ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ 14 ವಿರೋಧ ಪಕ್ಷಗಳು..!

ಕೇಂದ್ರ ಸಚಿವ ಅರ್ಜುನ್ ಮೇಘವಾಲ್ , ಇಂದು ಇಂತಹ ಮಹತ್ವದ ದಿನವಾಗಿದೆ. ಹಾಗಿದ್ದರೂ  ದೇಶವನ್ನು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ನಂತಹ ಪಕ್ಷವು ಸಂವಿಧಾನ ದಿನಾಚರಣೆಯನ್ನು ಬಹಿಷ್ಕರಿಸುತ್ತಿದೆ.

Written by - Ranjitha R K | Last Updated : Nov 26, 2021, 11:23 AM IST
  • ಸಂವಿಧಾನ ದಿನದ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪ್ರತಿಪಕ್ಷಗಳು
  • ಕಾಂಗ್ರೆಸ್ ನಡೆಯನ್ನು ಟೀಕಿಸಿದ ಕೇಂದ್ರ ಸಚಿವ
  • ಸಂವಿಧಾನ ದಿನದಂದು ಪ್ರಧಾನಿ ಮೋದಿ ಶುಭಾಶಯ
ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ 14 ವಿರೋಧ ಪಕ್ಷಗಳು..! title=
ಸಂವಿಧಾನ ದಿನದ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪ್ರತಿಪಕ್ಷಗಳು (file photo)

ನವದೆಹಲಿ :  ಸಂವಿಧಾನ ದಿನದ (Constitution Day) ಅಂಗವಾಗಿ ಕೇಂದ್ರ ಸರ್ಕಾರ ಸಂಸತ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಆದರೆ, ಕಾಂಗ್ರೆಸ್ (Congress), ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಸೇರಿದಂತೆ 14 ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಪ್ರತಿಪಕ್ಷಗಳ ಈ ನಿರ್ಧಾರ  ವಿರೋಧ ಪಕ್ಷಗಳು ಮತ್ತು ಸರ್ಕಾರದ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. 

ಕಾಂಗ್ರೆಸ್ ನಡೆಯನ್ನು ಟೀಕಿಸಿದ ಕೇಂದ್ರ ಸಚಿವ : 
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಅರ್ಜುನ್ ಮೇಘವಾಲ್ (Arjun Meghwal), ಇಂದು ಇಂತಹ ಮಹತ್ವದ ದಿನವಾಗಿದೆ. ಹಾಗಿದ್ದರೂ  ದೇಶವನ್ನು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ನಂತಹ (Congress) ಪಕ್ಷವು ಸಂವಿಧಾನ ದಿನಾಚರಣೆಯನ್ನು ಬಹಿಷ್ಕರಿಸುತ್ತಿದೆ. ಬಾಬಾ ಸಾಹೇಬರನ್ನು (Baba saheb Ambedkar) ಅವಮಾನಿಸಿದ ಕಾಂಗ್ರೆಸ್, ಇಂದು ಸ್ಪೀಕರ್ ಆಯೋಜಿಸಿದ್ದ ಗೌರವ ದಿನಾಚರಣೆಯನ್ನು ಬಹಿಷ್ಕರಿಸಿ, ಕಾಂಗ್ರೆಸ್ ಕೇವಲ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯ ಗೌರವ ಕಾರ್ಯಕ್ರಮವನ್ನು ಮಾತ್ರ ಆಚರಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಾಬಾ ಸಾಹೇಬ್ ಮತ್ತು ಸರ್ದಾರ್ ಪಟೇಲ್ (Sardar Patel) ಅವರಂತಹ ಮಹಾನ್ ವ್ಯಕ್ತಿಗಳ ಗೌರವ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ : Mumbai Terror Attack: ಮುಂಬೈ 26/11 ಭಯೋತ್ಪಾದಕ ದಾಳಿ: ಉಗ್ರರ ಅಟ್ಟಹಾಸದ ಕರಾಳ ನೆನಪಿಗೆ 13 ವರ್ಷ

ನಾವು ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ಈ ದಿನವನ್ನು ಬಹಿಷ್ಕರಿಸುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಮಾಡಿದಂತಿದೆ ಎಂದು ಹೇಳಿದರು. 

ಸಂವಿಧಾನ ದಿನದಂದು ಪ್ರಧಾನಿ ಮೋದಿ ಶುಭಾಶಯ :
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂವಿಧಾನ ದಿನದ ಅಂಗವಾಗಿ, ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ದೇಶವಾಸಿಗಳಿಗೆ ಸಂವಿಧಾನ ದಿನದ ಶುಭಾಶಯಗಳನ್ನು ಹೇಳಿದ್ದಾರೆ. ಅಲ್ಲದೆ, ನವೆಂಬರ್ 4, 1948 ರಂದು, ಸಂವಿಧಾನ ರಚನಾ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ನೀಡಿದ ಭಾಷಣದ ಆಯ್ದ ಭಾಗವನ್ನು ಶೇರ್ ಮಾಡಿದ್ದಾರೆ. 

 

ಪ್ರಧಾನಿ ಮೋದಿ (PM Modi) ಮತ್ತೊಂದು ಟ್ವೀಟ್‌ನಲ್ಲಿ 'ಎಷ್ಟೇ ಸುಂದರ, ಸುಸಂಘಟಿತ ಮತ್ತು ಬಲಶಾಲಿಯಾಗಿದ್ದರೂ, ಸಂವಿಧಾನವು ಅದನ್ನು ನಡೆಸುತ್ತಿರುವ ದೇಶದ ನಿಜವಾದ, ನಿಸ್ವಾರ್ಥ, ನಿಸ್ವಾರ್ಥ ಸೇವಕರನ್ನು ಹೊಂದಿಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಡಾ.ರಾಜೇಂದ್ರ ಪ್ರಸಾದ್ ಅವರ ಈ ಭಾವನೆ  ಮಾರ್ಗದರ್ಶಿಯಂತಿದೆ ಎಂದು ಬರೆದಿದ್ದಾರೆ. 

 

ಇದನ್ನೂ ಓದಿ : 7th Pay Commission : ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಹೆಚ್ಚಾಗಲಿದೆ ವೇತನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a

Trending News