Indian Railways: ಯಾತ್ರಿಗಳ ಗಮನಕ್ಕೆ...! ಇನ್ಮುಂದೆ ಟ್ರೈನ್ ನಲ್ಲಿ ಬರ್ತ್ ಖಾಲಿಯಾದ ತಕ್ಷಣ ನಿಮಗೆ ಅಲರ್ಟ್ ಸಿಗಲಿದೆ

IRCTC New Updates: Push Notification Service ಮೂಲಕ ರೈಲು ಯಾತ್ರಿಗಳಿಗೆ ಹಾಗೂ ಗ್ರಾಹಕರಿಗೆ ಹಲವು ಮಾಹಿತಿಗಳು ಲಭಿಸಲಿವೆ. ಮೊಬೈಲ್ ಫೋನ್ ಮುಖಾಂತರವೇ ಸಂಬಂಧಿತ ರೂಟ್ ನಲ್ಲಿನ ಹೊಸ ರೈಲು ಹಾಗೂ ಖಾಲಿ ಇರುವ ಬರ್ತ್ ಮಾಹಿತಿ ಸಿಗಲಿದೆ.

Written by - Nitin Tabib | Last Updated : Dec 5, 2021, 06:39 PM IST
  • ಪುಶ್ ಅಧಿಸೂಚನೆ ಸೌಲಭ್ಯವನ್ನು ಪರಿಚಯಿಸಿದ IRCTC
  • ತನ್ಮೂಲಕ ಬಳಕೆದಾರರು ಖಾಲಿ ಬರ್ತ್‌ ಕುರಿತು ಅಲರ್ಟ್ ಪಡೆಯಬಹುದು.
  • ದೃಢೀಕೃತ ಟಿಕೆಟ್ ಅನ್ನು ಬುಕ್ ಮಾಡಲು ಪ್ರಯಾಣಿಕರಿಗೆ ಸುಲಭವಾಗುತ್ತದೆ
Indian Railways: ಯಾತ್ರಿಗಳ ಗಮನಕ್ಕೆ...! ಇನ್ಮುಂದೆ ಟ್ರೈನ್ ನಲ್ಲಿ ಬರ್ತ್ ಖಾಲಿಯಾದ ತಕ್ಷಣ ನಿಮಗೆ ಅಲರ್ಟ್ ಸಿಗಲಿದೆ  title=
IRCTC New Updates (File Photo)

IRCTC New Facility: ರೈಲ್ವೆ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ರೈಲಿನಲ್ಲಿ ಕನ್ಫರ್ಮ್ ಟಿಕೆಟ್‌ಗಾಗಿ (Confirm Rail Ticket) ನೀವು ಹಲವು ತಿಂಗಳು ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಲು (Train Reservation) ಪ್ರಯತ್ನಿಸುತ್ತೀರಿ. ಆದರೆ ಇನ್ಮುಂದೆ ನೀವು ಅದನ್ನು ಮಾಡುವ ಅಗತ್ಯವಿಲ್ಲ. ಈಗ ರೈಲಿನಲ್ಲಿ ಯಾವುದೇ ಬರ್ತ್ ಖಾಲಿಯಿದ್ದರೆ, ನೀವು ಅದರ ಬಗ್ಗೆ ತಕ್ಷಣವೇ ತಿಳಿದುಕೊಳ್ಳಬಹುದು ಮತ್ತು ನೀವು ತಕ್ಷಣ ಆ ಟಿಕೆಟ್ ಅನ್ನು ಬುಕ್ (IRCTC Online Ticket) ಮಾಡಬಹುದು. IRCTCಯ ಈ ಹೊಸ ಸೇವೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ರೈಲಿನಲ್ಲಿ ಖಾಲಿ ಇರುವ ಬರ್ತ್ ಬಗ್ಗೆ ತಿಳಿಯಿರಿ
ನೀವು IRCTC ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದಾಗ, ಎಲ್ಲಾ ರೈಲುಗಳಲ್ಲಿ ಸೀಟುಗಳ ಲಭ್ಯತೆಯನ್ನು ನೀವು ನೋಡಬಹುದು. ಆಸನ ಖಾಲಿಯಾಗಿದ್ದರೆ ನೀವು ಬುಕ್ (Ticket Booking) ಮಾಡಿ ಮತ್ತು ಅದು ಖಾಲಿ ಇಲ್ಲದಿದ್ದರೆ ನೀವು ಅದೃಷ್ಟದ ಆಧಾರದ ಮೇಲೆ ವೇಟಿಂಗ್ ಟಿಕೆಟ್ ತೆಗೆದುಕೊಳ್ಳುತ್ತೀರಿ ಅಥವಾ ಹೆಚ್ಚು ಕಾಯುವಿಕೆ ಇದ್ದರೆ ನೀವು ಬುಕ್ ಮಾಡುವುದಿಲ್ಲ. ಅಂದರೆ, ಇದುವರೆಗೆ  ರೈಲಿನಲ್ಲಿ ಯಾವುದೇ ಸೀಟು ಖಾಲಿಯಾದರೆ ಅದು ಹೇಗೆ  ತಿಳಿದುಕೊಳ್ಳಬಹುದು ಎಂಬಂತಹ ಸೌಲಭ್ಯ ಈ ಮೊದಲು ಇರಲಿಲ್ಲ. IRCTC ಈಗ ತನ್ನ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ಒದಗಿಸುತ್ತಿದೆ. 

Push Notification Service  ಪರಿಚಯಿಸಿದ IRCTC
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಪುಶ್ ಅಧಿಸೂಚನೆಗಳ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರೊಂದಿಗೆ, ಬಳಕೆದಾರರು ಸೀಟು ಲಭ್ಯತೆ ಸೇರಿದಂತೆ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. IRCTC ಇತ್ತೀಚೆಗೆ ತನ್ನ ವೆಬ್‌ಸೈಟ್ ಅನ್ನು ನವೀಕರಿಸಿದೆ (IRCTC New Website), ಇದರಲ್ಲಿ ಹಲವು ಹೊಸ ವೈಶಿಷ್ಟ್ಯಗಳನ್ನು  ಸೇರಿಸಿದೆ. ರೈಲಿನಲ್ಲಿ ಸೀಟು ಖಾಲಿಯಾದಾಗ ಅದರ ನೋಟಿಫಿಕೇಶನ್ ಬಳಕೆದಾರರ ಮೊಬೈಲ್‌ಗೆ ಹೋಗಲಿದೆ. ನಂತರ ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಖಾಲಿ ಇರುವ ಸೀಟನ್ನು ಬುಕ್ ಮಾಡಬಹುದು. ಇದಕ್ಕಾಗಿ, ಬಳಕೆದಾರರು ಮೊದಲು IRCTC ವೆಬ್‌ಸೈಟ್‌ಗೆ ಹೋಗಿ ಪುಶ್ ಅಧಿಸೂಚನೆಗಳ ಸೌಲಭ್ಯವನ್ನು ಪಡೆಯಬೇಕಾಗುತ್ತದೆ.

ಇದನ್ನೂ ಓದಿ-ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ ಜಾರಿ 

ತಕ್ಷಣ ದೃಢೀಕೃತ ಟಿಕೆಟ್ ಪಡೆಯಿರಿ
ಒಂದು ನಿರ್ದಿಷ್ಟ ದಿನಾಂಕಕ್ಕೆ ನೀವು ರೈಲಿನಲ್ಲಿ ಆಸನವನ್ನು ಕಾಯ್ದಿರಿಸುತ್ತಿದ್ದೀರಿ ಎಂದು ಭಾವಿಸಿ, ಆದರೆ ರೈಲಿನಲ್ಲಿ ಯಾವುದೇ ಸೀಟು ಲಭ್ಯವಿಲ್ಲ, ನಂತರ ನೀವು ಟಿಕೆಟ್ ಅನ್ನು ಬುಕ್ ಮಾಡುವುದಿಲ್ಲ ಎಂದು ಯೋಚಿಸಿ. ಇದರ ನಂತರ, ನೀವು ಎಲ್ಲಾ ರೈಲುಗಳಲ್ಲಿ ಟಿಕೆಟ್‌ಗಳ ಲಭ್ಯತೆಯನ್ನು ಪರಿಶೀಲಿಸುವಿರಿ. ಪ್ರಯಾಣಿಕರು ತನ್ನ ಟಿಕೆಟ್ ಅನ್ನು ರದ್ದುಗೊಳಿಸಿದರೆ, ನಂತರ ನಿಮ್ಮ ಮೊಬೈಲ್‌ನಲ್ಲಿ ಅಧಿಸೂಚನೆ ಬರುತ್ತದೆ, ಈ SMS ನಲ್ಲಿ ರೈಲು ಸಂಖ್ಯೆಯ ಮಾಹಿತಿಯೂ ಇರುತ್ತದೆ, ಅದರ ನಂತರ ನೀವು ಬಯಸಿದರೆ, ನೀವು ಈ ಟಿಕೆಟ್ ಅನ್ನು ಬುಕ್ ಮಾಡಿ ತಕ್ಷಣ ಪ್ರಯಾಣಿಸಬಹುದು.

ಇದನ್ನೂ ಓದಿ-Indian Railways: ಇನ್ಮುಂದೆ ರೈಲು ಟಿಕೆಟ್ ಬುಕ್ ಮಾಡುವ ವೇಳೆ ಕನ್ಫರ್ಮ್ ಲೋವರ್ ಬರ್ತ್ ಸಿಗಲಿದೆ! ಹೇಗೆ ಇಲ್ಲಿದೆ ವಿವರ

ಪುಶ್ ಅಧಿಸೂಚನೆ ಆಯ್ಕೆ
ನೀವು IRCTC ವೆಬ್‌ಸೈಟ್ ಭೇಟಿ ನೀಡಿದಾಗ, ನೀವು ಪುಶ್ ಅಧಿಸೂಚನೆಗಳ ಆಯ್ಕೆಯನ್ನು ಪಡೆಯುವಿರಿ. ಗ್ರಾಹಕರು ಈ ವಿಶೇಷ ಸೇವೆಗೆ ಸಂಪೂರ್ಣವಾಗಿ ಉಚಿತವಾಗಿ ಚಂದಾದಾರರಾಗಬಹುದು. ಇದಕ್ಕಾಗಿ, ಅವರು IRCTC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಈ ಸೇವೆಗೆ ಚಂದಾದಾರರಾಗಬೇಕು. IRCTC ಪ್ರಸ್ತುತ 30 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Indian Railways : ಟಿಕೆಟ್ ಇಲ್ಲದೆಯೂ ರೈಲು ಪ್ರಯಾಣ ಸಾಧ್ಯ , ತಿಳಿಯಿರಿ ಏನು ಹೇಳುತ್ತದೆ ರೈಲ್ವೆಯ ಹೊಸ ನಿಯಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News