಚಿತವಾಗಿ ನೀಡುತ್ತಿದೆ 1ಜಿಬಿ ಡೇಟಾ, ಈ ಕೊಡುಗೆ ಕೇವಲ ಮೂರು ದಿನಗಳವರೆಗೆ ಇರಲಿದೆ

ಪ್ರಸ್ತುತ, ಈ ವೈಶಿಷ್ಟ್ಯ  ಕೆಲಸ ನಡೆಯುತ್ತಿದೆ ಮತ್ತು ಸದ್ಯಕ್ಕೆ ಇದನ್ನು ಬೀಟಾ ಪರೀಕ್ಷಕರಿಗೆ ನೀಡಲಾಗಿಲ್ಲ. ಆದರೆ ಭವಿಷ್ಯದ ನವೀಕರಣಗಳ ಮೂಲಕ ಈ ವೈಶಿಷ್ಟ್ಯವನ್ನು ಎಲ್ಲರಿಗೂ ಹೊರತರಲಾಗುವುದು ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-Airtel New Plan: ಮೂರು ಅತ್ಯದ್ಭುತ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಏರ್ಟೆಲ್

Twitter ನಲ್ಲಿ ,ಎಡಿಟ್ ಬಟನ್‌' ಗಾಗಿ ನಿರೀಕ್ಷಿಸಲಾಗುತ್ತಿದೆ
ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ Twitter ನಲ್ಲಿ ಸಹ, ಬಳಕೆದಾರರು ಎಡಿಟ್ ಬಟನ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಟ್ವಿಟರ್ ಕಳೆದ ಹಲವಾರು ತಿಂಗಳುಗಳಿಂದ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ. ವರದಿಗಳ ಪ್ರಕಾರ, ಈ ವೈಶಿಷ್ಟ್ಯವನ್ನು ಮೊದಲು ಟ್ವಿಟರ್ ಬ್ಲೂ ಬಳಕೆದಾರರಿಗೆ ಜಾರಿಗೆ ತರಲಾಗುತ್ತದೆ ಎನ್ನಲಾಗಿದೆ. ನಂತರ ಈ ಎಡಿಟ್ ಬಟನ್ ವೈಶಿಷ್ಟ್ಯವನ್ನು ಇತರ ಬಳಕೆದಾರರಿಗಾಗಿಯೂ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಕಂಪನಿಯು ಮುಂಬರುವ ಎಡಿಟ್ ಬಟನ್ ವೈಶಿಷ್ಟ್ಯದ ಕುರಿತು  ಏಪ್ರಿಲ್ 6 ರಂದು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದೆ. ಇದಕ್ಕೂ ಮೊದಲು, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಏಪ್ರಿಲ್ 5 ರಂದು ಟ್ವಿಟರ್‌ಗೆ ಎಡಿಟ್ ಬಟನ್ ವೈಶಿಷ್ಟ್ಯವನ್ನು ಸೇರಿಸುವ ಕುರಿತು ಸಮೀಕ್ಷೆಯನ್ನು ನಡೆಸಿದ್ದರು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News