ನವದೆಹಲಿ : ಎಟಿಎಂನಲ್ಲಿ (ATM) ಹಣ ಬಂದಿಲ್ಲವಾದರೂ ಅನೇಕ ಬಾರಿ ನಿಮ್ಮ ಬ್ಯಾಂಕ್ ಖಾತೆಯಿಂದ (Bank account) ಹಣ ಕಡಿತಗೊಂಡಿರುವ ಸಂದೇಶ ಬ್ಯಾಂಕ್ ನಿಂದ ಬರುತ್ತದೆ. ಆದರೆ, ಎಟಿಎಂನಿಂದ ಮಾತ್ರ ಹಣ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಹಣ ಎಲ್ಲಿಗೂ ಹೋಗುವುದಿಲ್ಲ. ಆದರೆ ಆ ಹಣವನ್ನು ವಾಪಸ್ ಪಡೆಯಬೇಕಾದರೆ, ಈ ಕೆಲಸ ಮಾಡಬೇಕಾಗುತ್ತದೆ.
ಎಟಿಎಂನಿಂದ ಹಣ ಬಾರದಿರುವುದಕ್ಕೆ ಕಾರಣಗಳು :
ಹಲವು ಬಾರಿ ಬ್ಯಾಂಕ್ ಖಾತೆಯಿಂದ (Bank account) ಹಣ ಕಡಿತಗೊಂಡಿರುತ್ತದೆ. ಆದರೆ ಎಟಿಎಂನಿಂದ ಹಣ ಬಂದಿರುವುದಿಲ್ಲ. ಇದಕ್ಕೆ ಹಲವು ಕಾರಣಗಳಿರಬಹುದು. ಮೊದಲ ಕಾರಣ ಎಟಿಎಂ (ATM) ಸಾಫ್ಟ್ ವೇರ್ ಸರಿಯಾಗಿ ಕೆಲಸ ಮಾಡದೇ ಇರಬಹುದು. ಎಟಿಎಂನಲ್ಲಿ ಹಣವಿಲ್ಲದಿರುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು. ಇದಲ್ಲದೇ, ಯಾರಾದರೂ ಎಟಿಎಂನಲ್ಲಿ ಕಾರ್ಡ್ ಸ್ಕಿಮ್ಮಿಂಗ್ ಯಂತ್ರವನ್ನು ಸ್ಥಾಪಿಸಿರಬಹುದು.
ಇದನ್ನೂ ಓದಿ : ZEEL ಕುರಿತ NCLT ಆದೇಶದ ಬಗೆಗಿನ ಮಾಧ್ಯಮದ ವರದಿಗಳು ಆಧಾರರಹಿತ
ಬ್ಯಾಂಕಿನ ಜವಾಬ್ದಾರಿ ಏನು?
ಅಂತಹ ಸಂದರ್ಭಗಳಲ್ಲಿ, ಖಾತೆಯಿಂದ ಕಡಿತಗೊಳಿಸಿದ ಮೊತ್ತವನ್ನು ತಕ್ಷಣವೇ ಬ್ಯಾಂಕ್ (Bank) ಹಿಂತಿರುಗಿಸಬೇಕು. ದೂರು ಸಲ್ಲಿಸಿದ 7 ದಿನಗಳಲ್ಲಿ ಗ್ರಾಹಕರ ಖಾತೆಗೆ ಹಣ ಜಮಾ ಆಗದಿದ್ದರೆ, ಕಾರ್ಡ್ ನೀಡುವ ಬ್ಯಾಂಕ್ ದಿನಕ್ಕೆ 100 ರೂ ದಂಡ ಪಾವತಿಸಬೇಕಾಗಬಹುದು.
ಹಣ ಹೇಗೆ ಮರಳಿ ಬರುತ್ತದೆ?
ಎಟಿಎಂನಿಂದ ಹಣ ಬರದೇ ಹೋದರೆ ಅದು ಗ್ರಾಹಕರ ತಪ್ಪಲ್ಲ. ಇದು ಸಂಪೂರ್ಣವಾಗಿ ಎಟಿಎಂನ ತಪ್ಪು.ಕೆಲವು ದಿನಗಳ ನಂತರ ನಿಮ್ಮ ಹಣವನ್ನು ನೀವೇ ಪಡೆಯಬಹುದು.
ಬ್ಯಾಂಕನ್ನು ತಕ್ಷಣ ಸಂಪರ್ಕ ಮಾಡಿ :
ಹೀಗಾದಾಗ, ಮೊದಲು ಬ್ಯಾಂಕ್ಗೆ ಕರೆ ಮಾಡಿ. ಬ್ಯಾಂಕ್ ಕಾರ್ಯನಿರ್ವಾಹಕನು ವಹಿವಾಟು ಸ್ಲಿಪ್ ಅನ್ನು ಕೇಳುತ್ತಾನೆ, ನಂತರ ನಿಮ್ಮ ದೂರನ್ನು ನೋಂದಾಯಿಸಲಾಗುತ್ತದೆ. ಬ್ಯಾಂಕಿನ ದೋಷದಿಂದಾಗಿ ಈ ಕೆಲಸ ಮಾಡಿದರೆ, 7 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ.
ಇದನ್ನೂ ಓದಿ : PM Kisan Samman Yojana: ಇಂದು ಈ ಕೆಲಸವನ್ನು ಮಾಡಿಲ್ಲ ಎಂದಾದರೆ ಖಾತೆಗೆ ಬರುವುದಿಲ್ಲ 4000 ರೂ. ಇಂದೇ ಕೊನೆಯ ದಿನ
ನೀವು ನೀಡಿದ ದೂರಿಗೆ ಸ್ಪಂದಿಸದೇ ಹೋದರೆ, ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಸಮಸ್ಯೆಯನ್ನು ಹೇಳಬಹುದು. ಬ್ಯಾಂಕಿನ ಶಾಖೆಗೆ ಹೋಗುವ ಮೂಲಕ, ಶಾಖೆಯ ವ್ಯವಸ್ಥಾಪಕರನ್ನು (bank manager) ಭೇಟಿ ಮಾಡಿ ಮತ್ತು ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.