Russia-Ukraine Crisis: ರಷ್ಯಾ ದಾಳಿಯ ಭೀತಿ, ಉಕ್ರೇನ್ ನಲ್ಲಿ AK-47 ಹಿಡಿದ 79ರ ಇಳಿವಯಸ್ಸಿನ ಅಜ್ಜಿ

Russia-Ukrain Conflict - ಪ್ರಸ್ತುತ ಉಕ್ರೇನ್ (Ukraine) ಮೇಲೆ ರಷ್ಯಾದ (Russia) ದಾಳಿಯ ದಿನಾಂಕ ಮತ್ತು ಸಮಯದ ಚರ್ಚೆಯಲ್ಲಿ ಇಡೀ ಜಗತ್ತೇ ತೊಡಗಿಸಿಕೊಂಡಿದೆ, ಇದು ಉಕ್ರೇನ್ ಮೇಲೆ ರಷ್ಯಾದ ದಾಳಿ ಖಚಿತ ಎಂಬ ಅಂಶಕ್ಕೆ ಬಲ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನ 79 ವರ್ಷದ ಮಹಿಳೆಯೊಬ್ಬರು ಎಕೆ-47 ಚಲಾಯಿಸಲು (Ukraine Grandma AK 47 Viral Photo) ಕಲಿಯುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

Written by - Nitin Tabib | Last Updated : Feb 15, 2022, 10:02 PM IST
  • ಉಕ್ರೇನ್ ಗೆ ರಷ್ಯಾ ದಾಳಿಯ ಭೀತಿ ಕಾಡುತ್ತಿದೆ.
  • AK-47 ಅಸಾಲ್ಟ್ ರೈಫಲ್ ಚಲಾಯಿಸಲು ಕಲಿಯುತ್ತಿರುವ ವೃದ್ಧ ಮಹಿಳೆ
  • ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆದ ಫೋಟೋ
Russia-Ukraine Crisis: ರಷ್ಯಾ ದಾಳಿಯ ಭೀತಿ, ಉಕ್ರೇನ್ ನಲ್ಲಿ AK-47 ಹಿಡಿದ 79ರ ಇಳಿವಯಸ್ಸಿನ ಅಜ್ಜಿ title=
Ukraine Grandma AK 47 Viral Photo (File Photo)

ನವದೆಹಲಿ: Russia-Ukrain Standoff - ಉಕ್ರೇನ್ ಮೇಲೆ ಯಾವ ಕ್ಷಣದಲ್ಲಾದರೂ ಕೂಡ ರಷ್ಯಾ ದಾಳಿ ನಡೆಸುವ (Russia-Ukraine War) ಸಾಧ್ಯತೆಯ ಬಗ್ಗೆ ಇಡೀ ವಿಶ್ವವೇ ಆತಂಕ ವ್ಯಕ್ತಪಡಿಸುತ್ತಿದೆ. ವಿಶ್ವದ ಸೂಪರ್ ಪವರ್ ರಷ್ಯಾ ತಮ್ಮ ದೇಶದ ಮೇಲೆ ದಾಳಿ ಮಾಡಿದರೆ ಅದರ ಪರಿಣಾಮ ಏನಾಗಬಹುದು ಎಂಬ ಆತಂಕದಲ್ಲಿ ಉಕ್ರೇನ್ ಕೂಡ ದಿನದೂಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ತನ್ನ ದೇಶದ ಜನರಿಗೆ ಬಂದೂಕು ಬಳಸಲು ಕಲಿಸುತ್ತಿದೆ.

AK-47 ಚಲಾಯಿಸಲು ಕಲಿಯುತ್ತಿರುವ 79 ವರ್ಷದ ಮಹಿಳೆ 
VICE ನಲ್ಲಿ ಪ್ರಕಟಗೊಂಡ ಸುದ್ದಿಯ ಪ್ರಕಾರ, ಇಂತಹ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ 79 ವರ್ಷದ ಮಹಿಳೆ AK-47 ಚಾಲನೆ ಮಾಡಲು ತರಬೇತಿ ಪಡೆಯುತ್ತಿದ್ದಾರೆ.

ನ್ಯಾಷನಲ್ ಗಾರ್ಡ್ ಬೆಟಾಲಿಯನ್ ತರಬೇತಿ ನೀಡುತ್ತಿದೆ
ಈ ಚಿತ್ರವು ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಾಷ್ಟ್ರೀಯ ಗಾರ್ಡ್‌ನ ಅಜೋವ್ ಬೆಟಾಲಿಯನ್‌ನಿಂದ ತರಬೇತಿ ಪಡೆಯುತ್ತಿರುವ ಉಕ್ರೇನಿಯನ್ ಮಹಿಳೆ ವ್ಯಾಲೆಂಟಿನಾ ಕಾನ್ಸ್ಟಾಂಟಿನೋವ್ಸ್ಕಾ (Valentyna Konstantynovska) ಅವರದ್ದಾಗಿದೆ. ತರಬೇತಿಯನ್ನು ನಡೆಸಿದ ಸೈನಿಕರು ಅಜೋವ್ ಬೆಟಾಲಿಯನ್‌ನ ಸದಸ್ಯರಾಗಿದ್ದಾರೆ, ಇದು ನವ-ನಾಜಿಗಳೊಂದಿಗೆ ಸಂಪರ್ಕ ಹೊಂದಿದೆ.

ಇದನ್ನೂ ಓದಿ-Europe on Verge of War: 'ಯುರೋಪ್ ಯುದ್ಧದಂಚಿನಲ್ಲಿದೆ', ಎಚ್ಚರಿಕೆ ನೀಡಿದ ಜರ್ಮನಿ ವಾಯ್ಸ್ ಚಾನ್ಸಲರ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಚಿತ್ರ
ಈ ಚಿತ್ರವನ್ನು ಎನ್‌ಬಿಸಿಯ ಮುಖ್ಯ ವಿದೇಶಿ ವರದಿಗಾರ ರಿಚರ್ಡ್ ಎಂಗಲ್ ಅವರು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಚಿತ್ರದಲ್ಲಿ, ಉಕ್ರೇನ್‌ನ ಜನರು ರೈಫಲ್‌ಗಳನ್ನು ನಿರ್ವಹಿಸಲು ತರಬೇತಿ ಪಡೆಯುತ್ತಿರುವುದನ್ನು ನೀವು ಕಾಣಬಹುದು, ಅದರಲ್ಲಿ ಈ ವೃದ್ಧ ಮಹಿಳೆಯ ಫೋಟೋ ಕೂಡ ಇದೆ.

ಇದನ್ನೂ ಓದಿ-Russia-Ukraine Crisis: 'ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ'!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಯಾವ ಕ್ಷಣದಲ್ಲಾದರೂ ಸಂಭವಿಸಬಹುದು
ಉಕ್ರೇನ್ ಗಡಿಯಲ್ಲಿ ಮಾಸ್ಕೋ 130,000 ಸೈನಿಕರನ್ನು ನಿಯೋಜಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.  ಇದು ನೆರೆಯ ಬೆಲಾರಸ್‌ನಲ್ಲಿ ಸೈನಿಕರನ್ನು ಹೊಂದಿದೆ. ವೈದ್ಯಕೀಯ ಸೌಲಭ್ಯಗಳನ್ನು ಸಂಭಾವ್ಯ ಯುದ್ಧ ವಲಯಗಳಿಗೆ ವರ್ಗಾಯಿಸಲಾಗಿದೆ ಮತ್ತು ನ್ಯಾಟೋ (NATO) ಮತ್ತು ರಷ್ಯಾ ನಡುವೆ ಬಫರ್ ವಲಯವನ್ನು (Buffer Zone) ಬಯಸುತ್ತದೆ ಎಂದು ರಷ್ಯಾ ಸೂಚಿಸಿದೆ.

ಇದನ್ನೂ ಓದಿ-ಭಾರತೀಯ ವಿದ್ಯಾರ್ಥಿಗಳಿಗೆ ಸ್ವದೇಶಕ್ಕೆ ಮರಳುವಂತೆ ಸೂಚಿಸಿ ಅಡ್ವೈಸರಿ ಜಾರಿಗೊಳಿಸಿದ ದೂತಾವಾಸ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News