Vastu Tips for Money Plant: ಧನ ಕುಬೇರ ಹಾಗೂ ಬುಧ ಗ್ರಹದ ಜೊತೆಗೆ ಮನಿಪ್ಲಾಂಟ್ ನೇರ ಸಂಬಂಧವನ್ನು ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ಹಲವಾರು ಸಸ್ಯಗಳ ಕುರಿತು ಉಲ್ಲೇಖಿಸಲಾಗಿದ್ದು, ಅವುಗಳನ್ನು ಮನೆಯಲ್ಲಿ ನೆಡುವುದರಿಂದ ವ್ಯಕ್ತಿಯೋಬನ ದಿನಗಳೇ ಬದಲಾಗುತ್ತವೆ ಮತ್ತು ಆತನ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೆಸರೇ ಸೂಚಿಸುವಂತೆ 'ಮನಿ ಪ್ಲಾಂಟ್' ನೆದುವುದ್ರಿಂದ ಏನು ಪ್ರಯೋಜನವಾಗುತ್ತದೆ ಎಂಬುದನ್ನು ನೀವು ಊಹಿಸಬಹುದು, ಆದರೆ, ಕೆಲವು ವಿಶೇಷ ನಿಯಮಗಳು ಮತ್ತು ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ ಮನಿಪ್ಲಾಂಟ್ ನಿಮ್ಮ ಪಾಲಿಗೆ ಲಾಭಕಾರಿ ಸಾಬೀತಾಗಲಿದೆ.
ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಧನಾತ್ಮಕತೆಯ ಸಂಚಾರ ಉಂಟಾಗುತ್ತದೆ. ಕುಟುಂಬ ಎಲ್ಲಾ ಸದಸ್ಯರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಲಾಭಕ್ಕಾಗಿ ಇದನ್ನು ಮನೆ ಅಥವಾ ಕಚೇರಿಯಲ್ಲಿ ನೆದಲಾಗುತ್ತದೆ. ಅಲ್ಲದೆ, ಮನಿ ಪ್ಲಾಂಟ್ಗೆ ಸಂಬಂಧಿಸಿದ ಕೆಲವು ನಿಯಮಗಳು ಮತ್ತು ಕ್ರಮಗಳನ್ನು ಅನುಸರಿಸಿದರೆ, ಶೀಘ್ರದಲ್ಲೇ ಅದರ ಸಕಾರಾತ್ಮಕ ಪರಿಣಾಮವು ನಿಮಗೆ ಕಂಡುಬರಲಾರಂಭಿಸುತ್ತದೆ.
ಮನಿ ಪ್ಲಾಂಟ್ ಮತ್ತು ಹಾಲಿನ ಈ ಉಪಾಯ ಅದ್ಭುತವಾಗಿದೆ
ವಾಸ್ತು ಶಾಸ್ತ್ರದಲ್ಲಿ, ಮನಿ ಪ್ಲಾಂಟ್ ಬಗ್ಗೆ ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಹಾಲಿನ ಜೊತೆಗೆ ಮನಿಪ್ಲಾಂಟ್ ಬಳಕೆ ಅವುಗಳಲ್ಲಿ ಒಂದಾಗಿದೆ. ಮನಿ ಪ್ಲಾಂಟ್ಗೆ ಸ್ವಲ್ಪ ಹಾಲನ್ನು ಅರ್ಪಿಸುವುದು ಶುಭ ಫಲ ನೀಡುತ್ತದೆ ಎನ್ನಲಾಗಿದೆ. ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ವಸ್ತು ಅಥವಾ ಪ್ರದಾರ್ಥ ತುಂಬಾ ಪ್ರಿಯವಾದುದು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ ಮನಿಪ್ಲಾಂಟ್ ಗೆ ಹಾಲು ಅಸ್ಪಿಸುವುದರಿಂದ ಅದು ಚೆನ್ನಾಗಿ ಬೆಳೆಯುತ್ತದೆ. ಮನಿ ಪ್ಲಾಂಟ್ ಮನೆಯಲ್ಲಿ ಹೇಗೆ ಬೆಳೆಯುತ್ತದೆಯೋ, ಹಾಗೆಯೇ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.
ಈ ರೀತಿ ಮನಿ ಪ್ಲಾಂಟ್ಗೆ ಹಾಲು ಅರ್ಪಿಸಿ
ಮನಿ ಪ್ಲಾಂಟ್ಗೆ ನೀರುಣಿಸುವಾಗ, ನೀರಿನಲ್ಲಿ ಕೆಲವು ಹನಿ ಹಾಲನ್ನು ಬೆರೆಸಿ. ಇದರಿಂದ ಮನಿ ಪ್ಲಾಂಟ್ನ ಬೆಳವಣಿಗೆಯು ಉತ್ತಮವಾಗಿರುತ್ತದೆ ಮತ್ತು ದೇವಿ ಲಕ್ಷ್ಮಿಯ ಆಶೀರ್ವಾದವು ಸದಾ ನಿಮ್ಮ ಮೇಲಿರುತ್ತದೆ. ಹೀಗಿರುವಾಗ ಮನೆಯ ಆರ್ಥಿಕ ಪರಿಸ್ಥಿತಿಯಲ್ಲೂ ಕೂಡ ಸುಧಾರಿಸುತ್ತದೆ.
ಇದನ್ನೂ ಓದಿ-ಮೊಸರಿನ ಜೊತೆಗೆ ಈ ಆಹಾರಗಳನ್ನು ಸೇವಿಸಲೇ ಬಾರದು..! ಈ ಸಮಸ್ಯೆಗಳು ಎದುರಾಗಬಹುದು
ಈ ದಿಕ್ಕಿನಲ್ಲಿ ಮನಿಪ್ಲಾಂಟ್ ಇಡುವುದು ಎಂದಿಗೂ ಪ್ರಯೋಜನಕಾರಿ
ಮನಿ ಪ್ಲಾಂಟ್ ಅನ್ನು ಸರಿಯಾದ ದಿಕ್ಕಿನಲ್ಲಿಟ್ಟರೆ ಅದು ಶುಭ ಫಲಿತಾಂಶಗಳನ್ನು ನೀಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಆಗ್ನೇಯ ದಿಕ್ಕು ಮನಿ ಪ್ಲಾಂಟ್ ಅನ್ನು ನೆಡಲು ಅಥವಾ ಇಡಲು ಸರಿಯಾದ ದಿಕ್ಕಾಗಿದೆ. ಮನಿ ಪ್ಲಾಂಟ್ ಅನ್ನು ಒಂದು ವೇಳೆ ನೀವು ಸರಿಯಾದ ದಿಕ್ಕಿನಲ್ಲಿ ಇರಿಸದಿದ್ದರೆ, ಅದು ವಿರುದ್ಧ ಫಲಿತಾಂಶಗಳನ್ನು ನೀಡುತ್ತದೆ. ಮನಿ ಪ್ಲಾಂಟ್ ಮತ್ತು ಹಾಲಿನ ಈ ಪರಿಹಾರವು ವ್ಯಕ್ತಿಯನ್ನು ಶ್ರೀಮಂತನನ್ನಾಗಿಸಬಹುದು.
ಇದನ್ನೂ ಓದಿ-ಈ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವುದು ಅತ್ಯಂತ ಶ್ರೇಯಸ್ಕರ! ಒಲಿದು ಬರುವುದು ಧನ ಸಂಪತ್ತು , ಉತ್ತಮ ಆರೋಗ್ಯ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.