Sri Lanka Crisis: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕಾ ಜನರ ಪರಿಸ್ಥಿತಿ ಹೇಗಿದೆ ನೋಡಿ

ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಶ್ರೀಲಂಕಾದ ಜನರು ಮುಂದೇನು ಮಾಡುವುದು ಎಂದು ತಲೆಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ.

ನವದೆಹಲಿ: ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಮಾನ್ಯ ಜನರು ಜೀವನ ನಡೆಸಲು ಸಾಧ‍್ಯವಾಗದ ಪರಿಸ್ಥಿತಿಯಲ್ಲಿ ಪರದಾಡುತ್ತಿದ್ದಾರೆ. ಆಹಾರ ಧಾನ್ಯಗಳಿಂದ ಹಿಡಿದು ಹಾಲು ಮತ್ತು ಔಷಧಿಗಳವರೆಗೆ ಜನರಿಗೆ ಕ್ಷಾಮ ತಲೆದೋರಿದೆ. ಶ್ರೀಲಂಕಾದಲ್ಲಿ ಪ್ರತಿದಿನವೂ ಸಾಮಾನ್ಯ ಜನರು ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದ ಲಂಕಾ ಜನರು ಮುಂದೇನು ಮಾಡುವುದು ಎಂದು ತಲೆಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಅಲ್ಲಿನ ಜನರ ಪರಿಸ್ಥಿತಿ ನೋಡಿದರೆ ನಿಮ್ಮ ಕಣ್ಣಂಚಲ್ಲಿ ನೀರು ಜೀನುಗದೆ ಇರಲಾರದು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯು ಶ್ರೀಲಂಕಾದ ಆರ್ಥಿಕತೆಯನ್ನು ಗಂಭೀರವಾಗಿ ಹಾನಿಗೊಳಿಸಿದೆ. ಈ ವರ್ಷ ಶ್ರೀಲಂಕಾದಲ್ಲಿ ಪೆಟ್ರೋಲ್ ಬೆಲೆ ಶೇ.90ರಷ್ಟು ಮತ್ತು ಡೀಸೆಲ್ ಬೆಲೆ ಶೇ.138ರಷ್ಟು ಹೆಚ್ಚಾಗಿದೆ. ಈ ವೇಳೆ ಚಾಲಕರು ಇಂಧನ ಪಡೆಯಲು ಪರದಾಡುವಂತಗಾಗಿದೆ. ಸರಿಯಾಗಿ ಇಂಧನ ಸಿಗದೆ ತಮ್ಮ ವಾಹನಗಳನ್ನು ಎಳೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

2 /6

ಶ್ರೀಲಂಕಾದಲ್ಲಿ ಹಣದುಬ್ಬರದ ಮಟ್ಟವನ್ನು ಇದುವರೆಗಿನ ಕಳಪೆ ಮಟ್ಟಕ್ಕೆ ಸೇರಿಸಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಹಣದುಬ್ಬರ ದರ ಶೇ.17 ದಾಟಿದೆ. ಒಂದು ಡಾಲರ್ ಮೌಲ್ಯವು 360 ಶ್ರೀಲಂಕಾ ರೂ. ಇದೆ. ಇಂತಹ ಪರಿಸ್ಥಿತಿಯಲ್ಲಿ ಸಿಲಿಂಡರ್‌ಗಳಿಗಾಗಿ ರಸ್ತೆಗಳಲ್ಲಿ ಉದ್ದನೆಯ ಸಾಲುಗಳು ಕಂಡುಬರುತ್ತಿವೆ. ಸಾರ್ವಜನಿಕರು ಮೂಲ ಸೌಕರ್ಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

3 /6

ತೈಲ, ಅನಿಲ, ಔಷಧಗಳು, ಹಿಟ್ಟು ಮತ್ತು ಅಕ್ಕಿಯಂತಹ ಮೂಲ ಸೌಕರ್ಯಗಳಿಗಾಗಿ ಶ್ರೀಲಂಕಾ ಇತರ ದೇಶಗಳ ಮೇಲೆ ಅವಲಂಬಿತವಾಗಿದೆ. ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿಯನ್ನು ಕಂಡು ಕಂಗಾಲಾಗಿರುವ ಜನರು ಆಳುವ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಶ್ರೀಲಂಕಾದ ತುಂಬಾ ಪ್ರತಿಭಟನೆಗಳು ನಡೆಯುತ್ತಿವೆ. ಹಿಂಸಾಚಾರ ನಿಲ್ಲಿಸುವಂತೆ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಬಿಕ್ಕಟ್ಟನ್ನು ನಿವಾರಿಸಲು ಸರ್ವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

4 /6

ದಿನೇ ದಿನೇ ಶ್ರೀಲಂಕಾದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕರ್ಫ್ಯೂ ನಂತರವೂ ಕೋಪಗೊಂಡ ಜನರು ಪೊಲೀಸ್ ಅಧಿಕಾರಿಗಳನ್ನು ಥಳಿಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಹಿಂಸಾತ್ಮಕ ಘಟನೆಯಲ್ಲಿ ಕೊಲಂಬೊದ ಉನ್ನತ ಅಧಿಕಾರಿಗಳೂ ಗಾಯಗೊಂಡಿದ್ದಾರೆ. ಉದ್ರಿಕ್ತ ಗುಂಪನ್ನು ಚದುರಿಸಲು ಕೆಲವು ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

5 /6

ಶ್ರೀಲಂಕಾ ಪ್ರಧಾನಿ ರಾಜೀನಾಮೆ ನೀಡಿದ ನಂತರವೂ ಜನರು ಹಿಂಸಾತ್ಮಕ ಪ್ರತಿಭಟನೆ ನಿಲ್ಲಿಸಿಲ್ಲ. ಇದನ್ನು ತಡೆಯಲು ರಕ್ಷಣಾ ಸಚಿವಾಲಯ ಪ್ರತಿಭಟನಾಕಾರರನ್ನು ಕಂಡರೆ ಗುಂಡಿಕ್ಕಲು ಆದೇಶಿಸಿದೆ. ಕೋಪಗೊಂಡ ಜನರು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮನೆಗೆ ಬೆಂಕಿ ಹಚ್ಚಿದ್ದು, 8 ಜನರು ಸಾವನ್ನಪ್ಪಿದ್ದಾರೆ.

6 /6

ಶ್ರೀಲಂಕಾದಲ್ಲಿ ಸರಣಿ ಸ್ಫೋಟದ ನಂತರ ಅಲ್ಲಿನ ಪ್ರವಾಸೋದ್ಯಮ ಬಂದ್ ಆಗಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಇದು ಬಹುದೊಡ್ಡ ಕಾರಣವಾಗಿದೆ. ಈಗ ಶ್ರೀಲಂಕಾದ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಅದು ವಿದೇಶಿ ಸಾಲವನ್ನು ಹಿಂದಿರುಗಿಸದ ಪರಿಸ್ಥಿತಿಯಲ್ಲಿದೆ. ದೇಶದಲ್ಲಿ ಜನರಿಗೆ ಸರಿಯಾಗಿ ಆಹಾರವೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.