Cryptocurrency: ಕ್ರಿಪ್ಟೋ ಕರೆನ್ಸಿಗಳಲ್ಲಿಯೂ ಕೂಡ SIP ಮಾಡಬಹುದು, ಹಲವರು ಲಾಭ ಗಳಿಸಿದ್ದಾರೆ

SIP In Cryptocurrency: ಹೆಚ್ಚಿನ ಹೂಡಿಕೆದಾರರು Eauity Fundಗಳಲ್ಲಿ ಎಸ್‌ಐಪಿ ಮಾಡುತ್ತಾರೆ ಆದರೆ ಕ್ರಿಪ್ಟೋಕರೆನ್ಸಿಗಳಲ್ಲಿಯೂ (Cryptocurrency) SIP ಮಾಡುವ ಮೂಲಕ ನೀವು ಸಾಕಷ್ಟು ಲಾಭವನ್ನು ಗಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬನ್ನಿ ತಿಳಿದುಕೊಳ್ಳೋಣ.

Written by - Nitin Tabib | Last Updated : Feb 8, 2022, 05:37 PM IST
  • ಹೆಚ್ಚಿನ ಹೂಡಿಕೆದಾರರು Eauity Fundಗಳಲ್ಲಿ ಎಸ್‌ಐಪಿ ಮಾಡುತ್ತಾರೆ.
  • ಆದರೆ ಕ್ರಿಪ್ಟೋಕರೆನ್ಸಿಗಳಲ್ಲಿಯೂ (Cryptocurrency) SIP ಮಾಡುವ ಮೂಲಕ ನೀವು ಸಾಕಷ್ಟು ಲಾಭ ಗಳಿಸಬಹುದು.
  • ಬನ್ನಿ ತಿಳಿದುಕೊಳ್ಳೋಣ.
Cryptocurrency: ಕ್ರಿಪ್ಟೋ ಕರೆನ್ಸಿಗಳಲ್ಲಿಯೂ ಕೂಡ SIP ಮಾಡಬಹುದು, ಹಲವರು ಲಾಭ ಗಳಿಸಿದ್ದಾರೆ title=
SIP In Cryptocurrency, SIP, Equity Funds, Doge Coin, Cryptocurrency,

SIP In Cryptocurrency - ಸಾಮಾನ್ಯವಾಗಿ ಹೂಡಿಕೆದಾರರು ಕ್ರಿಪ್ಟೋ ಕರೆನ್ಸಿಗಳಲ್ಲಿ ಸಗಟು ಮೊತ್ತದಲ್ಲಿ ಹೂಡಿಕೆ ಮಾಡುತ್ತಾರೆ ಅಥವಾ ತಮ್ಮ ಬಳಿ ಹೆಚ್ಚುವರಿ ಹಣ ಇದ್ದಾಗ ಮಾತ್ರ ಹೂಡಿಕೆ ಮಾಡುತ್ತಾರೆ. ಆದರೆ, ಇಕ್ವಿಟಿ ಫಂಡ್ ಗಳ ರೀತಿಯೇ ಕ್ರಿಪ್ಟೋಕರೆನ್ಸಿಗಳಲ್ಲಿಯೂ ಕೂಡ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಸಾಮಾನ್ಯವಾಗಿ ಹೂಡಿಕೆದಾರರು ಕ್ರಿಪ್ಟೋದಲ್ಲಿ ಒಟ್ಟು ಮೊತ್ತದಲ್ಲಿ ಅಥವಾ ಅವರು ಹೆಚ್ಚುವರಿ ಹಣವನ್ನು ಹೊಂದಿರುವಾಗ ಹೂಡಿಕೆ ಮಾಡುತ್ತಾರೆ. ಹೂಡಿಕೆದಾರರು ಬಯಸಿದರೆ, ಅವರು ಕ್ರಿಪ್ಟೋಕರೆನ್ಸಿಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಕೇವಲ 50 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ ಕೋಟ್ಯಾಧಿಪತಿ ಆಗಬಹುದು. ನೀವು SIP ಗಾಗಿ ಯಾವುದೇ ಕ್ರಿಪ್ಟೋ ನಾಣ್ಯವನ್ನು ಆಯ್ಕೆ ಮಾಡಬಹುದು. ಇದಕ್ಕೆ ಡಾಗ್ ಕಾಯಿನ್ ಉತ್ತಮ ಆಯ್ಕೆಯಾಗಿದೆ. ಈ ಆಯ್ಕೆಯ ಮೂಲಕ ಕ್ರಿಪ್ಟೋಕರೆನ್ಸಿಗಳಲ್ಲಿ SIP ಹೂಡಿಕೆ ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.

Doge Coin ಇದುವರೆಗೆ ಎಷ್ಟು ಜನರನ್ನು ಕೋಟ್ಯಾಧಿಪತಿಯನ್ನಾಗಿಸಿದೆ? (Business News In Kananda)
ಡೋಜ್ ಕಾಯಿನ್ ನಲ್ಲಿ ಒಂದು ವೇಳೆ ಯಾವುದೇ ಹೂಡಿಕೆದಾರ 5 ವರ್ಷಗಳ ಹಿಂದ SIP ಮೂಲಕ ಹೂಡಿಕೆ ಮಾಡಿದ್ದರೆ, 5 ವರ್ಷಗಳ ಬಳಿಕ ಆತ ಕೋಟ್ಯಾಧಿಪತಿಯಾಗುತ್ತಿದ್ದೆ. Doge Coin ಕ್ರಿಪ್ಟೋ ನಿತ್ಯ 50 ರೂ. SIP ಹೂಡಿಕೆಯನ್ನು ಕಳೆದ ಐದು ವರ್ಷಗಳಲ್ಲಿ 1 ಕೋಟಿಗೂ ಅಧಿಕ ಮೊತ್ತದ ಫಂಡ್ ಆಗಿ ಮಾರ್ಪಡಿಸಿದೆ.

Doge Coin ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಕ್ರಿಪ್ಟೋ ಹೂಡಿಕೆದಾರರು ಇಂದಿನಿಂದ 5 ವರ್ಷಗಳ ಹಿಂದೆ ಡಾಜ್ ಕಾಯಿನ್‌ನಲ್ಲಿ 50 ರೂಪಾಯಿಗಳ ದೈನಂದಿನ SIP ಅನ್ನು ಪ್ರಾರಂಭಿಸಿದ್ದರೆ, ಅವರ ಒಟ್ಟು ಹೂಡಿಕೆಯು 91,300 ರೂಪಾಯಿಗಳಾಗಿರುತ್ತದೆ. ಇದುವರೆಗೆ ಈ ಹೂಡಿಕೆ ಒಟ್ಟು 1 ಕೋಟಿ 3 ಲಕ್ಷದ 15 ಸಾವಿರದ 921 ರೂ. ಆಗುತ್ತಿತ್ತು. ಈ ಮೂಲಕ ಹೂಡಿಕೆದಾರರು ಶೇ.11198ರಷ್ಟು ಲಾಭವನ್ನು ಪಡೆದಿದ್ದಾರೆ. ಸದ್ಯ ಡಾಜ್ ಕ್ರಿಪ್ಟೋ ಕರೆನ್ಸಿ ಬೆಲೆ 13.1 ರೂ. ಆಗಿದೆ.

ಸಾಪ್ತಾಹಿಕ SIP ಮೂಲಕ ಕೂಡ ಹೂಡಿಕೆ ಮಾಡಬಹುದು
Dodgecoin ಕ್ರಿಪ್ಟೋಕರೆನ್ಸಿಯು ಸಾಪ್ತಾಹಿಕ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು (SIP ಗಳು) ಮಾಡುವವರಿಗೆ ಲಾಭವನ್ನು ನೀಡಿದೆ. ಇಂದಿನಿಂದ 5 ವರ್ಷಗಳ ಹಿಂದೆ ಯಾರಾದರೂ 350 ರೂಗಳ ವಾರದ SIP ಅನ್ನು ಪ್ರಾರಂಭಿಸಿದ್ದರೆ, ಅವರ ಒಟ್ಟು ಹೂಡಿಕೆ ಇಂದಿನವರೆಗೆ 91000 ರೂ. ಇರಲಿದೆ. ಅದೇ ಸಮಯದಲ್ಲಿ, ಹೂಡಿಕೆದಾರರು 11193 ಪ್ರತಿಶತದಷ್ಟು ಲಾಭವನ್ನು ಪಡೆದಿದ್ದಾರೆ. ಇಂದಿನ ದಿನಾಂಕದಂತೆ ಹೂಡಿಕೆದಾರರು ಸುಮಾರು 715166.77882 ಡಾಜ್ ಕಾಯಿನ್ ಕ್ರಿಪ್ಟೋಕರೆನ್ಸಿಯನ್ನು ಹೊಂದಿರುತ್ತಾರೆ. ಇಂದಿನ ಸಮಯದಲ್ಲಿ, ಡಾಡ್ಜ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಬೆಲೆ 13.1 ರೂ ಆಗಿದ್ದು, ಅದರ ಪ್ರಕಾರ ಹೂಡಿಕೆದಾರರ ಹೂಡಿಕೆಯ ಮೌಲ್ಯವು 1 ಕೋಟಿಗೂ ಮೀರಿದೆ.

ಇದನ್ನೂ ಓದಿ-Bank Holiday February 2022: ಈ ತಿಂಗಳಲ್ಲಿ 9 ದಿನಗಳವರೆಗೆ ಬಂದ್ ಇರಲಿದೆ ಬ್ಯಾಂಕ್

5 ವರ್ಷಗಳ ಹಿಂದೆ, ಹೂಡಿಕೆದಾರರು ಮಾಸಿಕ ಆಧಾರದ ಮೇಲೆ ಡಾಡ್ಜ್‌ಕಾಯಿನ್‌ನಲ್ಲಿ ತಿಂಗಳಿಗೆ ರೂ 1700 ಎಸ್‌ಐಪಿ ಮಾಡಿದ್ದರೆ, ಇಂದು ಅದರ ಮೌಲ್ಯ ರೂ 10487615 ಆಗುತ್ತಿತ್ತು. ಇಂದಿನ ಸಮಯದಲ್ಲಿ, ಹೂಡಿಕೆದಾರರಿಗೆ ಶೇಕಡಾ 10181 ರಷ್ಟು ಲಾಭ ಸಿಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಒಟ್ಟು ಹೂಡಿಕೆಯ ಮೌಲ್ಯ 1 ಕೋಟಿ ರೂ.ಗೂ ಅಧಿಕವಾಗಿದೆ.

ಇದನ್ನೂ ಓದಿ-PPF Account Benefits: SBI ಗ್ರಾಹಕರು PPF ಖಾತೆ ತೆರೆದರೆ ತೆರಿಗೆಯಲ್ಲಿ ಬಂಪರ್ ವಿನಾಯಿತಿ!

(Disclaimar-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಹೂಡಿಕೆ ಮಾಡುವ ಮೊದಲು ವಿಷಯ ತಜ್ಞರ ಸಲಹೆಪಡೆದುಕೊಳ್ಳಲು ಮರೆಯಬೇಡಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳವಾಗಲಿದೆ : ಈ ದಿನ ಸಿಗಲಿದೆ ಸಿಹಿ ಸುದ್ದಿ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News