Viral News: ಎಮ್ಮೆ, ನಾಯಿ ಪತ್ತೆಯಾದ ಬಳಿಕ ಕುದುರೆ ಮರಿ ಹುಡುಕುತ್ತಿರುವ ಪೊಲೀಸರು..!

ವರದಿಯ ಪ್ರಕಾರ ಕುದುರೆ ಮರಿ ನಾಪತ್ತೆಯಾಗಿದೆ ಹುಡುಕಿಕೊಡಿ ಎಂದು ನಾಜಿಶ್ ಖಾನ್ ಅವರು ಆನ್‌ಲೈನ್ ದೂರು ನೀಡಿದ್ದಾರೆ.

Written by - Puttaraj K Alur | Last Updated : Nov 8, 2021, 01:16 PM IST
  • ಎಮ್ಮೆ, ಸಾಕು ನಾಯಿಯ ನಂತರ ಕುದುರೆ ಮರಿ ಹುಡುಕುತ್ತಿರುವ ಉತ್ತರ ಪ್ರದೇಶದ ರಾಂಪುರ ಪೊಲೀಸರು
  • ಕುದುರೆಮರಿ ನಾಪತ್ತೆ ಬಗ್ಗೆ ದೂರು ನೀಡಿರುವ ರೈತ ಪ್ರಕೋಷ್ಠದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಜೀಶ್ ಖಾನ್
  • 80 ಸಾವಿ ರೂ. ಮೌಲ್ಯದ ಕುದುರೆ ಮರಿ ಪತ್ತೆಗಾಗಿ ಹರಸಾಹಸಪಡುತ್ತಿರುವ ಖಾಕಿಪಡೆ
Viral News: ಎಮ್ಮೆ, ನಾಯಿ ಪತ್ತೆಯಾದ ಬಳಿಕ ಕುದುರೆ ಮರಿ ಹುಡುಕುತ್ತಿರುವ ಪೊಲೀಸರು..! title=
ಕುದುರೆ ಮರಿ ಹುಡುಕುತ್ತಿರುವ ಪೊಲೀಸರು

ಲಕ್ನೋ: ಎಮ್ಮೆ ಮತ್ತು ಸಾಕು ನಾಯಿಯ ನಂತರ ಉತ್ತರ ಪ್ರದೇಶದ ರಾಂಪುರ ಪೊಲೀಸರು ಈಗ ನಾಪತ್ತೆಯಾಗಿರುವ ಕುದುರೆ ಮರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರೈತ ಪ್ರಕೋಷ್ಠದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಜೀಶ್ ಖಾನ್ ಅವರ ಕುದುರೆ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.  4 ವರ್ಷದ ತಮ್ಮ ಕುದುರೆ ಮರಿ ತಮ್ಮ ಕುಟುಂಬದ ಸದಸ್ಯನಂತಿದ್ದು, ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ತಿಳಿಸಿದ್ದಾರೆ. ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಕುದುರೆ ಮರಿ ಚಿತ್ರವನ್ನು ಹಂಚಿಕೊಂಡಿರುವ ನಾಜಿಶ್, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ.

80 ಸಾವಿರ ರೂ.ಗೆ ಮರಿ ಖರೀದಿಸಲಾಗಿದೆ

ವರದಿಯ ಪ್ರಕಾರ, ಕುದುರೆ ಮರಿ ನಾಪತ್ತೆಯಾಗಿದೆ ಹುಡುಕಿಕೊಡಿ ಎಂದು ನಾಜಿಶ್ ಖಾನ್ ಅವರು ಆನ್‌ಲೈನ್ ದೂರು ನೀಡಿದ್ದಾರೆ. ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬರೇಲಿ ವಲಯದ ಎಡಿಜಿ ಅವಿನಾಶ್ ಚಂದ್ರ ತಿಳಿಸಿದ್ದಾರೆ. 80 ಸಾವಿರ ರೂ.ಗೆ ಕುದುರೆ ಮರಿ ಖರೀದಿಸಲಾಗಿದೆ ಎಂದು ಖಾನ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಜರತ್‌ಪುರ ಚೌಕ್‌ ಬಳಿಯ ಫಿರಂಗಿ ಗೇಟ್‌ನ ಗಿರಣಿ ಹಿಂಭಾಗದಲ್ಲಿ ಕುದುರೆಮರಿಯನ್ನು ಕಟ್ಟಿಹಾಕಲಾಗಿತ್ತು. ನವೆಂಬರ್ 5ರ ರಾತ್ರಿಯಿಂದ ಅದು ನಾಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೀಪಾವಳಿ ರಜೆಗಾಗಿ ಸೈನಿಕರ ನಡುವೆ ಗುಂಡಿನ ಚಕಮಕಿ: ನಾಲ್ವರು ಯೋಧರು ಹುತಾತ್ಮ, 13 ಜನರಿಗೆ ಗಾಯ

7 ಎಮ್ಮೆಗಳನ್ನು ಪತ್ತೆ ಮಾಡಿದ್ದ ಪೊಲೀಸರು

ಜನವರಿ 2014ರಲ್ಲಿ ರಾಂಪುರ ಪೊಲೀಸರು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಅಜಂ ಖಾನ್ ಅವರಿಗೆ ಸೇರಿದ 7 ಎಮ್ಮೆಗಳನ್ನು ಪತ್ತೆ ಮಾಡಿದ್ದರು. ಇದಾದ ಬಳಿಕ ಅಂದಿನ ಡಿಎಂ ಅಮಿತ್ ಕಿಶೋರ್ ಅವರ ಸಾಕು ನಾಯಿಯನ್ನು ಪತ್ತೆ ಹಚ್ಚುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದರು. ಪೊಲೀಸರು ತನ್ನ ಕುದುರೆಯನ್ನೂ ವಾಪಸ್ ಕರೆತರುತ್ತಾರೆ ಎಂದು ನಾಜಿಶ್ ಖಾನ್ ಭರವಸೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಅಜಂ ಖಾನ್ ಅವರ ಎಮ್ಮೆಗಳು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.

ಕುದುರೆಮರಿ ಪತ್ತೆಹಚ್ಚಲು ಖಾಕಿಪಡೆಯ ಹರಸಾಹಸ

ಕೆಲವು ವರ್ಷಗಳ ಹಿಂದೆ ರಾಂಪುರದಲ್ಲಿ ಅಜಂ ಖಾನ್ ಅವರ ಜಾನುವಾರು ನಾಪತ್ತೆಯಾಗಿದ್ದವು. ಆದರೆ ಕೆಲವೇ ದಿನಗಳಲ್ಲಿ ಪೊಲೀಸರು ಅವುಗಳನ್ನು ಪತ್ತೆಹಚ್ಚಿದ್ದರು. ನನ್ನ ಮುದ್ದಿನ ಕುದುರೆಮರಿಯನ್ನೂ ಪೊಲೀಸರು ಶೀಘ್ರವೇ ಪತ್ತೆ ಹಚ್ಚುತ್ತಾರೆಂದು ನಾಜಿಶ್ ಖಾನ್ ಹೇಳಿದ್ದಾರೆ. ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸರು ಇದೇ ರೀತಿಯ ಸಂಕಲ್ಪವನ್ನು ತೋರಿಸಬೇಕು. ಕಾಣೆಯಾಗಿರುವ ನನ್ನ ಕುದುರೆ ಮರಿ ಹುಡುಕಲು ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಕುಟುಂಬದ ಭಾಗವಾಗಿರುವ ಕುದುರೆಮರಿನ್ನು ನನ್ನ ಮಕ್ಕಳು ತುಂಬಾ ಪ್ರೀತಿಸುತ್ತಾರೆ. ಅದು ಇಲ್ಲದೆ ಅವರು ದುಃಖದಲ್ಲಿದ್ದಾರೆ ಅಂತಾ ನಜೀಶ್ ಹೇಳಿದ್ದಾರೆ. ಮತ್ತೊಂದೆಡೆ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಕೃಷ್ಣ ಔತಾರ್, ‘ಕುದುರೆ ಮರಿ ಪತ್ತೆಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.  

ಇದನ್ನೂ ಓದಿ: Android: ನಿಮ್ಮ ಸ್ಮಾರ್ಟ್‌ಫೋನ್‌ನ ಈ ಅಪ್ಲಿಕೇಶನ್‌ಗಳಲ್ಲಿ ಜಾಹೀರಾತು ತಪ್ಪಿಸಲು ಈ ಸುಲಭ ಸ್ಟೆಪ್ಸ್ ಅನುಸರಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News