ನವದೆಹಲಿ : PNB Payment Rule: ಎಸ್ಬಿಐ ನಂತರ ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ತನ್ನ ಪೇಮೆಂಟ್ ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಈಗ Positive Pay System (PPS) ಅನ್ನು ಜಾರಿಗೆ ತರಲು ಹೊರಟಿದೆ. PNB ಗಿಂತ ಮುಂಚೆಯೇ ಅನೇಕ ಬ್ಯಾಂಕುಗಳು ಇದನ್ನು ಜಾರಿಗೆ ತಂದಿದೆ. ಇದೀಗ ಮುಂಬರುವ ಏಪ್ರಿಲ್ 4 ರಿಂದ ಈ ನಿಯಮವನ್ನು ಕಡ್ಡಾಯಗೊಳಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ. ಇದಲ್ಲದೇ ಆಕ್ಸಿಸ್ ಬ್ಯಾಂಕ್ (Axis Bank) ಕೂಡ ಹೊಸ ಹಣಕಾಸು ವರ್ಷದಿಂದ ತನ್ನ ನಿಯಮಗಳನ್ನು ಬದಲಾಯಿಸುತ್ತಿದೆ.
ಆಕ್ಸಿಸ್ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ :
ಆಕ್ಸಿಸ್ ಬ್ಯಾಂಕ್ (Axis Bank) ಗ್ರಾಹಕರಿಗೆ ಇದು ಪ್ರಮುಖ ಸುದ್ದಿ. ಏಪ್ರಿಲ್ 1 ರಿಂದ ಬ್ಯಾಂಕ್ ಗ್ರಾಹಕರು ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವ ಮಿತಿ ಹೆಚ್ಚಾಗಲಿದೆ. ಹೊಸ ನಿಯಮ ಜಾರಿ ಬಳಿಕ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ 10 ಸಾವಿರದಿಂದ 12 ಸಾವಿರ ರೂ. ಇಡಬೇಕಾಗುತ್ತದೆ. ಬ್ಯಾಂಕ್ (Bank) ನೀಡಿರುವ ಮಾಹಿತಿ ಪ್ರಕಾರ ಉಚಿತ ನಗದು ವಹಿವಾಟಿನ ಮಿತಿಯನ್ನು ನಾಲ್ಕು ಶುಲ್ಕ ರಹಿತ ವಹಿವಾಟು ಅಥವಾ 1.5 ಲಕ್ಷ ರೂ.ಗೆ ಬದಲಾಯಿಸಲಾಗಿದೆ.
ಇದನ್ನೂ ಓದಿ : ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಬೇಕಾ? ಹಾಗಿದ್ರೆ, ಈ ಕೆಲಸ ಮಾಡಿ
ಪಾವತಿ ನಿಯಮಗಳನ್ನು ಪರಿಶೀಲಿಸಿ :
RBI ನಿಂದ ಜಾರಿಯಾಗಿರುವ ಈ ನಿಯಮವು ಚೆಕ್ ಪಾವತಿ ಪರಿಶೀಲನೆಗೆ ಸಂಬಂಧಿಸಿದ್ದಾಗಿದೆ. ಈ ನಿಯಮದ ಪ್ರಕಾರ, ಯಾವುದೇ ದೃಢೀಕರಣವಿಲ್ಲದಿದ್ದರೆ ಚೆಕ್ ಅನ್ನು ಹಿಂತಿರುಗಿಸಬಹುದು. ಈ ಹಿಂದೆ, ಎಸ್ಬಿಐ (SBI) ಮತ್ತು ಬ್ಯಾಂಕ್ ಆಫ್ ಬರೋಡಾ (Bank Of Baroda) ಕೂಡ ಪಿಪಿಎಸ್ ವ್ಯವಸ್ಥೆಯನ್ನು ಜಾರಿಗೆ ತಂದಿವೆ.
ನೀಡಬೇಕಾಗುತ್ತದೆ ಎಲ್ಲಾ ಮಾಹಿತಿ :
ಏಪ್ರಿಲ್ 4, 202 ರಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ (PNB) Positive Pay System ಅನ್ನು ಕಡ್ಡಾಯಗೊಳಿಸಲಾಗುತ್ತದೆ. ಈ ನಿಯಮದ ಪ್ರಕಾರ, ನೀವು ಬ್ಯಾಂಕ್ ಶಾಖೆ ಅಥವಾ ಡಿಜಿಟಲ್ ಚಾನಲ್ ಮೂಲಕ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಚೆಕ್ ಅನ್ನು ನೀಡಿದರೆ, PPS ದೃಢೀಕರಣವು ಅಗತ್ಯವಾಗಿರುತ್ತದೆ. ಇದರಲ್ಲಿ, ಖಾತೆ ಸಂಖ್ಯೆ, ಚೆಕ್ ಸಂಖ್ಯೆ, ಚೆಕ್ ದಿನಾಂಕ, ಚೆಕ್ ಮೊತ್ತ ಮತ್ತು ಫಲಾನುಭವಿಯ ಹೆಸರನ್ನು ನೀಡಬೇಕು. ಈ ಮಾಹಿತಿಯನ್ನು ಒದಗಿಸದಿದ್ದರೆ, ನಿಮ್ಮ ಚೆಕ್ ಅನ್ನು ಹಿಂತಿರುಗಿಸಲಾಗುತ್ತದೆ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಮಹತ್ವದ ಸುದ್ದಿ! ಮಾ.31 ರೊಳಗೆ ಈ ಕೆಲಸ ಮಾಡಿ, ₹4,500 ಲಾಭ ಪಡೆಯಿರಿ
ಪಿಪಿಎಸ್ ವ್ಯವಸ್ಥೆ ಎಂದರೇನು ?
ಪಿಪಿಎಸ್ ವ್ಯವಸ್ಥೆಯು ವಂಚನೆಯನ್ನು ತಡೆಗಟ್ಟಲು ವಿನ್ಯಾಸಗೊಳಿಸಲಾದ ವ್ಯವಸ್ಥೆಯಾಗಿದೆ. ಇದರ ಪ್ರಕಾರ, ಚೆಕ್ ನೀಡಿದಾಗ ಖಾತೆದಾರರು ಬ್ಯಾಂಕ್ಗೆ ಸಂಪೂರ್ಣ ವಿವರಗಳನ್ನು ನೀಡಬೇಕು. ಈ ಮಾಹಿತಿಯು ಚೆಕ್ನ ದಿನಾಂಕ, ಫಲಾನುಭವಿಯ ಹೆಸರು, ಖಾತೆ ಸಂಖ್ಯೆ ಮತ್ತು ಮೊತ್ತದ ಮಾಹಿತಿಯನ್ನು ವಿದ್ಯುನ್ಮಾನವಾಗಿ SMS, ನೆಟ್ ಬ್ಯಾಂಕಿಂಗ್, ATM ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಒಳಗೊಂಡಿರುತ್ತದೆ.
PPS ಹೇಗೆ ಕೆಲಸ ಮಾಡುತ್ತದೆ?
ಈ ವ್ಯವಸ್ಥೆಯ ಅಡಿಯಲ್ಲಿ, ಚೆಕ್ ನೀಡುವವರು ಎಸ್ಎಂಎಸ್, ಮೊಬೈಲ್ ಅಪ್ಲಿಕೇಶನ್, ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಮೂಲಕ ಚೆಕ್ನ ವಿವರಗಳನ್ನು ಬ್ಯಾಂಕ್ಗೆ ನೀಡಬೇಕು. ಚೆಕ್ ಬ್ಯಾಂಕಿನ ಟೇಬಲ್ ತಲುಪಿದಾಗ, ಖಾತೆದಾರರು ನೀಡಿದ ಮಾಹಿತಿಯನ್ನು ಕ್ರಾಸ್ ಚೆಕ್ ಮಾಡಲಾಗುತ್ತದೆ. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ಚೆಕ್ ಅನ್ನು ತಿರಸ್ಕರಿಸಲಾಗುತ್ತದೆ. ವಂಚನೆಯನ್ನು ತಡೆಗಟ್ಟಲು ಇದನ್ನು ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.