PM Ujjwala Yojana : 9 ಕೋಟಿ ಜನತೆಗೆ ಉಚಿತ LPG ಸಂಪರ್ಕ : ನೀವು ಲಾಭ ಪಡೆಯಬಹುದು! ಹೇಗೆ? ಇಲ್ಲಿದೆ ನೋಡಿ

ಈ ಯೋಜನೆಯಡಿ ಇದುವರೆಗೆ 9 ಕೋಟಿ ಜನರು ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿದ್ದಾರೆ. ಇಂಡಿಯನ್ ಆಯಿಲ್ ತನ್ನ ಟ್ವಿಟರ್ ನಲ್ಲಿ ಈ ಕುರಿತು ಈ ಮಾಹಿತಿಯನ್ನು ನೀಡಿದೆ.

Written by - Channabasava A Kashinakunti | Last Updated : Feb 24, 2022, 02:46 PM IST
  • ಉಜ್ವಲ ಯೋಜನೆಯಿಂದ 9 ಕೋಟಿಗೂ ಹೆಚ್ಚು ಜನತೆಗೆ ಪ್ರಯೋಜನ
  • ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತದೆ ಉಚಿತ ಗ್ಯಾಸ್ ಸಂಪರ್ಕ
  • ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು
PM Ujjwala Yojana : 9 ಕೋಟಿ ಜನತೆಗೆ ಉಚಿತ LPG ಸಂಪರ್ಕ : ನೀವು ಲಾಭ ಪಡೆಯಬಹುದು! ಹೇಗೆ? ಇಲ್ಲಿದೆ ನೋಡಿ title=

ನವದೆಹಲಿ : ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ಗೃಹಬಳಕೆಯ LPG ಸಂಪರ್ಕಗಳನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ದೇಶದ ಎಪಿಎಲ್, ಬಿಪಿಎಲ್ ಮತ್ತು ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಭಾರತ ಸರ್ಕಾರದಿಂದ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 9 ಕೋಟಿ ಜನರು ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿದ್ದಾರೆ. ಇಂಡಿಯನ್ ಆಯಿಲ್ ತನ್ನ ಟ್ವಿಟರ್ ನಲ್ಲಿ ಈ ಕುರಿತು ಈ ಮಾಹಿತಿಯನ್ನು ನೀಡಿದೆ.

ಈ ಯೋಜನೆ(Pradhan Mantri Ujjwala Yojana)ಯನ್ನು 1 ಮೇ 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ELPG ಗ್ಯಾಸ್ ಸಿಲಿಂಡರ್‌ನ ಪ್ರಯೋಜನವನ್ನು ನೀವು ಉಚಿತವಾಗಿ ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿದೆ ನೋಡಿ..

ಇದನ್ನೂ ಓದಿ : New Ration Card Rule: ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರಿ ಬದಲಾವಣೆ! ಹೊಸ ನಿಬಂಧನೆಗಳನ್ನು ತಿಳಿಯಿರಿ

ಈ ರೀತಿ ಅರ್ಜಿ ಸಲ್ಲಿಸಿ

- ಯೋಜನೆಯ ಲಾಭ ಪಡೆಯಲು, ಮೊದಲಿಗೆ pmujjwalayojana.com ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- ಇಲ್ಲಿ ಡೌನ್‌ಲೋಡ್ ಫಾರ್ಮ್ ಆಯ್ಕೆಯು ನಿಮ್ಮ ಮುಂದೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿ.
- ಈಗ ಫಾರ್ಮ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
- ಇದರ ನಂತರ ಫಾರ್ಮ್ ಅನ್ನು LPG ಕೇಂದ್ರದಲ್ಲಿ ಸಲ್ಲಿಸಬೇಕಾಗುತ್ತದೆ.
- ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ಅಲ್ಲಿಯೂ ಸಲ್ಲಿಸಿ.
- ಫಾರ್ಮ್ ಅನ್ನು ಸಲ್ಲಿಸುವಾಗ, ನಿಮಗೆ 14.2 ಕೆಜಿ ಸಿಲಿಂಡರ್ ಬೇಕೇ ಅಥವಾ 5 ಕೆಜಿ ಸಿಲಿಂಡರ್ ಬೇಕೇ ಎಂಬುದನ್ನು ನೀವು ಸ್ಪಷ್ಟಪಡಿಸಬೇಕು.
ಪಿ ದಾಖಲೆಗಳನ್ನು ಪರಿಶೀಲಿಸಿದ ನಂತರ, ನೀವು LPG ಸಂಪರ್ಕ ಪಡೆಯುತ್ತೀರಿ.

ಯೋಜನೆಗೆ ಅಗತ್ಯವಾಜಿ ಬೇಕಾದ ದಾಖಲೆಗಳು

- ಬಿಪಿಎಲ್ ಕಾರ್ಡ್
- ಆಧಾರ್ ಕಾರ್ಡ್
- ಮೊಬೈಲ್ ನಂಬರ್
ಪಾಸ್ಪೋರ್ಟ್ ಸೈಜ್ ಫೋಟೋ
- ವಯಸ್ಸಿನ ಪ್ರಮಾಣಪತ್ರ
- ಬಿಪಿಎಲ್ ಪಟ್ಟಿಯಲ್ಲಿ ಹೆಸರಿರಬೇಕು
- ಬ್ಯಾಂಕ್ ಪಾಸ್ ಬುಕ್ ಫೋಟೋಕಾಪಿ
- ಪಡಿತರ ಚೀಟಿಯ ಫೋಟೋಕಾಪಿ

ಇದನ್ನೂ ಓದಿ : 24-02-2022 Today Gold Price: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಈ ಷರತ್ತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು

- ಉಜ್ವಲಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಮೊದಲ ಷರತ್ತು ಅರ್ಜಿದಾರರು ಮಹಿಳೆಯಾಗಿರಬೇಕು.
- ಅರ್ಜಿದಾರ ಮಹಿಳೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆಗ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.
- ಮಹಿಳೆ ಬಿಪಿಎಲ್ ಕುಟುಂಬದವರಾಗಿರಬೇಕು.
- ಇದರೊಂದಿಗೆ ಮಹಿಳೆ ಬಿಪಿಎಲ್ ಕಾರ್ಡ್ ಮತ್ತು ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ LPG ಸಂಪರ್ಕ ಇರಬಾರದು.
- ನಿಮ್ಮ ವಿಳಾಸವನ್ನು ಸಾಬೀತುಪಡಿಸಲು ಸ್ವಯಂ ದೃಢೀಕರಿಸಿದ ಘೋಷಣೆಯ ನಮೂನೆಯನ್ನು ಸಲ್ಲಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News