ಓಮಿಕ್ರಾನ್ನ ಹೊಸ ರೂಪಾಂತರಗಳು ಪ್ರತಿಕಾಯಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಲಸಿಕೆ ಹಾಕಿಸಿಕೊಂಡವರಲ್ಲಿ ಐದು ಪಟ್ಟು ಹೆಚ್ಚು ರೋಗನಿರೋಧಕ ಶಕ್ತಿ ಇರಲಿದೆ ಎಂದು ವಿಜ್ಞಾನಿಗಳು ಹೇಳಿರುವ ಸಂಗತಿ ಸಮಾಧಾನಕರ ಸಂಗತಿ ಎಂದೇ ಹೇಳಬಹುದು
Omicron Variant: ಇದೀಗ ಭಾರತದಲ್ಲಿಯೂ ಕೂಡ ಮೂರನೇ ಡೋಸ್ (Booster Dose) ಕರೋನಾ ಲಸಿಕೆ (Coronavirus Vaccine) ನೀಡಲಾಗುವುದೇ? ಬಲ್ಲ ಮೂಲಗಳು ಹೇಳುವ ಪ್ರಕಾರ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದ (South Africa)ನಂತರ, ಅನೇಕ ದೇಶಗಳಲ್ಲಿ ಕಂಡುಬರುವ ಓಮಿಕ್ರಾನ್ ರೂಪಾಂತರವು (Coronavirus New Strain) ಕಳವಳವನ್ನು ಉಂಟುಮಾಡಿದೆ.
Coronavirus New Strain - ಚೀನಾದ ಗ್ವಾಂಗ್ಝೂ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ನ ಹೊಸ ರೂಪಾಂತರಿಯ (Coronavirus New Strain) ಆತಂಕ ಸೃಷ್ಟಿಸಿದೆ. ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಇದೀಗ ಡ್ರೋನ್ ನಿಯೋಜಿಸಲಾಗಿದೆ.
Oxygen Level In Body - ಕೊರೊನಾ ವೈರಸ್ ನ ಈ ಹೊಸ ರೂಪಾಂತರಿ ಶರೀರದಲ್ಲಿ ವೇಗವಾಗಿ ಆಮ್ಲಜನಕವನ್ನು ಹೀರುತ್ತಿದೆ. ಕೇವಲ ಮೂರರಿಂದ ನಾಲ್ಕು ದಿನಗಳ ಸೋಂಕಿನಿಂದಲೇ ದೇಹದಲ್ಲಿನ ಆಕ್ಸಿಜನ್ ಅಪಾಯದ ಮಟ್ಟಕ್ಕೆ ತಲುಪುತ್ತಿದೆ.
ಕರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ನಿಯಮಾನುಸಾರ Mask ಧರಿಸುವುದು ಕಡ್ಡಾಯ. ಜನ ಮಾಸ್ಕ್ ಏನೋ ಧರಿಸುತ್ತಾರೆ. ಆದರೆ ಮಾಸ್ಕ್ ಹಾಕುವ ವೇಳೆ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇದೇ ಕಾರಣಕ್ಕಾಗಿ ಮಾಸ್ಕ್ ಧರಿಸಿದ್ದರು ಕೆಲವರು ಸೋಂಕಿಗೆ ಒಳಗಾಗುತ್ತಾರೆ.
ಈ ಮೊದಲು ಮಹಾರಾಷ್ಟ್ರ ಬೋರ್ಡ್ ನ 1 ನೇ ತರಗತಿಯಿಂದ 8 ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಪ್ರಮೋಟ್ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಇದೀಗ 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳನ್ನು ಕೂಡಾ ಪರೀಕ್ಷೆಗೆ ಒಳಪಡಿಸದೆ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.
ನಿನ್ನೆ ಒಂದೇ ದಿನಕ್ಕೆ ಮಹಾರಾಷ್ಟ್ರದಲ್ಲಿ 49,447 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ. ಪುಣೆಯಲ್ಲಿಯು ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, 10,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ರಾಜ್ಯದಲ್ಲು ಮತ್ತೆ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲೇ ಕೋವಿಡ್-19 ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರು ಒಂದರಲ್ಲೇ 1,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.