ನವದೆಹಲಿ: ಎಂ.ಎಸ್.ಧೋನಿ(MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 14ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಐಪಿಎಲ್ ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆಯೇ ದೊಡ್ಡ ಸುದ್ದಿಯೊಂದು ಕೇಳಿಬಂದಿತ್ತು. ವಿರಾಟ್ ಕೊಹ್ಲಿ ಈ ಋತುವಿನ ನಂತರ RCB ನಾಯಕತ್ವದ ಸ್ಥಾನ ತೊರೆಯುವುದಾಗಿ ಹೇಳಿದ್ದರು. ಅದರಂತೆ ಅವರು ಆರ್ಸಿಬಿ(RCB) ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಇದೀಗ ಕೊಹ್ಲಿ ನಂತರ ಆರ್ಸಿಬಿ ನಾಯಕ ಯಾರಾಗುತ್ತಾರೆ ಎಂಬುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. 2022ರಲ್ಲಿ ನಡೆಯಲಿರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿಗೆ ಹೊಸ ನಾಯಕನ ಎಂಟ್ರಿಯಾಗಲಿದೆ.
ಈ ಆಟಗಾರ ಆರ್ಸಿಬಿಯ ನೂತನ ನಾಯಕರಾಗುತ್ತಾರಾ?
ಈ ಮಧ್ಯೆ ಆರ್ಸಿಬಿ(Royal Challengers Bangalore)ಯ ನೂತನ ನಾಯಕನ ಬಗ್ಗೆ ಮತ್ತೊಂದು ದೊಡ್ಡ ಭವಿಷ್ಯ ಕೇಳಿಬಂದಿದೆ. ಆಸ್ಟ್ರೇಲಿಯಾದ ದಂತಕಥೆ ಸ್ಪಿನ್ ಬೌಲರ್ ಬ್ರಾಡ್ ಹಾಗ್(Bradd Hogg) ಮುಂದಿನ ಋತುವಿನಲ್ಲಿ ಈ ತಂಡದ ನಾಯಕನಾಗಬಹುದಾದ ಆಟಗಾರನನ್ನು ಹೆಸರಿಸಿದ್ದಾರೆ. RCB ತಂಡವು ಡೇವಿಡ್ ವಾರ್ನರ್ ಅವರನ್ನು ತಮ್ಮ ತಂಡದ ಹೊಸ ನಾಯಕನನ್ನಾಗಿ ಆಯ್ಕೆ ಮಾಡಬಹುದೆಂದು ಹಾಗ್ ಹೇಳಿದ್ದಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ, ‘ಆರ್ಸಿಬಿ ವಾರ್ನರ್ ಅವರನ್ನು ಆಯ್ಕೆ ಮಾಡಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ಬೆಂಗಳೂರು ತಂಡ ಅವರಿಗೆ ಸರಿಹೊಂದುತ್ತದೆ ಮತ್ತು ತಂಡಕ್ಕೆ ಈಗ ಹೊಸ ನಾಯಕನ ಅವಶ್ಯಕತೆಯೂ ಇದೆ. ಈ ಆಟಗಾರನ ನಾಯಕತ್ವದಲ್ಲಿ ವಿರಾಟ್ ಮತ್ತಷ್ಟು ಆಡಲಿದ್ದಾರೆ ಎಂದು ಹಾಗ್ ಹೇಳಿದ್ದಾರೆ.
ಇದನ್ನೂ ಓದಿ: IPL 2022 Mega Auction ನಲ್ಲಿ 4 ತಂಡಗಳು ಗುರಿಯಾಗಿಸಿಕೊಂಡಿವೆ ಈ ಆಟಗಾರನನ್ನು! T20 World Cup ನಲ್ಲಿ ಭರ್ಜರಿ ಬ್ಯಾಟಿಂಗ್!
ವಾರ್ನರ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ
ಡೇವಿಡ್ ವಾರ್ನರ್(David Warner) ಮತ್ತೊಮ್ಮೆ ತಮ್ಮ ಅಕ್ರಮಣಕಾರಿ ಆಟ ಪ್ರದರ್ಶಿಸುತ್ತಿದ್ದು, ಉತ್ತಮ ಫಾರ್ಮ್ಗೆ ಮರಳಿದ್ದಾರೆ. ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು ಆಸ್ಟ್ರೇಲಿಯಾಗೆ ಚೊಚ್ಚಲ ಟ್ರೋಫಿ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 7 ಪಂದ್ಯಗಳಲ್ಲಿ 289 ರನ್ ಗಳಿಸಿದ ವಾರ್ನರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದಾರೆ. ತಾನಾಡಿದ 7 ಪಂದ್ಯಗಳಲ್ಲಿ ಎದುರಾಳಿ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ವಾರ್ನರ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಾಗ್ ಹೇಳಿದ್ದಾರೆ. ಇದೀಗ ಮುಂದಿನ ಋತುವಿನಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ವಾರ್ನರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದರ ಮೇಲೆ ಎಲ್ಲಾ ತಂಡಗಳ ಕಣ್ಣು ನೆಟ್ಟಿದೆ. ವಾರ್ನರ್ ಅವರನ್ನು ಯಾವುದಾದರೂ ಒಂದು ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಬಹುದು.
ಕೊಹ್ಲಿಗೆ ಯಶಸ್ಸು ಸಿಗಲಿಲ್ಲ
ವಿರಾಟ್ ಕೊಹ್ಲಿ(Virat Kohli) ಕಳೆದ 8 ವರ್ಷಗಳಿಂದ ಆರ್ಸಿಬಿ ನಾಯಕರಾಗಿದ್ದರು. ಆದರೆ ಅವರು ಇಲ್ಲಿಯವರೆಗೆ ತಮ್ಮ ಫ್ರಾಂಚೈಸಿ ಚಾಂಪಿಯನ್ ಮಾಡಲು ವಿಫಲರಾಗಿದ್ದಾರೆ. ಆದ್ದರಿಂದ ತಂಡದ ನಾಯಕತ್ವ ಜವಾಬ್ದಾರಿಯನ್ನು ತೊರೆಯುವ ಒತ್ತಡದಲ್ಲಿದ್ದರು. ಅದರಂತೆ ಅವರು ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿ 2016ರಲ್ಲಿ ಫೈನಲ್ ತಲುಪಿತ್ತು. ಆದರೆ ಅಲ್ಲಿಯೂ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಎದುರು ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ: Team India : ಈ ಇಬ್ಬರು ಕ್ರಿಕೆಟಿಗರ ವೃತ್ತಿಜೀವನ ಕೊಹ್ಲಿ ನಾಯಕತ್ವದಲ್ಲಿ ಕೊನೆ : ತಂಡದಿಂದ ಒಬ್ಬ ಡ್ರಾಪ್!
ಈಡೇರದ ಆರ್ಸಿಬಿ ಅಭಿಮಾನಿಗಳ ಆಸೆ
14ನೇ ಆವೃತ್ತಿಯ ಐಪಿಎಲ್(IPL 2021) ಪ್ರಾರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಅವರು ನಾಯಕತ್ವ ತೊರೆಯಬೇಕೆಂದು ಬಯಸಿದ್ದರು. ಅಭಿಮಾನಿಗಳು ಕೂಡ ಕೊಹ್ಲಿ ಮೇಲೆ ದೊಡ್ಡ ನಿರೀಕ್ಷೆಯನ್ನೇ ಇಟ್ಟಿದ್ದರು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಆರ್ಸಿಬಿ ಹೀನಾಯ ಸೋಲು ಕಾಣುವ ಮೂಲಕ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಬಹುವರ್ಷಗಳಿಂದ ಚೊಚ್ಚಲ ಟ್ರೋಫಿಗಾಗಿ ಕಾಯುತ್ತಿರುವ ಅಭಿಮಾನಿಗಳ ಆಸೆ ಮತ್ತೊಮ್ಮೆ ಈಡೇರಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.