Side Effects Of Carrots: ಯಾರು ಕ್ಯಾರೆಟ್ ತಿನ್ನಬಾರದು ಗೊತ್ತಾ..?

ಕ್ಯಾರೆಟ್ ತಿನ್ನುವುದರಿಂದ ಹಲವಾರು ಲಾಭಗಳಿವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕೆಲ ಜನರು ಕ್ಯಾರೆಟ್ ತಿನ್ನಬಾರದು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಹಾಗಾದರೆ ಕ್ಯಾರೆಟ್ ಅನ್ನು ಯಾರು ತಿನ್ನಬಾರದು ಎಂದು ತಿಳಿಯೋಣ.

Written by - Puttaraj K Alur | Last Updated : Jan 31, 2022, 09:35 AM IST
  • ಕೆಲವರಿಗೆ ಕ್ಯಾರೆಟ್ ಸೇವಿಸಿದರೆ ಅಲರ್ಜಿ ಸಮಸ್ಯೆ ಉಂಟಾಗುತ್ತದೆ
  • ನೈಸರ್ಗಿಕ ಸಕ್ಕೆರೆ ಕ್ಯಾರೆಟ್‌ನಲ್ಲಿ ಅಧಿಕವಾಗಿರುವುದರಿಂದ ಮಧುಮೇಹಿಗಳು ತಿನ್ನಬಾರದು
  • ಹಾಲುಣಿಸುವ ಮಹಿಳೆಯರು ಸಹ ತುಂಬಾ ಎಚ್ಚರಿಕೆಯಿಂದ ಕ್ಯಾರೆಟ್ ತಿನ್ನಬೇಕು
Side Effects Of Carrots: ಯಾರು ಕ್ಯಾರೆಟ್ ತಿನ್ನಬಾರದು ಗೊತ್ತಾ..? title=
ಕೆಲವರಿಗೆ ಕ್ಯಾರೆಟ್ ತಿಂದ ತಕ್ಷಣ ಅಲರ್ಜಿಯಾಗುತ್ತದೆ

ನವದೆಹಲಿ: ಕ್ಯಾರೆಟ್ ಎಲ್ಲರಿಗೂ ಪ್ರಯೋಜನಕಾರಿ. ಆದರೆ ಇದು ಕೆಲವರಿಗೆ ಅಡ್ಡ ಪರಿಣಾಮ(Disadvantages of Carrots)ಬೀರುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ. ಹೌದು, ಕೆಲ ಜನರು ಕ್ಯಾರೆಟ್ ಅನ್ನು ತಿನ್ನಬಾರದು. ಇಂತವರು ಕ್ಯಾರೆಟ್ ಸೇವಿಸಿದರೆ ಪ್ರಯೋಜನದ ಬದಲು ಹಾನಿಯನ್ನುಂಟಾಗುತ್ತದೆ. ಹಾಗಾದರೆ ಕ್ಯಾರೆಟ್ ಅನ್ನು ಯಾರು ತಿನ್ನಬಾರದು ಅನ್ನೋದರ ಬಗ್ಗೆ ತಿಳಿಯಿರಿ.

ಕೆಲವರಿಗೆ ಕ್ಯಾರೆಟ್ ತಿಂದ ತಕ್ಷಣ ಅಲರ್ಜಿಯಾಗುತ್ತದೆ

ಕೆಲವು ಜನರು ಕ್ಯಾರೆಟ್ ತಿಂದ ನಂತರ ದೇಹದಲ್ಲಿ ಅಲರ್ಜಿ(Side Effects Of Carrots)ಯಾಗುತ್ತದೆ. ವಾಸ್ತವವಾಗಿ ಕೆಲವು ಜನರು ಕ್ಯಾರೆಟ್‌ಗಳಿಗೆ ಅತಿಸೂಕ್ಷ್ಮರಾಗಿರುತ್ತಾರೆ ಮತ್ತು ಅಂತಹ ಜನರಲ್ಲಿ ಕೆಲವು ಸಾಮಾನ್ಯ ಅಡ್ಡಪರಿಣಾಮಗಳು ಉಂಟಾಗುತ್ತವೆ. ಚರ್ಮದ ದದ್ದುಗಳ ಜೊತೆಗೆ ಅತಿಸಾರ ಸಂಭವಿಸುತ್ತದೆ. ಇಂತಹ ಅಲರ್ಜಿಗೆ ಕ್ಯಾರೆಟ್ ಪರಾಗದಲ್ಲಿರುವ ಅಲರ್ಜಿನ್ ಕಾರಣ.

ಇದನ್ನೂ ಓದಿ: Horse Gram Benefits : ನಿಮ್ಮ ಆರೋಗ್ಯಕ್ಕಿದೆ 'ಹುರುಳಿ ಕಾಳಿನ' ಅವಶ್ಯಕೆತೆ : ಇಂದೆ ತಿನ್ನಲು ಆರಂಭಿಸಿ!

ಚರ್ಮದ ಹಳದಿ ಬಣ್ಣ ಹೆಚ್ಚಾಗುತ್ತದೆ

ಕ್ಯಾರೆಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ ನಂತರ ಚರ್ಮದ ಹಳದಿ ಬಣ್ಣವು ಹೆಚ್ಚಾಗುತ್ತದೆ. ಕ್ಯಾರೆಟ್‌(Carrots)ನಲ್ಲಿ ಬೀಟಾ ಕ್ಯಾರೋಟಿನ್ ಅಧಿಕವಾಗಿದ್ದು, ದೇಹದಲ್ಲಿ ವಿಟಮಿನ್ A ಆಗಿ ಪರಿವರ್ತನೆಯಾಗುತ್ತದೆ. ಕ್ಯಾರೆಟ್ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾರೋಟಿನ್ ಇರುತ್ತದೆ, ಇದು ಚರ್ಮದ ಹಳದಿ ಬಣ್ಣವನ್ನು ಹೆಚ್ಚಿಸುವ ಕ್ಯಾರೊಟಿನೆಮಿಯಾವನ್ನು ಉಂಟುಮಾಡುತ್ತದೆ.

ಮಧುಮೇಹಿಗಳು ಕ್ಯಾರೆಟ್ ತಿನ್ನಬಾರದು

ನೈಸರ್ಗಿಕ ಸಕ್ಕರೆಯು ಕ್ಯಾರೆಟ್‌(Carrots)ನಲ್ಲಿ ಅಧಿಕವಾಗಿದೆ. ಹೀಗಾಗಿ ಮಧುಮೇಹ ಇರುವವರು ಕ್ಯಾರೆಟ್ ಅನ್ನು ಹೆಚ್ಚು ಸೇವಿಸಬಾರದು. ಕ್ಯಾರೆಟ್‌ನಲ್ಲಿರುವ ಸಕ್ಕರೆಯು ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಇದರಿಂದ ದೇಹದ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.

ಹಾಲುಣಿಸುವ ಮಹಿಳೆಯರು ವಿಶೇಷ ಕಾಳಜಿ ವಹಿಸಬೇಕು

ಮತ್ತೊಂದೆಡೆ ಹಾಲುಣಿಸುವ ಮಹಿಳೆಯರು ತುಂಬಾ ಎಚ್ಚರಿಕೆಯಿಂದ ಕ್ಯಾರೆಟ್ ತಿನ್ನಬೇಕು. ಏಕೆಂದರೆ ನೀವು ಏನು ತಿಂದರೂ ಅದು ನಿಮ್ಮ ಮಗುವಿಗೂ ತಲುಪುತ್ತದೆ. ಹಾಲುಣಿಸುವ ತಾಯಂದಿರು ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದನ್ನು ತಪ್ಪಿಸಬೇಕು. ಏಕೆಂದರೆ ಕ್ಯಾರೆಟ್ ಎದೆ ಹಾಲಿನ ರುಚಿಯನ್ನು ಬದಲಾಯಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಇದನ್ನೂ ಓದಿ: Cinnamon For Men : ಪುರುಷರ ಆರೋಗ್ಯಕ್ಕಿದೆ ದಾಲ್ಚಿನ್ನಿಯ ಅದ್ಭುತ ಪ್ರಯೋಜನಗಳು : ಇಂದಿನಿಂದ ಆಹಾರದಲ್ಲಿ ಸೇವಿಸಿ!

ಚಿಕ್ಕ ಮಕ್ಕಳಿಗೆ ಸಣ್ಣ ಪ್ರಮಾಣದಲ್ಲಿ ಕ್ಯಾರೆಟ್ ನೀಡಿ

ವರದಿಗಳ ಪ್ರಕಾರ ಹೆಚ್ಚಿನ ಪ್ರಮಾಣ ಕ್ಯಾರೆಟ್(Carrots) ಸೇವನೆಯು ಚಿಕ್ಕ ಮಕ್ಕಳಿಗೆ ಅಸುರಕ್ಷಿತವಾಗಿದೆ. ಆದ್ದರಿಂದ ಚಿಕ್ಕ ಮಕ್ಕಳಿಗೆ ಕ್ಯಾರೆಟ್ ಅನ್ನು ಬಹಳ ಅಪರೂಪವಾಗಿ ನೀಡಬೇಕು. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕ್ಯಾರೆಟ್ ತಿಂದರೆ ನಿಮಗೆ ಯಾವುದೇ ಹಾನಿಯಾಗುವುದಿಲ್ಲ. ಇಲ್ಲದಿದ್ದರೆ ‘ಅತಿಯಾದರೆ ಅಮೃತವು ವಿಷ’ವೆನ್ನುವಂತೆ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News