ಬಾಲಿವುಡ್ ನಲ್ಲಿ ಖ್ಯಾತಿ ಪಡೆದ ಕೆಲವರು ತಬ್ದೆಯ ಸರ್ ನೇಮ್ ಬದಲು ತಾಯಿಯ ಸರ್ ನೇಮ್ ಬಳಸುತ್ತಾರೆ.
ಬೆಂಗಳೂರು : Bollywood Celebs Surname: ಒಬ್ಬ ವ್ಯಕ್ತಿಯನ್ನು ಅವರ ಹೆಸರಿನಿಂದ ಗುರುತಿಸಲಾಗುತ್ತದೆ. ಆದರೆ ಅವರ ಉಪನಾಮ ಅಂದರೆ ಸರ್ ನೇಮ್ ಕೂಡಾ ವ್ಯಕ್ತಿಗೆ ಖ್ಯಾತಿ ತಂದು ಕೊಡುತ್ತದೆ. ವ್ಯಕ್ತಿಯ ಹೆಸರಿನ ಮೂಲಕ ಅವರು ಯಾವ ಕುಟುಂಬಕ್ಕೆ ಸೇರಿದ್ದಾರೆ ಎನ್ನುವುದು ಸುಲಭವಾಗಿ ತಿಳಿದುಕೊಳ್ಳಬಹುದು. ಹೆಚ್ಚಾಗಿ ತಂದೆಯ ಉಪನಾಮವನ್ನು ಬಳಸಲಾಗುತ್ತದೆ. ಆದರೆ ಬಾಲಿವುಡ್ ನಲ್ಲಿ ಖ್ಯಾತಿ ಪಡೆದ ಕೆಲವರು ತಬ್ದೆಯ ಸರ್ ನೇಮ್ ಬದಲು ತಾಯಿಯ ಸರ್ ನೇಮ್ ಬಳಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಲ್ಲಿಕಾ ಶೆರಾವತ್: ಮಲ್ಲಿಕಾ ಶೆರಾವತ್ ಅವರ ನಿಜವಾದ ಹೆಸರು ರೀಮಾ ಲಂಬಾ. ಆದರೆ ಮಲ್ಲಿಕಾ ತನ್ನ ತಂದೆಯ ಉಪನಾಮವನ್ನು ಬಿಟ್ಟು ತನ್ನ ತಾಯಿಯ ಉಪನಾಮವನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ .
ರಿಯಾ ಸೇನ್: ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ರಿಯಾ ಸೇನ್ ಅವರು ಪ್ರಸಿದ್ಧ ನಟಿ ಮತ್ತು ರಾಜಕಾರಣಿ ಮುನ್ಮುನ್ ಸೇನ್ ಅವರ ಪುತ್ರಿ. ರಿಯಾ ಸೇನ್ ಅವರ ತಂದೆಯ ಹೆಸರು ಭರತ್ ದೇವ್ ವರ್ಮ ಆದರೆ ರಿಯಾ ಯಾವಾಗಲೂ ತನ್ನ ತಾಯಿಯ ಉಪನಾಮದೊಂದಿಗೆ ತನ್ನ ಗುರುತಿಸಿಕೊಂಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ: ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ತಾಯಿಯ ಹೆಸರನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡಿದ್ದಾರೆ. ಹಂಚಿಕೊಳ್ಳಿ
ಇಮ್ರಾನ್ ಖಾನ್: ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ತಮ್ಮ ನಟನೆಯ ಮೂಲಕ ಜನರನ್ನು ರಂಜಿಸಿದ ಇಮ್ರಾನ್ ಖಾನ್ ಅವರು ತಮ್ಮ ತಾಯಿಯ ಉಪನಾಮವನ್ನು ಅಳವಡಿಸಿಕೊಂಡಿದ್ದಾರೆ. ಇಮ್ರಾನ್ ಅವರ ಪೋಷಕರ ಹೆಸರು ನುಜ್ರತ್ ಖಾನ್ ಮತ್ತು ಅನಿಲ್ ಪಟೇಲ್ . ಆದರೆ ಇಮ್ರಾನ್ ಪಟೇಲ್ ಎಂಬ ಸರ್ ನೇಮ್ ಬಳಸದೆ ಖಾನ್ ಅನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ. ಅವರ ಉಪನಾಮವನ್ನು ಹಾಕುವುದು ಉತ್ತಮ ಎಂದು ಅವರು ಭಾವಿಸಿದರು.
ಕೊಂಕಣ ಸೇನ್: ಬಾಲಿವುಡ್ನಲ್ಲಿ ಖ್ಯಾತ ನಟಿ ಕೊಂಕಣ ಸೇನ್ ಕೂಡ ತನ್ನ ತಾಯಿಯ ಉಪನಾಮವನ್ನೇ ಬಳಸಿದ್ದಾರೆ. ಕೊಂಕಣ ಅವರ ತಾಯಿಯ ಹೆಸರು ಅಪರ್ಣಾ ಸೇನ್.
ಲೀಸಾ ಹೇಡನ್: ಒಂದು ಕಾಲದಲ್ಲಿ ಬಾಲಿವುಡ್ ಅನ್ನು ತನ್ನ ಹಾಟ್ ಲುಕ್ನಿಂದ ಬೆರಗುಗೊಳಿಸಿದ್ದ ಲಿಸಾ ಹೇಡನ್, ತನ್ನ ತಾಯಿಯ ಸರ್ ನೇಮ್ ಆನ್ ಬಳಸಿದ್ದಾರೆ. ಲಿಸಾಳ ತಂದೆಯ ಉಪನಾಮ ವೆಂಕಟ್, ಆದರೆ ನಟಿ ತಂದೆಯ ಉಪನಾಮವನ್ನು ಬಿಟ್ಟು ತಾಯಿಯ ಉಪನಾಮವಾದ ಹೇಡನ್ ಅನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದ್ದಾರೆ.