Honda New Bike:150CC ಸೆಗ್ಮೆಂಟ್ ಗೆ ಹೊಂಡಾ ಹೊಸ ಬೈಕ್ ಎಂಟ್ರಿ, ಇಲ್ಲಿವೆ ಅದರ ವೈಶಿಷ್ಟ್ಯಗಳು

Honda New Bike: ಹೋಂಡಾ 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ (Gaikindo Indonesia International Auto Show) ಹೊಸ ಅಡ್ವೆಂಚರ್ ಟೂರರ್  ಮೋಟಾರ್‌ಸೈಕಲ್ CB150X (Honda CB150X) ಅನ್ನು ಅನಾವರಣಗೊಳಿಸಿದೆ, ಇದು 150cc ವಿಭಾಗದಲ್ಲಿ ಕಠಿಣ ಭಾರಿ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. 

Written by - Nitin Tabib | Last Updated : Nov 13, 2021, 04:17 PM IST
  • ಹೊಸ ಹೊಂಡಾ CB150X ಅಡ್ವೆಂಚರ್ ಟೂರರ್ ಅನಾವರಣ.
  • ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ ಬಿಡುಗಡೆ.
  • 149 CC ಲಿಕ್ವಿಡ್ ಕೋಲ್ಡ್, ಫುಯೆಲ್ದ್ ಇಂಜೆಕ್ಟಡ ಇಂಜಿನ್
Honda New Bike:150CC ಸೆಗ್ಮೆಂಟ್ ಗೆ ಹೊಂಡಾ ಹೊಸ ಬೈಕ್ ಎಂಟ್ರಿ, ಇಲ್ಲಿವೆ ಅದರ ವೈಶಿಷ್ಟ್ಯಗಳು title=
Honda New Bies(File Photo)

ನವದೆಹಲಿ: Honda New Bike - ಹೋಂಡಾ ತನ್ನ ಹೊಸ ಅಡ್ವೆಂಚರ್ ಟೂರರ್ ಮೋಟಾರ್‌ಸೈಕಲ್ CB150X ಅನ್ನು ಹೊರತಂದಿದೆ ಮತ್ತು ಈ ಹೊಸ ಮೋಟಾರ್‌ಸೈಕಲ್ ಅನ್ನು 2021 ರ ಗೈಕಿಂಡೋ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ ಪರಿಚಯಿಸಲಾಗಿದೆ. ಇದು ಹೊಂಡಾ ಬೈಕ್ ಗಳ ಲೈನ್ ಅಪ್ ಗಳಲ್ಲಿ (New Honda CB150X) ಕೆಲವು ತಿಂಗಳ ಹಿಂದೆ ಭಾರತದಲ್ಲಿ ಬಿಡುಗಡೆಯಾದ ಹೋಂಡಾದ ಬೈಕ್  CB150X ಕೆಳಗೆ ಇರಲಿದೆ. ಪ್ರಥಮ ನೋಟದಲ್ಲಿ ಇದು CB150X ಮತ್ತು  ಇತರ ಹೋಂಡಾ ಮೋಟಾರ್‌ಸೈಕಲ್‌ಗಳಿಗೆ ಹೋಲುತ್ತದೆ, ಇದನ್ನು ಸಂಪೂರ್ಣ ಸಾಹಸ ಬೈಕ್ ಎಂದು ಕರೆಯಲಾಗುವುದಿಲ್ಲ. ಬೈಕ್‌ನ ಮುಂಭಾಗದ ಭಾಗವು ಸಾಕಷ್ಟು ಭಾರವಾಗಿರುತ್ತದೆ ಮತ್ತು ಇದಕ್ಕೆ ದೊಡ್ಡ ವಿಂಡ್‌ಸ್ಕ್ರೀನ್, ಅಗಲವಾದ ಹ್ಯಾಂಡಲ್‌ಬಾರ್ ಮತ್ತು ಸಿಂಗಲ್ ಪೀಸ್ ಸೀಟ್ ನೀಡಲಾಗಿದೆ.

ಇದನ್ನೂ ಓದಿ-Jan Dhan Account : ಜನ್ ಧನ್ ಖಾತೆ ಖಾತೆದಾರರೇ ಕೂಡಲೇ ಈ ಕೆಲಸ ಮಾಡಿ : ಇಲ್ಲದಿದ್ದರೆ 1 ಲಕ್ಷ 30 ಸಾವಿರ ರೂ. ಕಳೆದುಕೊಳ್ಳಬೇಕಾಗುತ್ತದೆ!

ಹೋಂಡಾ CB150X ನ ಇಂಧನ ಟ್ಯಾಂಕ್ CB200X ಗಿಂತ ಪ್ರಬಲವಾಗಿದೆ ಮತ್ತು ಅಗಲವಾಗಿದೆ, ಇದೀಗ ಅದನ್ನು ತೀಕ್ಷ್ಣವಾದ ಸ್ಟೈಲ್ ಮತ್ತು ವಿನ್ಯಾಸವನ್ನು ನೀಡಲಾಗಿದೆ. ಬೈಕು ಗಟ್ಟಿಮುಟ್ಟಾದ ಕಾಣುವ ಬ್ಯಾಷ್ ಪ್ಲೇಟ್ ಅನ್ನು ಹೊಂದಿದ್ದು, ಅದು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ಈ ಬ್ಯಾಷ್ ಪ್ಲೇಟ್ ಎಂಜಿನ್ ಅನ್ನು ಹಾನಿಯಿಂದ ರಕ್ಷಿಸುತ್ತದೆ. CB150X ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಕಂಪನಿಯು ಹೊಸ CB150X ಗೆ 16.5 bhp ಶಕ್ತಿ ಮತ್ತು 13.8 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ 149 cc ಲಿಕ್ವಿಡ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 6-ಸ್ಪೀಡ್ ಟ್ರಾನ್ಸ್ಮಿಷನ್ ಅನ್ನು ಹೊಂದಿದೆ.

ಇದನ್ನೂ ಓದಿ-ITR ದಾಖಲಿಸುವ ಮೊದಲು AIS ಮೂಲಕ ನಿಮ್ಮ ಎಲ್ಲಾ ಆದಾಯವನ್ನು ಪರಿಸೀಲಿಸಿ, ಇಲ್ಲಿದೆ ವಿಧಾನ

CB200X ಗೆ ಹೋಲಿಸಿದರೆ ಹೊಸ ಬೈಕ್‌ಗೆ (Honda Bikes) ಸ್ವಲ್ಪ ಕಡಿಮೆ ಸೀಟ್ ನೀಡಲಾಗಿದೆ ಮತ್ತು 181 mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬೈಕ್‌ನಲ್ಲಿ 17-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದ್ದು, ಇದು ಬೇಬಿ ಟೂರರ್‌ನಂತೆ ಗೋಚರಿಸುತ್ತದೆ. ಇದರ ಎರಡೂ ಚಕ್ರಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ, ಇವುಗಳನ್ನು ABSನೊಂದಿಗೆ ನೀಡಲಾಗಿದೆ. ಬೈಕಿನ ಮೂಲ ರೂಪಾಂತರದ ಬೆಲೆ ಇಂಡೋನೇಷ್ಯಾದಲ್ಲಿ RP 32 ಮಿಲಿಯನ್ ಆಗಿದೆ, ಇದು ಭಾರತದಲ್ಲಿ ಸುಮಾರು 1.67 ರೂ.ಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇದನ್ನೂ ಓದಿ-Banking Rules: ಮೃತ ಸಂಬಂಧಿಕರ ಬ್ಯಾಂಕ್ ಖಾತೆಯಿಂದ ಅಥವಾ ATM ನಿಂದ ಹಣ ಹಿಂಪಡೆದರೆ ಏನಾಗುತ್ತೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News