Corona In School Children: ಕೆ‌.ಆರ್.ಪೇಟೆ ತಾಲೂಕಿನ ಶಾಲೆಗಳಲ್ಲಿ ಕೊರೊನಾ ಆರ್ಭಟ : ಪೋಷಕರ ಆತಂಕ

ಕಳೆದ 2-3 ದಿನಗಳಿಂದ ಮಕ್ಕಳು ಶೀತ, ಕೆಮ್ಮು, ಜ್ವರ, ತಲೆನೋ ವು ಮುಂತಾದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಆ ಪರೀಕ್ಷೆಯ ಫಲಿತಾಂಶ ಬಂದಿದ್ದು 54 ಮಕ್ಕಳಿಗೆ ಮಹಾ ಮಾರಿ ವಕ್ಕರಿಸಿರುವುದು ದೃಢಪಟ್ಟಿದೆ. 

Edited by - Yashaswini V | Last Updated : Jan 25, 2022, 10:27 AM IST
  • ಕಳೆದ 2-3 ದಿನಗಳಿಂದ ಮಕ್ಕಳು ಶೀತ, ಕೆಮ್ಮು, ಜ್ವರ, ತಲೆನೋ ವು ಮುಂತಾದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು
  • ಆ ಪರೀಕ್ಷೆಯ ಫಲಿತಾಂಶ ಬಂದಿದ್ದು 54 ಮಕ್ಕಳಿಗೆ ಮಹಾ ಮಾರಿ ವಕ್ಕರಿಸಿರುವುದು ದೃಢಪಟ್ಟಿದೆ
  • ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿಯಲ್ಲಿರುವ ನವೋದಯ ವಸತಿ ಶಾಲೆಯ 13 ಮಕ್ಕಳಿಗೆ ಹಾಗೂ ಅಡುಗೆ ಸಿಬ್ಬಂದಿ ಸೇರಿದಂತೆ 21 ಮಂದಿಗೆ ಪಾಸಿಟಿವ್‌
Corona In School Children: ಕೆ‌.ಆರ್.ಪೇಟೆ ತಾಲೂಕಿನ ಶಾಲೆಗಳಲ್ಲಿ ಕೊರೊನಾ ಆರ್ಭಟ : ಪೋಷಕರ ಆತಂಕ title=
Corona strain in KRPate Taluk Schools

ಮಂಡ್ಯ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 54 ಮಕ್ಕಳಿಗೆ ಹಾಗೂ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿಯಲ್ಲಿರುವ ನವೋದಯ ವಸತಿ ಶಾಲೆಯ 13 ಮಕ್ಕಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಕಳೆದ 2-3 ದಿನಗಳಿಂದ ಮಕ್ಕಳು ಶೀತ, ಕೆಮ್ಮು, ಜ್ವರ, ತಲೆನೋ ವು ಮುಂತಾದ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ (Covid Test) ಮಾಡಿಸಲಾಗಿತ್ತು. ಆ ಪರೀಕ್ಷೆಯ ಫಲಿತಾಂಶ ಬಂದಿದ್ದು 54 ಮಕ್ಕಳಿಗೆ ಮಹಾ ಮಾರಿ ವಕ್ಕರಿಸಿರುವುದು ದೃಢಪಟ್ಟಿದೆ. 

ಇದನ್ನೂ ಓದಿ- University of Bangalore: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು , ಮಾರ್ಕ್ ಕಂಡು ತಬ್ಬಿಬ್ಬಾದ ವಿದ್ಯಾರ್ಥಿಗಳು

ಸಿಂಧಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಹರ್ಷ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಹಾಗೂ ಮಕ್ಕಳ ಪೋಷಕರಿ ಗೆ ಧೈರ್ಯ ಹೇಳಿದ್ದು, ಪಾಸಿಟಿವ್ (Corona Positive) ಮಕ್ಕ ಳಿಗೆ ಚಿಕಿತ್ಸೆಯ ಕಿಟ್‌ಗಳನ್ನು ನೀಡಿ ಹೋಂ  ಐಸೋಲೇಷನ್‌ಗೆ ಕಳುಹಿಸಿಕೊಟ್ಟಿದ್ದಾರೆ‌. 

ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿಯಲ್ಲಿರುವ ನವೋದಯ ವಸತಿ ಶಾಲೆಯ 13 ಮಕ್ಕಳಿಗೆ ಹಾಗೂ ಅಡುಗೆ ಸಿಬ್ಬಂದಿ ಸೇರಿದಂತೆ 21 ಮಂದಿಗೆ ಪಾಸಿಟಿವ್‌ ಧೃಢಪಟ್ಟಿದ್ದು ಸಂತೇಬಾಚಹಳ್ಳಿ ಪ್ರಾಥಮಿಕ ಆರೋ ಗ್ಯ ಕೇಂದ್ರದ ವೈದ್ಯ ಡಾ. ಕಾರ್ತಿಕ್ ಶಾಲೆಗೆ ಬೇಟಿನೀಡಿ ಹೋಂ ಐಸೋಲೇಷನ್‌ ಗೆ ಶಿಫಾರಸ್ಸು ಮಾಡಿದ್ದಾರೆ. 

ಇದನ್ನೂ ಓದಿ- ಗೆಲ್ಲುವುದಕ್ಕೆ ಸ್ವಂತ ಕ್ಷೇತ್ರವಿಲ್ಲದ ವ್ಯಕ್ತಿಗೆ ಮತ್ತೆ ಸಿಎಂ ಕನಸು: ಸಿದ್ದರಾಮಯ್ಯಗೆ ತಿವಿದ ಬಿಜೆಪಿ

ಶಾಲೆಯ ಮಕ್ಕಳಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನಲೆಯಲ್ಲಿ ಎರಡೂ ಶಾಲೆಗೆ ಸ್ಯಾನಿಟೈಸ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ, ಶಾಲೆಗೆ ರಜೆ ಘೋಷಿಸಲಾಗಿದೆ. ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಆತಂಕ ಉಂಟುಮಾಡಿದ್ದು ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News