Covid-19 Fourth Wave - ಕರೋನಾದ ನಾಲ್ಕನೇ ಅಲೆಯ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಓಮಿಕ್ರಾನ್ನ ಅನೇಕ ಹೊಸ ರೂಪಾಂತರಗಳು ಜನರಲ್ಲಿರುವ ಈಗಾಗಲೇ ಬಂದಿರುವ ಪ್ರತಿಕಾಯಗಳನ್ನು ತಪ್ಪಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಂಡವರ ರಕ್ತದಲ್ಲಿ ಈ ವೈರಾಣುಗಳು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿರುವುದು ಒಂದು ಸಮಾಧಾನದ ಸಂಗತಿಯಾಗಿದೆ.
ಹಲವಾರು ಸಂಸ್ಥೆಗಳ ವಿಜ್ಞಾನಿಗಳು ಒಟ್ಟಾಗಿ Omicron ಬಿಎ.4 ಮತ್ತು ಬಿಎ.5 ರೂಪಾಂತರಗಳ ಅಧ್ಯಯನ ನಡೆಸಿದ್ದಾರೆ. ಇದನ್ನು ಕಳೆದ ತಿಂಗಳು WHOನ ಮೇಲ್ವಿಚಾರಣಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಧ್ಯಯನದ ಸಮಯದಲ್ಲಿ, ಈ ಹಿಂದೆ ಒಮಿಕ್ರಾನ್ ಸೋಂಕಿಗೆ ಒಳಗಾದ 39 ಜನರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ 15 ಮಂದಿಗೆ ಕರೋನಾ ಲಸಿಕೆ ಕೂಡ ಸಿಕ್ಕಿದೆ. 8 ಜನರಿಗೆ ಫೈಜರ್ ಲಸಿಕೆ ನೀಡಲಾಗಿದೆ. 7 ಜನರಿಗೆ ಜಾನ್ಸನ್ ಮತ್ತು ಜಾನ್ಸನ್ ಮತ್ತು 24 ಯಾವುದೇ ಲಸಿಕೆಯನ್ನು ಪಡೆದುಕೊಂಡಿರಲಿಲ್ಲ.
ಇದನ್ನೂ ಓದಿ-Benefits of Tea : ನೀವು ಚಹಾ ಪ್ರಿಯರೆ? ಹಾಗಿದ್ರೆ, ತಪ್ಪದೆ ತಿಳಿಯಿರಿ ಅದರ ಅಪಾಯ-ಉಪಾಯ!
'ಲಸಿಕೆ ಹಾಕಿಸಿಕೊಂಡವರಲ್ಲಿ ಐದು ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿ ಇರುತ್ತದೆ ಮತ್ತು ಹೆಚ್ಚು ರಕ್ಷಣೆ ಪಡೆಯುತ್ತಾರೆ' ಎಂದು ಈ ಅಧ್ಯಯನ ಹೇಳಿದೆ. ಲಸಿಕೆ ಹಾಕದವರಲ್ಲಿ 8 ಪಟ್ಟು ಕಡಿಮೆ ಪ್ರತಿಕಾಯಗಳಿರುತ್ತವೆ. ಇವರೂ BA.1 ಸೋಂಕಿಗೆ ಒಳಗಾಗಿದ್ದರು ಆದರೆ ಅವರು BA.4 ಮತ್ತು BA.5 ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಬಹಳ ಕಡಿಮೆ ಹೊಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ-ಅತಿ ಸಣ್ಣ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವ ಕಾರಣ ಮತ್ತು ಸುಲಭ ಪರಿಹಾರ
ದಕ್ಷಿಣ ಆಫ್ರಿಕಾದಲ್ಲಿ ಕರೋನಾದ ಐದನೇ ಅಲೆ ಅಕಾಲಿಕವಾಗಿ ಬರಲಿದೆ ಎಂದು ಅಧಿಕಾರಿಗಳು ಮತ್ತು ವಿಜ್ಞಾನಿಗಳು ಹೇಳಿದ್ದಾರೆ. ಬಿಎ.4 ಮತ್ತು ಬಿಎ.5 ರೂಪಾಂತರಿಗಳಿಂದ ಈ ಅಲೆ ಬರಬಹುದು ಎಂದು ಅವರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ 60 ಮಿಲಿಯನ್ ಜನಸಂಖ್ಯೆಯಲ್ಲಿ ಕೇವಲ ಶೇ.30 ರಷ್ಟು ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.