ಬೆಂಗಳೂರು : ಏಪ್ರಿಲ್ 30 ರ ಸೂರ್ಯಗ್ರಹಣದ 15 ದಿನಗಳ ನಂತರ ಚಂದ್ರಗ್ರಹಣ ಸಂಭವಿಸಲಿದೆ. ಮೇ 16ರಂದು ಚಂದ್ರಗ್ರಹಣ ಸಂಭವಿಸಲಿದೆ. ಇದೇ ದಿನ ವೈಶಾಖ ಹುಣ್ಣಿಮೆಯ ತಿಥಿಯೂ ಹೌದು. ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ ಎಂದು ಹೇಳಲಾಗಿದೆ. ಈ ಬಾರಿಯ ಗ್ರಹಣ ಸಂಪೂರ್ಣ ಚಂದ್ರಗ್ರಹಣವಾಗಲಿದೆ. ಅಷ್ಟೇ ಅಲ್ಲ, ಈ ದಿನ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಹಾಗಾಗಿ ಇದನ್ನು ಬ್ಲಡ್ ಮೂನ್ ಎಂದೂ ಕರೆಯುತ್ತಾರೆ.
ಎಲ್ಲಿ ಕಾಣಿಸುತ್ತದೆ ಬ್ಲಡ್ ಮೂನ್ ?
ಈ ಬಾರಿ ಮೇ 16ರಂದು ಗೋಚರಿಸುವ ಚಂದ್ರಗ್ರಹಣ ಮೇ 15ರ ರಾತ್ರಿ 10.28ಕ್ಕೆ ಆರಂಭವಾಗಲಿದ್ದು, ಮೇ 16ರ ಮಧ್ಯರಾತ್ರಿ 1.55ರವರೆಗೆ ನಡೆಯಲಿದೆ. ಈ ಬಾರಿಯ ಚಂದ್ರಗ್ರಹಣ ವಿಶ್ವದ ಹಲವೆಡೆ ಗೋಚರಿಸಲಿದೆ. ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಮೇ 16 ರಂದು ಸಂಭವಿಸಲಿರುವ ಚಂದ್ರಗ್ರಹಣವು ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾದ ಪೂರ್ವ ಭಾಗದಲ್ಲಿ ಗೋಚರಿಸುತ್ತದೆ. ಇದನ್ನು ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿಯೂ ಕಾಣಬಹುದು.
ಇದನ್ನೂ ಓದಿ : Budh Vakri 2022: ಇಂದಿನಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭ
ಬ್ಲಡ್ ಮೂನ್ ಎಂದರೇನು ? :
ವಿಜ್ಞಾನಿಗಳ ಪ್ರಕಾರ, ಚಂದ್ರಗ್ರಹಣದಂದು ಸಂಪೂರ್ಣ ಗ್ರಹಣ ಸಂಭವಿಸಿದಾಗ ಅದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಚಂದ್ರ ಸಂಪೂರ್ಣವಾಗಿ ಕೆಂಪು ಬಣ್ಣದಲ್ಲಿರುತ್ತಾನೆ. ಇದೊಂದು ಖಗೋಳ ಘಟನೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ ಮತ್ತು ಅದರ ನೆರಳು ಚಂದ್ರನ ಬೆಳಕನ್ನು ತಡೆಯುತ್ತದೆ. ಚಂದ್ರನು ಭೂಮಿಯನ್ನು ಸಮೀಪಿಸಿದಾಗ, ಅದರ ಬಣ್ಣವು ಗಾಢ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.
2022 ರ ಚಂದ್ರಗ್ರಹಣದ ಸೂತಕ ಅವಧಿ :
ಮೇ 16 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ ಗೋಚರಿಸದ ಕಾರಣ, ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಅಂದಹಾಗೆ, ಜ್ಯಿತಿಶ್ಯದ ಪ್ರಕಾರ, ಸೂತಕ ಅವಧಿಯು ಚಂದ್ರಗ್ರಹಣದ ಸಮಯಕ್ಕಿಂತ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಚಂದ್ರಗ್ರಹಣವು ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ ಮತ್ತು ಸೂರ್ಯಗ್ರಹಣವು ಅಮಾವಾಸ್ಯೆಯಂದು ಸಂಭವಿಸುತ್ತದೆ .
ಇದನ್ನೂ ಓದಿ : ರಾಜನೀತಿಯಲ್ಲಿ ಈ ರಾಶಿಯವರದ್ದು ಎತ್ತಿದ ಕೈ ..! ಶ್ರೀ ರಾಮ ಕೂಡಾ ಇದೇ ರಾಶಿಯಲ್ಲಿ ಅವತರಿಸಿದ್ದರಂತೆ
ಈ ರಾಶಿಯವರಿಗೆ ಗ್ರಹಣವು ಶುಭಕರವಾಗಿರುತ್ತದೆ :
ಗ್ರಹವು ತನ್ನ ದಶಾವನ್ನು ಬದಲಾಯಿಸಿದಾಗ, ಅದರ ಪರಿಣಾಮಗಳು ವ್ಯಕ್ತಿಯ ಜೀವನದ ಮೇಲೆ ಕಂಡುಬರುತ್ತವೆ. ಆದ್ದರಿಂದ, ಚಂದ್ರಗ್ರಹಣದ ಶುಭ ಮತ್ತು ಅಶುಭ ಪರಿಣಾಮಗಳು ವ್ಯಕ್ತಿಯ ಜೀವನದ ಮೇಲೆ ಸಹ ಕಂಡುಬರುತ್ತವೆ. ಮೇ 16 ರಂದು ಸಂಭವಿಸಲಿರುವ ಚಂದ್ರಗ್ರಹಣವು ಮೇಷ, ಸಿಂಹ ಮತ್ತು ಧನು ರಾಶಿಯ ಜನರಿಗೆ ವಿಶೇಷವಾಗಿ ಫಲಪ್ರದವಾಗಿರಲಿದೆ. ಈ ರಾಶಿಯವರು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಹೊಸ ಉದ್ಯೋಗಾವಕಾಶಗಳು ಬರಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3hEw2hy ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.