Diabetes: ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ದಿನಕ್ಕೆ ಹಲವಾರು ಬಾರಿ ಬದಲಾಗುತ್ತದೆ. ಮತ್ತೊಂದೆಡೆ, ಹೈಪರ್ಗ್ಲೈಸೀಮಿಯಾ, ಅಂದರೆ, ಹೈ ಬ್ಲಡ್ ಶುಗರ್ ಸಂದರ್ಭದಲ್ಲಿ, ನೀವು ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಏಕೆಂದರೆ, ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ನಂತರ ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ಒಂದು ವಿಶೇಷವಾದ ಜ್ಯೂಸ್ ನಿಮಗೆ ಪರಿಹಾರ ನೀಡಬಹುದು.
ದಾಳಿಂಬೆ ರಸ ಮಧುಮೇಹದಲ್ಲಿ ಪರಿಣಾಮಕಾರಿಯಾಗಿದೆ:
ಮಧುಮೇಹ ರೋಗಿಗಳು (Diabetes Patient) ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುವುದು ಮತ್ತು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ತಜ್ಞರ ಪ್ರಕಾರ, ಒಂದು ಲೋಟ ದಾಳಿಂಬೆ ರಸವು ಹೈ ಬ್ಲಡ್ ಶುಗರ್ (High Blood Sugar) ಅನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
ರಕ್ತದ ಸಕ್ಕರೆಯ ಮಟ್ಟ ಹೇಗಿರಬೇಕು?
ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಕ್ಲಿನಿಕಲ್ ಎಕ್ಸಲೆನ್ಸ್ (NICE) ಪ್ರಕಾರ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಊಟಕ್ಕೂ ಮೊದಲು 4.0 ರಿಂದ 5.9 mmol/L ಆಗಿರಬೇಕು. ಆದಾಗ್ಯೂ, ಮಧುಮೇಹ ಸಮಸ್ಯೆ ಇರುವವರು ಮತ್ತು ಟೈಪ್ 1, ಟೈಪ್ 2 ಡಯಾಬಿಟಿಸ್ ಹೊಂದಿರುವವರು ಅಥವಾ ಮಗು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರೆ, ಸಕ್ಕರೆಯ ಮಟ್ಟವು 4 ರಿಂದ 7 ಎಂಎಂಒಎಲ್ / ಲೀ ವರೆಗೆ ಉಳಿಯಬಹುದು. ಹೆಚ್ಚಿನ ಜನರಿಗೆ, ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು 7.8 mmol/L ಒಳಗೆ ಇರಬೇಕು. ಮತ್ತೊಂದೆಡೆ, ಇದು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ 8.5 ಎಂಎಂಒಎಲ್ / ಲೀ ಮತ್ತು ಟೈಪ್ 1 ಡಯಾಬಿಟಿಸ್ ರೋಗಿಗಳಿಗೆ 5 ರಿಂದ 9 ಎಂಎಂಒಎಲ್ / ಲೀ ಒಳಗೆ ಇರಬೇಕು.
ಇದನ್ನೂ ಓದಿ- Diabetes Control : ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ನಿಯಂತ್ರಿಸಬೇಕು? ಇಲ್ಲಿದೆ ನೋಡಿ
ದಾಳಿಂಬೆ ರಸವು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ:
'ದಿ ಸನ್' ವರದಿಯ ಪ್ರಕಾರ, ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು (Blood Sugar Level) ಅಧಿಕವಾಗಿದ್ದರೆ, ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಕೆಲವು ಮಾರ್ಗಗಳಿವೆ ಎಂದು ತಜ್ಞರು ಹೇಳುತ್ತಾರೆ. ಒಂದು ನಿರ್ದಿಷ್ಟ ಹಣ್ಣಿನ ರಸ ನಿಮಗೆ ಸಹಾಯ ಮಾಡಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಇತ್ತೀಚಿನ ಅಧ್ಯಯನದ ಪ್ರಕಾರ, ಒಂದು ಗ್ಲಾಸ್ ದಾಳಿಂಬೆ ರಸವು (Pomegranate Juice) 15 ನಿಮಿಷಗಳಲ್ಲಿ ಹೈ ಬ್ಲಡ್ ಶುಗರ್ ಅನ್ನು ಕಡಿಮೆ ಮಾಡುತ್ತದೆ. ಟೈಪ್ 1 ಅಥವಾ ಟೈಪ್ 2 ಮಧುಮೇಹದ ಸಮಸ್ಯೆಯನ್ನು ಹೊಂದಿರದ ಆರೋಗ್ಯವಂತ ಜನರನ್ನು ಈ ಅಧ್ಯಯನದಲ್ಲಿ ಸೇರಿಸಲಾಯಿತು. ತಜ್ಞರು ಅಧ್ಯಯನದಲ್ಲಿ ಭಾಗವಹಿಸಿದ ಕೆಲವರಿಗೆ ಸಿಹಿ ನೀರು ಮತ್ತು ಕೆಲವರಿಗೆ ದಾಳಿಂಬೆ ರಸವನ್ನು ಕುಡಿಯಲು ನೀಡಿದರು.
ಈ ಜನರ ತೂಕ ಸಾಮಾನ್ಯವಾಗಿತ್ತುಮತ್ತು ಅವರಿಗೆ 230 ಮಿ.ಲಿ ಜ್ಯೂಸ್ ನೀಡಲಾಯಿತು. ದಾಳಿಂಬೆ ರಸವನ್ನು ಕುಡಿಯುವುದರಿಂದ 15 ರಿಂದ 30 ನಿಮಿಷಗಳಲ್ಲಿ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ ಎಂದು ಅಧ್ಯಯನದಲ್ಲಿ ತಜ್ಞರು ಕಂಡುಕೊಂಡಿದ್ದಾರೆ. ಅಧ್ಯಯನದಲ್ಲಿ, ದಾಳಿಂಬೆ ರಸವನ್ನು ನೀಡಿದ ಜನರು ಕಡಿಮೆ ಗ್ಲೂಕೋಸ್ ಪ್ರತಿಕ್ರಿಯೆಯನ್ನು ತೋರಿಸಿದರು. ಈ ಅಧ್ಯಯನದ ಫಲಿತಾಂಶಗಳಲ್ಲಿ, ಜ್ಯೂಸ್ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ- Diabetes: ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಅರಿಶಿನದೊಂದಿಗೆ ಈ 2 ಪದಾರ್ಥಗಳನ್ನು ಬೆರೆಸಿ ಸೇವಿಸಿ
ಈ ವಿಷಯಗಳನ್ನು ನೆನಪಿನಲ್ಲಿಡಿ:
ಪ್ರತಿಯೊಬ್ಬ ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಮಟ್ಟವು ವಿಭಿನ್ನವಾಗಿರುತ್ತದೆ. ಅದೇ ಸಮಯದಲ್ಲಿ, ತಜ್ಞರ ಪ್ರಕಾರ, ಗರ್ಭಿಣಿಯರು ನಿರ್ದಿಷ್ಟ ಬ್ಲಡ್ ಶುಗರ್ ಲೆವೆಲ್ ಕಾಪಾಡಿಕೊಳ್ಳಬೇಕು.
ಆಪ್ಟಿಬಾಕ್ ಪ್ರೋಬಯಾಟಿಕ್ಸ್ನ ನ್ಯೂಟ್ರಿಷನಲ್ ಥೆರಪಿಸ್ಟ್ ಕೆರ್ರಿ ಬೀಸನ್ ಅವರ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ನೀವು ಇತರ ಕೆಲವು ವಿಷಯಗಳ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ. ನಿಯಮಿತವಾಗಿ ವಾಕ್ ಮಾಡಿ. ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ವಾಕ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.
ಒತ್ತಡದಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ, ಆದ್ದರಿಂದ ವ್ಯಾಯಾಮ ಮತ್ತು ಯೋಗವನ್ನು ರೂಢಿಸಿಕೊಳ್ಳಿ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳಿ ಮತ್ತು ದಿನಕ್ಕೆ ಸುಮಾರು ಎರಡು ಲೀಟರ್ ನೀರು ಕುಡಿಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಕೆಲವು ಸಂಶೋಧನೆಗಳು ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಈ ಪ್ರಿಸ್ಕ್ರಿಪ್ಷನ್ಗಳನ್ನು ಅನುಮೋದಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.