ಲೋಕಸಭಾ ಉಪಚುನಾವಣೆಗೆ ಟಿಎಂಸಿ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಕಣಕ್ಕೆ

ತೃಣಮೂಲ ಕಾಂಗ್ರೆಸ್ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಹಿರಿಯ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಿದೆ.

Written by - Zee Kannada News Desk | Last Updated : Mar 13, 2022, 03:41 PM IST
  • ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹಾಲಿ ಸಂಸದ ಬಾಬುಲ್ ಸುಪ್ರಿಯೊ ಲೋಕಸಭೆಗೆ ರಾಜೀನಾಮೆ ನೀಡಿದ ನಂತರ ಅಸನ್ಸೋಲ್ ಸ್ಥಾನವು ತೆರವಾದಾಗ ಈ ಘೋಷಣೆ ಬಂದಿದೆ.
ಲೋಕಸಭಾ ಉಪಚುನಾವಣೆಗೆ ಟಿಎಂಸಿ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಕಣಕ್ಕೆ    title=

ನವದೆಹಲಿ: ತೃಣಮೂಲ ಕಾಂಗ್ರೆಸ್ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಹಿರಿಯ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಿದೆ.

ಇನ್ನೊಂದೆಡೆಗೆ ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಿದೆ.ಈಗ ಟಿಎಂಸಿ (Trinamool Congress) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಟ್ವಿಟರ್‌ನಲ್ಲಿ ಇಬ್ಬರೂ ನಾಯಕರ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ.

"ಮಾಜಿ ಕೇಂದ್ರ ಸಚಿವ ಮತ್ತು ಖ್ಯಾತ ನಟ ಶ್ರೀ ಶತ್ರುಘ್ನ ಸಿನ್ಹಾ (Shatrughan Sinha) ಅವರು ಅಸನ್ಸೋಲ್‌ನಿಂದ ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗುತ್ತಾರೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪರವಾಗಿ ಘೋಷಿಸಲು ಸಂತೋಷವಾಗಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಹೋಳಿ ಉಡುಗೊರೆ! ವೇತನದಲ್ಲಿ ₹8,000 ಹೆಚ್ಚಳ

ಇದೇ ವೇಳೆ ಅವರು ಬಾಬುಲ್ ಸುಪ್ರಿಯೋ ಅವರ ಉಮೇದುವಾರಿಕೆಯನ್ನು ವಿಧಾನಸಭಾ ಉಪಚುನಾವಣೆಗೆ ಘೋಷಿಸಿದ್ದಾರೆ."ಮಾಜಿ ಕೇಂದ್ರ ಸಚಿವ ಮತ್ತು ಹೆಸರಾಂತ ಗಾಯಕ ಶ್ರೀ ಬಾಬುಲ್ ಸುಪ್ರಿಯೋ ಅವರು ವಿಧಾನಸಭಾ ಉಪಚುನಾವಣೆಯಲ್ಲಿ ಬ್ಯಾಲಿಗುಂಗೆಯಿಂದ ನಮ್ಮ ಅಭ್ಯರ್ಥಿಯಾಗುತ್ತಾರೆ. ಜೈ ಹಿಂದ್, ಜೈ ಬಾಂಗ್ಲಾ, ಜೈ ಮಾ-ಮತಿ- ಮನುಷ್!" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹಾಲಿ ಸಂಸದ ಬಾಬುಲ್ ಸುಪ್ರಿಯೊ ಲೋಕಸಭೆಗೆ ರಾಜೀನಾಮೆ ನೀಡಿದ ನಂತರ ಅಸನ್ಸೋಲ್ ಸ್ಥಾನವು ತೆರವಾದಾಗ ಈ ಘೋಷಣೆ ಬಂದಿದೆ.

ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ & ಸೋನಿಯಾ ಗಾಂಧಿ ರಾಜೀನಾಮೆ ವಿಚಾರ; ಸುರ್ಜೇವಾಲಾ ಹೇಳಿದ್ದೇನು..?

ಏತನ್ಮಧ್ಯೆ, ಹಾಲಿ ಶಾಸಕ ಮತ್ತು ರಾಜ್ಯ ಸಚಿವ ಸುಬ್ರತಾ ಮುಖರ್ಜಿ ಅವರು ಅಲ್ಪಾವಧಿಯ ಅನಾರೋಗ್ಯದ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಕೊನೆಯುಸಿರೆಳೆದ ನಂತರ ಪಶ್ಚಿಮ ಬಂಗಾಳದ ಬ್ಯಾಲಿಗುಂಜ್ ವಿಧಾನಸಭಾ ಸ್ಥಾನವು ತೆರವಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News