SBI ಗ್ರಾಹಕರಿಗೆ ಸಿಹಿ ಸುದ್ದಿ : ಎಸ್‌ಬಿಐ FD ಮೇಲಿನ ಬಡ್ಡಿದರ ಹೆಚ್ಚಳ - ಇಲ್ಲಿದೆ ಹೊಸ ದರ 

ಭಾರತದ ಅತಿದೊಡ್ಡ ಬ್ಯಾಂಕ್ ಫೆಬ್ರವರಿ 15, 2022 ರಿಂದ ಜಾರಿಗೆ ಬರುವಂತೆ ಚಿಲ್ಲರೆ ದೇಶೀಯ ಅವಧಿಯ ಠೇವಣಿ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.

Written by - Channabasava A Kashinakunti | Last Updated : Feb 17, 2022, 03:25 PM IST
  • ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿ
  • 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳಿಗೆ, ಬಡ್ಡಿದರ ಶೇ. 5.20 ಕ್ಕೆ ಏರಿಕೆ
  • 2 ವರ್ಷಗಳ ಕೆಳಗಿನ ಅವಧಿಯ FD ಗಳ ಮೇಲಿನ ಬಡ್ಡಿ ದರಗಳು ಬದಲಾಗದೆ ಉಳಿಯುತ್ತವೆ.
SBI ಗ್ರಾಹಕರಿಗೆ ಸಿಹಿ ಸುದ್ದಿ : ಎಸ್‌ಬಿಐ FD ಮೇಲಿನ ಬಡ್ಡಿದರ ಹೆಚ್ಚಳ - ಇಲ್ಲಿದೆ ಹೊಸ ದರ  title=

ನವದೆಹಲಿ : ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗ್ರಾಹಕರಿಗೆ ಒಂದು ಒಳ್ಳೆಯ ಸುದ್ದಿ ನಿಮಗಾಗಿ ಬಂದಿದೆ, ಭಾರತದ ಅತಿದೊಡ್ಡ ಬ್ಯಾಂಕ್ ಫೆಬ್ರವರಿ 15, 2022 ರಿಂದ ಜಾರಿಗೆ ಬರುವಂತೆ ಚಿಲ್ಲರೆ ದೇಶೀಯ ಅವಧಿಯ ಠೇವಣಿ 2 ಕೋಟಿ ರೂ.ಗಿಂತ ಕಡಿಮೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಸ್ಥಿರ ಠೇವಣಿಗಳಿಗೆ(Fixed Deposits), ಬಡ್ಡಿದರಗಳನ್ನು ಶೇ. 5.20 ಕ್ಕೆ ಏರಿಸಲಾಗಿದೆ, ಇದು 10 ಮೂಲ ಅಂಕಗಳ ಹೆಚ್ಚಳವಾಗಿದೆ. ಆದರೆ, 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಅವಧಿಯ FD ಗಳನ್ನು ಶೇ. 5.3 ದಿಂದ 5.45 ಕ್ಕೆ ಹೆಚ್ಚಿಸಲಾಗಿದೆ, ಇದು 15 ಮೂಲ ಅಂಕಗಳ ಹೆಚ್ಚಳವಾಗಿದೆ.

ಇದನ್ನೂ ಓದಿ : PF ಖಾತೆದಾರರಿಗೆ EPFO ನಿಂದ ಎಚ್ಚರಿಕೆ ಘಂಟೆ!

5 ವರ್ಷಗಳು ಮತ್ತು 10 ವರ್ಷಗಳವರೆಗಿನ FD ಅವಧಿಗೆ, ಬಡ್ಡಿ ದರ(Interest Rates)ವನ್ನು 10 ಮೂಲ ಅಂಕಗಳಿಂದ 5.50 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.

2 ವರ್ಷಗಳ ಕೆಳಗಿನ ಅವಧಿಯ FD ಗಳ ಮೇಲಿನ ಬಡ್ಡಿ ದರಗಳು ಬದಲಾಗದೆ ಉಳಿಯುತ್ತವೆ.

ಎಸ್‌ಬಿಐ ಸಿಬ್ಬಂದಿ ಮತ್ತು ಎಸ್‌ಬಿಐ ಪಿಂಚಣಿದಾರರು(SBI pensioners) ಅನ್ವಯವಾಗುವ ದರಕ್ಕಿಂತ ಶೇ.1 ರಷ್ಟು ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಾರೆ.

ಇದನ್ನೂ ಓದಿ : Salary Hike : ಇನ್‌ಕ್ರಿಮೆಂಟ್‌ಗಾಗಿ ಕಾಯುತ್ತಿರುವ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!

ಎಸ್‌ಬಿಐ(State Bank of India) ತನ್ನ ಠೇವಣಿ ಯೋಜನೆಯನ್ನು ಸೆಪ್ಟೆಂಬರ್ 30, 2022 ರವರೆಗೆ ವಿಸ್ತರಿಸಿದೆ, ಇದು ಹಿರಿಯ ನಾಗರಿಕರಿಗೆ ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಚಿಲ್ಲರೆ ಅವಧಿಯ ಠೇವಣಿಗಳ ಮೇಲೆ 30 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಪ್ರೀಮಿಯಂ ಅನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News