ನವದೆಹಲಿ : Unhealthy Foods For Liver: ಆರೋಗ್ಯಕರ ಯಕೃತ್ತು ಅಥವಾ ಲಿವರ್ ದೇಹದ ಉತ್ತಮ ಕಾರ್ಯನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ. ಲಿವರ್ ನಮ್ಮ ದೇಹದ, ಪ್ರಮುಖ ಅಂಗಗಳಲ್ಲಿ ಒಂದು. ಆರೋಗ್ಯಕರ ಯಕೃತ್ತು ದೇಹದ ಕಾರ್ಯಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಕೃತ್ತು ಚಯಾಪಚಯವನ್ನು ನಿಯಂತ್ರಿಸುತ್ತದೆ. ನಾವು ಸೇವಿಸುವ ಆಹಾರ ನಮ್ಮ ಲಿವರ್ ಆರೋಗ್ಯಕ್ಕೆ ಬಹಳ ಮುಖ್ಯ. ಯಾಕೆಂದರೆ ನಾವು ಏನು ತಿನ್ನುತ್ತೇವೆ ಅದರಿಂದಲೂ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆರೋಗ್ಯಕರ ಲಿವರ್ ಗಾಗಿ, ಕೆಲವೊಂದು ವಸ್ತುಗಳಿಂದ ದೂರವಿರಬೇಕು (food to avoid for healthy liver) ಅಥವಾ ಮಿತಿಯಾಗಿ ಬಳಸಬೇಕು. ಹಾಗಿದ್ದರೆ ಆರೋಗ್ಯಕರ ಲಿವರ್ ಗೆ ಯಾವ ಆಹಾರಗಳಿಂದ ದೂರವಿರಬೇಕು ನೋಡೋಣ..
ಲಿವರ್ ಅನ್ನು ರೋಗಗಳಿಂದ ರಕ್ಷಿಸಲು ಈ ಆಹಾರಗಳನ್ನು ಸೇವಿಸದೆ ಇರುವುದು ಒಳ್ಳೆಯದು.
1. ಫ್ರೆಂಚ್ ಫ್ರೈಸ್ :
ನಾವು ಆಹಾರದಲ್ಲಿ ಸೇವಿಸುವ ಕೊಬ್ಬನ್ನು (Fat) ಒಡೆದು ಅವುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಯಕೃತ್ತು ಸಹಾಯ ಮಾಡುತ್ತದೆ. ಕೊಬ್ಬು ಅಧಿಕವಾಗಿರುವ ಆಹಾರವು ಫ್ಯಾಟಿ ಲಿವರ್ ಸಮಸ್ಯೆಗೆ ಕಾರಣವಾಗಬಹುದು. ಅಂದರೆ ಯಕೃತ್ತಿನ (Liver) ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಸ್ಯಾಚುರೇಟೆಡ್ ಕೊಬ್ಬು ತುಂಬಿರುವ ಫ್ರೆಂಚ್ ಫ್ರೈಗಳನ್ನು (French fry) ನಿಯಮಿತವಾಗಿ ತಿನ್ನುವುದು ಈ ಸಮಸ್ಯೆಗೆ ಕಾರಣವಾಗಬಹುದು.
ಇದನ್ನೂ ಓದಿ : ಫುಡ್ ಪಾಯಿಸನ್ ಆದರೆ ತಕ್ಷಣ ಸೇವಿಸಿ ಈ ವಸ್ತುಗಳನ್ನು, ಚಿಟಿಕಿಯಲ್ಲಿ ಪರಿಹಾರ ಸಿಗುತ್ತದೆ
2. ಚೀಸ್ ಬರ್ಗರ್ :
ಚೀಸ್ ಬರ್ಗರ್ಗಳು ಸ್ಯಾಚುರೇಟೆಡ್ ಕೊಬ್ಬಿನಿಂದ ತುಂಬಿರುತ್ತವೆ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ ಹೆಚ್ಚಿನ ಪ್ರಾಣಿ ಆಧಾರಿತ ಉತ್ಪನ್ನಗಳು ಮತ್ತು ಎಣ್ಣೆಗಳಲ್ಲಿ ಕಂಡುಬರುತ್ತದೆ. ಇದು ಹೃದ್ರೋಗ (Heart disease) ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ತರಕಾರಿಗಳು ನಾರಿನ ಮೂಲವಾಗಿದೆ ಮತ್ತು ಕಡಿಮೆ ಅಥವಾ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ನಿಮ್ಮ ಯಕೃತ್ತಿಗೆ ಸೂಕ್ತವಾದ ಆಹಾರ ಆಯ್ಕೆಯಾಗಿದೆ.
3. ಹಾಲಿನ ಕೆನೆ :
ಹಾಲಿನ ಕೆನೆ ರುಚಿಕರವಾಗಿರುತ್ತದೆ. ಆದರೆ ಇದನ್ನು ಅತಿ ಹೆಚ್ಚು ಸೇವಿಸುವುದು ಕೂಡಾ ಒಳ್ಳೆಯದಲ್ಲ. ಹಾಲಿನ ಕೆನೆಯಲ್ಲಿ ಹೆಚ್ಚಿನ ಕ್ಯಾಲೋರಿ, ಸಕ್ಕರೆ (Sugar), ಕೊಬ್ಬು ಮತ್ತು ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ.
ಇದನ್ನೂ ಓದಿ : Snoring Problem: ಮಲಗುವಾಗ ನೀವೂ ಗೊರಕೆ ಹೊಡೆಯುತ್ತೀರಾ? ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ತಿಳಿಯಿರಿ
4. ಬೆಣ್ಣೆ :
ಹೆಚ್ಚಿನ ಪ್ರಾಣಿ ಉತ್ಪನ್ನಗಳಂತೆ, ಡೈರಿ ಉತ್ಪನ್ನಗಳು ಯಕೃತ್ತಿನ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಬೆಣ್ಣೆ (Butter) ಕೂಡಾ ಇದರಲ್ಲಿ ಸೇರಿದೆ. ಬೆಣ್ಣೆ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಬೆಣ್ಣೆಯ ಬದಲು ಆಲಿವ್ ಆಯಿಲ್ ಅನ್ನು ಬಳಸುವುದು ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.