ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ಸಮ್ಮಿಶ್ರ ಸರ್ಕಾರದ ಆಯುಷ್ಯದ ಕುರಿತು ಮಾತನಾಡಿದ್ದ ವೀಡಿಯೋ ಬಗ್ಗೆ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ವೀಡಿಯೋಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇದನ್ನು ಅಸ್ಥಿರಗೊಳಿಸಲು ಕೆಲವು ಶಕ್ತಿಗಳು ರಾತ್ರಿ-ಹಗಲು ಶ್ರಮಿಸುತ್ತಿವೆ. ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ-ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮ ಅಲ್ಲ. ಇದನ್ನು ನಂಬಿ ಮೈತ್ರಿ ಪಕ್ಷಗಳ ನಾಯಕರು ಪ್ರತಿಕ್ರಿಯಿಸಬಾರದು, ನಿರ್ಲಕ್ಷಿಬೇಕು ಎಂದು ಮೈತ್ರಿ ಪಕ್ಷಗಳ ನಾಯಕರಿಗೆ ಸಿದ್ದು ಕರೆ ನೀಡಿದ್ದಾರೆ.
ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇದನ್ನು ಅಸ್ಥಿರಗೊಳಿಸಲು ಕೆಲವು ಶಕ್ತಿಗಳು ರಾತ್ರಿ-ಹಗಲು ಶ್ರಮಿಸುತ್ತಿವೆ. ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ-ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮ ಅಲ್ಲ. ಇದನ್ನು ನಂಬಿ ಮೈತ್ರಿ ಪಕ್ಷಗಳ ನಾಯಕರು ಪ್ರತಿಕ್ರಿಯಿಸಬಾರದು, ನಿರ್ಲಕ್ಷಿಬೇಕು.@INCKarnataka
— Siddaramaiah (@siddaramaiah) June 30, 2018
ಇದರ ಬೆನ್ನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಮಾಜಿ ಸಿಎಂ, ನನ್ನ ಖಾಸಗಿ ಸಂಭಾಷಣೆಯ ಎಡಿಟೆಡ್ ವಿಡಿಯೋ ಬಗ್ಗೆ ಶುಕ್ರವಾರದ ವರೆಗೆ ನಾನು ಪ್ರತಿಕ್ರಿಯಿಸಿರಲೇ ಇಲ್ಲ. ಹೀಗಿರುವಾಗ ಯು ಟರ್ನ್- ಹಿ ಟರ್ನ್ ಪ್ರಶ್ನೆ ಎಲ್ಲಿದೆ? ಅದು ದುರುದ್ದೇಶದಿಂದ ಕೂಡಿದ ಎಡಿಟೆಡ್ ವಿಡಿಯೊ. ಅದರ ಹಿಂದೆ ಯಾರಿದ್ದರು ಎನ್ನುವುದನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದಿದ್ದಾರೆ.
ನನ್ನ ಖಾಸಗಿ ಸಂಭಾಷಣೆಯ ಎಡಿಟೆಡ್ ವಿಡಿಯೋ ಬಗ್ಗೆ ಶುಕ್ರವಾರದ ವರೆಗೆ ನಾನು ಪ್ರತಿಕ್ರಿಯಿಸಿರಲೇ ಇಲ್ಲ. ಹೀಗಿರುವಾಗ ಯು ಟರ್ನ್- ಹಿ ಟರ್ನ್ ಪ್ರಶ್ನೆ ಎಲ್ಲಿದೆ? ಅದು ದುರುದ್ದೇಶದಿಂದ ಕೂಡಿದ ಎಡಿಟೆಡ್ ವಿಡಿಯೊ. ಅದರ ಹಿಂದೆ ಯಾರಿದ್ದರು ಎನ್ನುವುದನ್ನು ಶೀಘ್ರ ಪತ್ತೆ ಮಾಡಲಾಗುವುದು.@INCKarnataka
— Siddaramaiah (@siddaramaiah) June 30, 2018