Zee Real Heroes Awards 2024: ಕಾರ್ತಿಕ್ ಆರ್ಯನ್ ಗೆ ಅತ್ಯುತ್ತಮ ನಟ ಪ್ರಶಸ್ತಿ

ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರನ್ನು ರಂಚಿಸುವ ರೀತಿ ಹಾಗೂ ಹ್ಯಾಸ್ಯಮಯ ನಟನೆ ಇವುಗಳ ಮೂಲಕ ಕಾರ್ತಿಕ್ ಆರ್ಯನ್ ಅಭಿಮಾನಿಗಳ ನೆಚ್ಚಿನ ತಾರೆಯಾಗಿದ್ದಾರೆ.ಹೀಗಾಗಿ ಅವರಿಗೆ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

Written by - Manjunath N | Last Updated : Jan 15, 2025, 06:36 PM IST
  • ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರನ್ನು ರಂಚಿಸುವ ರೀತಿ ಹಾಗೂ ಹ್ಯಾಸ್ಯಮಯ ನಟನೆ ಇವುಗಳ ಮೂಲಕ ಕಾರ್ತಿಕ್ ಆರ್ಯನ್ ಅಭಿಮಾನಿಗಳ ನೆಚ್ಚಿನ ತಾರೆಯಾಗಿದ್ದಾರೆ.
  • ಹೀಗಾಗಿ ಅವರಿಗೆ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
  • ಸಿನಿ ಪ್ರೇಕ್ಷಕರೊಂದಿಗೆ ತಮ್ಮ ನಟನೆಯನ್ನು ಮೀರಿದ ಭಾಂದವ್ಯವನ್ನು ಹೊಂದಿದ್ದಾರೆ.
Zee Real Heroes Awards 2024: ಕಾರ್ತಿಕ್ ಆರ್ಯನ್ ಗೆ ಅತ್ಯುತ್ತಮ ನಟ ಪ್ರಶಸ್ತಿ title=

ಮುಂಬೈ: ಬಾಲಿವುಡ್ ನಲ್ಲಿ ಇಂದಿನ ಹೊಸ ತಲೆ ಮಾರಿನ ನಟರಲ್ಲಿ ಕಾರ್ತಿಕ್ ಆರ್ಯನ್ ಗೆ ಅಗ್ರಸ್ಥಾನ, ಅವರು ಕಳೆದ ಕೆಲವು ವರ್ಷಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅದರಲ್ಲೂ ಪ್ಯಾರ್ ಕಾ ಪಂಚನಾಮಾ ಅವರಿಗೆ ದೊಡ್ಡ ಮೈಲೇಜ್ ನೀಡಿದ ಸಿನಿಮಾ ಎಂದೇ ಹೇಳಬಹುದು.

ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರನ್ನು ರಂಚಿಸುವ ರೀತಿ ಹಾಗೂ ಹ್ಯಾಸ್ಯಮಯ ನಟನೆ ಇವುಗಳ ಮೂಲಕ ಕಾರ್ತಿಕ್ ಆರ್ಯನ್ ಅಭಿಮಾನಿಗಳ ನೆಚ್ಚಿನ ತಾರೆಯಾಗಿದ್ದಾರೆ.ಹೀಗಾಗಿ ಅವರಿಗೆ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಸಾಮಾನ್ಯವಾಗಿ ಹುಡುಕಿಕೊಂಡು ಬರುತ್ತವೆ. ಕೇವಲ ನಟನೆ ಅಷ್ಟೇ ಅಲ್ಲದೆ ಆತ್ಮೀಯವಾಗಿ ಅಭಿಮಾನಿಗಳೊಂದಿಗೆ ಹಾಗೂ ಸಿನಿ ಪ್ರೇಕ್ಷಕರೊಂದಿಗೆ ತಮ್ಮ ನಟನೆಯನ್ನು ಮೀರಿದ ಭಾಂದವ್ಯವನ್ನು ಹೊಂದಿದ್ದಾರೆ.ನಟನೆ ಹಾಗೂ ಪರಿಪೂರ್ಣ ವ್ಯಕ್ತಿತ್ವದೊಂದಿಗೆ ಮೇಳೈಸಿರುವ ಕಾರ್ತಿಕ್ ಆರ್ಯನ್ ಅವರಿಗೆ ಈಗ ಜೀ ರಿಯಲ್ ಹೀರೋ ಪ್ರಶಸ್ತಿ 2024 ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ಸಿನಲ್ಲಿ ಯಾವ ಗೊಂದಲವೂ ಇಲ್ಲ'

ಕಾರ್ತಿಕ್ ಆರ್ಯನ್ ಅವರು ನಿಜವಾಗಿಯೂ ಯಶಸ್ವಿಯಾಗಿಸುವುದು ಅವರ ಸರಳ ಸ್ವಭಾವದ ಜೊತೆಗೆ ಪ್ಯಾರ್ ಕಾ ಪಂಚ್ನಾಮಾ ಮತ್ತು ಸೋನು ಕೆ ಟಿಟು ಕಿ ಸ್ವೀಟಿಯಂತಹ ಚಲನಚಿತ್ರಗಳಲ್ಲಿನ ಅವರ ಮನೋಜ್ಞ ನಟನೆಗೆ.ಈ  ಚಿತ್ರಗಳು ಅವರಿಗೆ ಹೆಚ್ಚಿನ ಖ್ಯಾತಿಯನ್ನು ನೀಡಿದೆ.ಅವರ ಪಾತ್ರಗಳು ಕೇವಲ ಚುರುಕಾಗಿರುವುದಷ್ಟೇ ಅಲ್ಲದೆ ಹಾಸ್ಯಮಯವೂ ಆಗಿವೆ. ಹೀಗಾಗಿ ಅವರು ವ್ಯಂಗ್ಯದೊಂದಿಗೆ ಡೈಲಾಗ್ ಹೇಳುವುದರಲ್ಲೂ ಎತ್ತಿದ ಕೈ. ಇದರಿಂದಾಗಿ ಈಗ ಅವರು ಬಾಲಿವುಡ್ ನಲ್ಲಿ ಕಾರ್ತಿಕ್ ಆರ್ಯನ್ ಬಹು ಬೇಡಿಕೆಯ ನಟರಾಗಿದ್ದಾರೆ. 2024 ರ ಚಲನಚಿತ್ರ ಚಂದು ಧಮಾಕಾ ದೊಂದಿಗೆ, ಇನ್ನೂ ಸವಾಲಿನ ಪಾತ್ರಗಳಲ್ಲೂ ನಟಿಸಬಲ್ಲರೂ ಎನುವುದನ್ನು ಸಾಬೀತುಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News