ಛತ್ ಪೂಜೆಯ ನಿಮಿತ್ತ ಸಾರ್ವಜನಿಕ ರಜೆ ಘೋಷಿಸಿದ ದೆಹಲಿ ಸರ್ಕಾರ

ಛತ್ ಪೂಜೆಯ ನಿಮಿತ್ತ ದೆಹಲಿ ಸರ್ಕಾರ ಶುಕ್ರವಾರ ನವೆಂಬರ್ 10 ರಂದು ಸಾರ್ವಜನಿಕ ರಜೆ ಘೋಷಿಸಿದೆ.ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಳೆದ ವಾರ ಯಮುನಾ ನದಿಯ ದಡವನ್ನು ಹೊರತುಪಡಿಸಿ ನಗರದ ನಿಗದಿತ ಸ್ಥಳಗಳಲ್ಲಿ ಛತ್ ಪೂಜೆಯನ್ನು ಆಚರಿಸಲು ಅನುಮತಿ ನೀಡಿತ್ತು.

Written by - Zee Kannada News Desk | Last Updated : Nov 6, 2021, 12:19 AM IST
  • ಛತ್ ಪೂಜೆಯ ನಿಮಿತ್ತ ದೆಹಲಿ ಸರ್ಕಾರ ಶುಕ್ರವಾರ ನವೆಂಬರ್ 10 ರಂದು ಸಾರ್ವಜನಿಕ ರಜೆ ಘೋಷಿಸಿದೆ.
  • ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಳೆದ ವಾರ ಯಮುನಾ ನದಿಯ ದಡವನ್ನು ಹೊರತುಪಡಿಸಿ ನಗರದ ನಿಗದಿತ ಸ್ಥಳಗಳಲ್ಲಿ ಛತ್ ಪೂಜೆಯನ್ನು ಆಚರಿಸಲು ಅನುಮತಿ ನೀಡಿತ್ತು.
ಛತ್ ಪೂಜೆಯ ನಿಮಿತ್ತ ಸಾರ್ವಜನಿಕ ರಜೆ ಘೋಷಿಸಿದ ದೆಹಲಿ ಸರ್ಕಾರ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಛತ್ ಪೂಜೆಯ ನಿಮಿತ್ತ ದೆಹಲಿ ಸರ್ಕಾರ ಶುಕ್ರವಾರ ನವೆಂಬರ್ 10 ರಂದು ಸಾರ್ವಜನಿಕ ರಜೆ ಘೋಷಿಸಿದೆ.ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಳೆದ ವಾರ ಯಮುನಾ ನದಿಯ ದಡವನ್ನು ಹೊರತುಪಡಿಸಿ ನಗರದ ನಿಗದಿತ ಸ್ಥಳಗಳಲ್ಲಿ ಛತ್ ಪೂಜೆಯನ್ನು ಆಚರಿಸಲು ಅನುಮತಿ ನೀಡಿತ್ತು.

ಇದನ್ನೂ ಓದಿ: Punjab Congress Crisis: ರಾಹುಲ್ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು

ದೆಹಲಿಯ ಎನ್‌ಸಿಟಿಯ ಜನರಿಗೆ ಛತ್ ಪೂಜೆ ಒಂದು ಪ್ರಮುಖ ಹಬ್ಬವಾಗಿದೆ.ಅದರಂತೆ, ದೆಹಲಿ ಸರ್ಕಾರವು ನವೆಂಬರ್ 10, 2021 ರಂದು ಛತ್ ಪೂಜೆಯ ನಿಮಿತ್ತ ಸಾರ್ವಜನಿಕ ರಜೆ ಎಂದು ಘೋಷಿಸಲು ನಿರ್ಧರಿಸಿದೆ'ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಗೆ ಔತಣಕೂಟಕ್ಕೆ ಆಹ್ವಾನ ನೀಡಿ ಅಚ್ಚರಿ ಮೂಡಿಸಿದ ಸಿಎಂ ಅಮರಿಂದರ್ ಸಿಂಗ್ ...!

ಕೋವಿಡ್-19 ಭೀತಿಯಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಛತ್ ಆಚರಿಸುವುದನ್ನು ನಿಷೇಧಿಸಿ ಡಿಡಿಎಂಎ ಸೆಪ್ಟೆಂಬರ್ 30ರಂದು ಆದೇಶ ಹೊರಡಿಸಿತ್ತು.ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶಕ್ಕೆ ಸೇರಿದ ಜನರು ದೀಪಾವಳಿಯ ನಂತರ ಆಚರಿಸುವ ಛತ್,ಮೊಣಕಾಲು ಆಳದ ನೀರಿನಲ್ಲಿ ಸೂರ್ಯ ದೇವರಿಗೆ ಉಪವಾಸ ಮಾಡುವ ಮೂಲಕ 'ಅರ್ಘ್ಯ' ವನ್ನು ಅರ್ಪಿಸುವುದನ್ನು ಒಳಗೊಂಡಿರುತ್ತದೆ.ಇದು ಮೂರು ದಿನಗಳ ಆಚರಣೆಗಳನ್ನು ಒಳಗೊಂಡಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News