Russia Ukraine war : ಭಾರತೀಯರನ್ನು ಮರಳಿ ಕರೆತರುವ ಕಾರ್ಯಾಚರಣೆಯಲ್ಲಿ ವಾಯುಪಡೆ ಭಾಗಿ

ಮೂಲಗಳ ಪ್ರಕಾರ, ಭಾರತೀಯ ವಾಯುಪಡೆಯು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು 'ಆಪರೇಷನ್ ಗಂಗಾ' ಎಂಬ ಕಾರ್ಯಾಚರಣೆಯ ಅಡಿಯಲ್ಲಿ  ಸಿ -17 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆ ಇದೆ.   

Written by - Ranjitha R K | Last Updated : Mar 1, 2022, 02:39 PM IST
  • ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ
  • 'ಆಪರೇಷನ್ ಗಂಗಾ' ಕಾರ್ಯಾಚರಣೆ ಅಡಿಯಲ್ಲಿ ಸಿ -17 ವಿಮಾನಗಳ ನಿಯೋಜನೆ
  • ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಜವಾಬ್ದಾರಿ ನಾಲ್ವರು ಸಚಿವರ ಹೆಗಲಿಗೆ
 Russia Ukraine war : ಭಾರತೀಯರನ್ನು ಮರಳಿ ಕರೆತರುವ ಕಾರ್ಯಾಚರಣೆಯಲ್ಲಿ ವಾಯುಪಡೆ ಭಾಗಿ    title=
ಭಾರತೀಯರ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ (file photo)

ನವದೆಹಲಿ : ಉಕ್ರೇನ್ ವಿರುದ್ಧ ರಷ್ಯಾ ಯುದ್ದ (Russia Ukraine war)ಘೋಷಿಸಿದ ಬೆನ್ನಲ್ಲೇ, ಪೂರ್ವ ಯುರೋಪಿಯನ್ ದೇಶದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಇದೀಗ ಭಾರತೀಯರ ರಕ್ಷಣಾ ಕಾರ್ಯಾಚರಣೆಯಾ ಕಣಕ್ಕೆ  ವಾಯುಪಡೆ  ಇಳಿಯಲಿದೆ (Airforce). 

ಮೂಲಗಳ ಪ್ರಕಾರ, ಭಾರತೀಯ ವಾಯುಪಡೆಯು (Airforce) ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು 'ಆಪರೇಷನ್ ಗಂಗಾ' ಎಂಬ ಕಾರ್ಯಾಚರಣೆಯ ಅಡಿಯಲ್ಲಿ  ಸಿ -17 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆ ಇದೆ (Operation Ganga)

ಇದನ್ನೂ ಓದಿ : ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!

ಫೆಬ್ರವರಿ 24 ರಂದು ರಷ್ಯಾದ ದಾಳಿಯ ನಂತರ, ಉಕ್ರೇನ್‌ನ ವಾಯುಪ್ರದೇಶವನ್ನು ಮುಚ್ಚಿರುವ ಕಾರಣದಿಂದಾಗಿ, ಭಾರತವು ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕಿಯಾದ ಗಡಿ‌ಗಳ ಮೂಲಕ ತನ್ನ ನಾಗರಿಕರನ್ನು ಅಲ್ಲಿಂದ ಸ್ಥಳಾಂತರಿಸುತ್ತಿದೆ.  

ಉಕ್ರೇನ್‌ನಿಂದ (Ukraine)ಭಾರತೀಯರನ್ನು ಮರಳಿ ಕರೆತರಲು ಸರ್ಕಾರವು 'ಆಪರೇಷನ್ ಗಂಗಾ' ನಡೆಸುತ್ತಿದೆ.  ಇದೀಗ ಈ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಕಾರ್ಯಾಚರಣೆಯಲ್ಲಿ ಭಾಗವಹಿಸುವಂತೆ,  ಭಾರತೀಯ ವಾಯುಪಡೆಯನ್ನು  (Airforce)ಕೋರಲಾಗಿದೆ. ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜನರನ್ನು ಸ್ಥಳಾಂತರಿಸುವುದರ ಜೊತೆಗೆ, ಭಾರತೀಯ ವಾಯುಪಡೆಯ ವಿಮಾನಗಳು ಮಾನವೀಯ ನೆರವು ತಲುಪಿಸಲು ಸಹ ಸಹಾಯ ಮಾಡಲಿದೆ. 

ಇದನ್ನೂ ಓದಿ : Russia Ukraine War: ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆ ಹೋದ ಉಕ್ರೇನ್..!

ಉಕ್ರೇನ್‌ನ ನೆರೆಯ ದೇಶಗಳನ್ನು ತಲುಪಿ ಭಾರತೀಯರನ್ನು ಸುರಕ್ಷಿತ ಮತ್ತು ಸುಲಭ ರೀತಿಯಲ್ಲಿ ಸ್ಥಳಾಂತರಿಸುವ ಜವಾಬ್ದಾರಿಯನ್ನು ಪ್ರಧಾನಿ ಮೋದಿ (PM Modi), ನಾಲ್ವರು ಕೇಂದ್ರ ಸಚಿವರಿಗೆ ನೀಡಿದ್ದಾರೆ. ಇದರ ಅಡಿಯಲ್ಲಿ, ಕೇಂದ್ರ ಸಚಿವ ವಿಕೆ ಸಿಂಗ್ ಪೋಲೆಂಡ್, ಕಿರಣ್ ರಿಜಿಜು ಸ್ಲೋವಾಕಿಯಾ, ಹರ್ದೀಪ್ ಪುರಿ ಹಂಗೇರಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾ ಮತ್ತು ಮೊಲ್ಡೊವಾದಲ್ಲಿ ಕಮಾಂಡರ್ ಆಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News