Budget 2022: ನಾಳೆ ಅಂದರೆ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆಯಾಗಲಿದೆ.
Budget 2022: ನಾಳೆ ಅಂದರೆ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಬಜೆಟ್ ಇತಿಹಾಸವು ಸಾಕಷ್ಟು ಆಸಕ್ತಿದಾಯಕ ಅಂಶಗಳನ್ನು ಒಳಗೊಂಡಿದೆ. ದೇಶದಲ್ಲಿ ಹಲವು ಐತಿಹಾಸಿಕ ಬಜೆಟ್‌ಗಳನ್ನು ಮಂಡಿಸಲಾಗಿದೆ. ಭಾರತದಲ್ಲಿ ಬಜೆಟ್ ಮಂಡಿಸುವ ಸಂಪ್ರದಾಯ 1860ರಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾಯಿತು. ಆ ಬಳಿಕ ಬಜೆಟ್‌ನಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು 26 ನವೆಂಬರ್ 1947 ರಂದು ಅಂದಿನ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಶೆಟ್ಟಿ ಮಂಡಿಸಿದರು. ಹಣಕಾಸು ಸಚಿವ ಆರ್.ಕೆ.ಷಣ್ಮುಖ ಶೆಟ್ಟಿ ವಕೀಲರಾಗಿ ಮತ್ತು ಅರ್ಥಶಾಸ್ತ್ರಜ್ಞರಾಗಿ ಹಾಗೂ ರಾಜಕಾರಣಿಯಾಗಿ ಸಕ್ರಿಯರಾಗಿದ್ದರು. ಸ್ವತಂತ್ರ ಭಾರತದ ಮೊದಲ ಬಜೆಟ್‌ನಲ್ಲಿ ಯಾವುದೇ ತೆರಿಗೆ ಪ್ರಸ್ತಾವನೆ ಇರಲಿಲ್ಲ.
ಈ ಹಿಂದೆ ದೇಶದಲ್ಲಿ ಬಜೆಟ್ ಅನ್ನು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಮುದ್ರಿಸಲಾಗುತ್ತಿತ್ತು. ಆದರೆ ಭಾರತದ ಮೂರನೇ ಹಣಕಾಸು ಸಚಿವ ಸಿ.ಡಿ.ದೇಶಮುಖ್ ಅವರು, 1951 ರಲ್ಲಿ ಬಜೆಟ್ ಮಂಡಿಸಿದಾಗ, ಬಜೆಟ್‌ನ ಎಲ್ಲಾ ದಾಖಲೆಗಳನ್ನು ಹಿಂದಿಯಲ್ಲಿ ಮುದ್ರಿಸಲಾಯಿತು.
ನಿರ್ಮಲಾ ಸೀತಾರಾಮನ್ ಅವರಿಗಿಂತ ಮೊದಲು, ಇನ್ನೊಬ್ಬ ಮಹಿಳಾ ನಾಯಕಿ ಭಾರತದ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಸಂಸತ್ತಿನಲ್ಲಿ ಭಾರತದ ಬಜೆಟ್ ಮಂಡಿಸಿದ ಮೊದಲ ಮಹಿಳೆ ಇಂದಿರಾ ಗಾಂಧಿ. 1969 ರಲ್ಲಿ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮದೇ ಸರ್ಕಾರದ ಉಪಪ್ರಧಾನಿ ಮತ್ತು ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರಿಂದ ಹಣಕಾಸು ಸಚಿವಾಲಯದ ಉಸ್ತುವಾರಿಯನ್ನು ಹಿಂತೆಗೆದುಕೊಂಡಿದ್ದರು.
ಮೊರಾರ್ಜಿ ದೇಸಾಯಿ ದೇಶದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ವ್ಯಕ್ತಿ. ಅವರು ಭಾರತದ ಕೇಂದ್ರ ಬಜೆಟ್ ಅನ್ನು 10 ಬಾರಿ ಮಂಡಿಸಿದ್ದಾರೆ. 1964 ಮತ್ತು 1968 ರಲ್ಲಿ ರ ಫೆಬ್ರವರಿ 29ರಂದು ಅವರ ಜನ್ಮದಿನದಂದು ಎರಡು ಬಾರಿ ಬಜೆಟ್ ಮಂಡಿಸಿದ್ದರು.
ಈ ಹಿಂದೆ ಭಾರತದಲ್ಲಿ, ಹಣಕಾಸು ಸಚಿವರು ಬಜೆಟ್ ಮಂಡಿಸಲು ಕೆಂಪು ಬ್ರೀಫ್ಕೇಸ್ ಅನ್ನು ತರುತ್ತಿದ್ದರು. ಆದರೆ 2019 ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಜೆಟ್ ಗೆ ಭಾರತೀಯ ಲುಕ್ ನೀಡುವ ಉದ್ದೇಶದಿಂದ ಇದಕ್ಕೆ ಬಟ್ಟೆಯನ್ನು ಬಳಸಿದರು. ಇದಾದ ನಟರ ಈ ಬ್ಯಾಗ್ ಅನ್ನು ಲೆಡ್ಜರ್ ಎಂದು ಹೆಸರಿಸಲಾಯಿತು.