ನ್ಯೂಯಾರ್ಕ್: 2021ನೇ ಸಾಲಿನ ಪ್ರತಿಷ್ಠಿತ ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ(US Open 2021) ಗೆಲ್ಲುವ ಮೂಲಕ 18 ವರ್ಷದ ಬ್ರಿಟನ್‌ನ ಎಮ್ಮಾ ರಾಡುಕಾನು(Emma Raducanu)ನೂತನ ಇತಿಹಾಸ ರಚಿಸಿದ್ದಾರೆ. ಈ ಮೂಲಕ 53 ವರ್ಷಗಳಲ್ಲಿ ಪ್ರಶಸ್ತಿ ಗೆದ್ದ ಮೊದಲ ಬ್ರಿಟಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಎಮ್ಮಾ ಪಾತ್ರರಾದರು.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಎಮ್ಮಾ ಅವರು ತಮ್ಮ ಎದುರಾಳಿ ಕೆನಡಾದ ಲೇಲಾ ಫೆರ್ನಾಂಡಿಸ್(Leylah Fernandez) ವಿರುದ್ಧ 6-4, 6-3ರ ನೇರ ಅಂತರದಲ್ಲಿ ಗೆಲ್ಲುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು. ಟೆನಿಸ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್, ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಅವರದ್ದಾಗಿದೆ. ಏಕೆಂದರೆ ಬ್ರಿಟನ್ ಪರ 1977ರಲ್ಲಿ ವಿಂಬಲ್ಡನ್(Wimbledon) ಟೂರ್ನಿಯಲ್ಲಿ ವರ್ಜೀನಿಯಾ ವೇಡ್ ಗೆಲುವು ಸಾಧಿಸಿದ್ದರು. ಆ ಬಳಿಕ ಬ್ರಿಟನ್‌ನ ಯಾವ ಆಟಗಾರ್ತಿಯೂ ಪ್ರತಿಷ್ಠಿತ ಪ್ರಶಸ್ತಿ ಗೆದ್ದಿರಲಿಲ್ಲ.
Emma Raducanu's storybook run ends with the 🏆 in New York! pic.twitter.com/esLsw4TQNY
— US Open Tennis (@usopen) September 11, 2021
ಇದನ್ನೂ ಓದಿ: IPL 2021: IPL 2021ರಿಂದ ಹೊರಗುಳಿಯುವ ನಿರ್ಧಾರ ಕೈಗೊಂಡ ಈ ಸ್ಟಾರ್ ಆಟಗಾರರು
ಇದೇ ಮೊದಲ ಬಾರಿಗೆ ಪುರುಷರು ಮತ್ತು ಮಹಿಳೆಯರ ವಿಭಾಗದ ಗ್ರ್ಯಾಂಡ್ ಸ್ಲಾಮ್ ಫೈನಲ್ ನಲ್ಲಿ ಶ್ರೇಯಾಂಕ ರಹಿತ ಆಟಗಾರರು ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು. ಯಾರೂ ಊಹಿಸದ ರೀತಿಯಲ್ಲಿ ದಿಗ್ಗಜ ಆಟಗಾರರಿಗೆ ಮಣ್ಣುಮುಕ್ಕಿಸಿ ಫೈನಲ್ ಪ್ರವೇಶಿಸಿದ್ದ ಈ ಆಟಗಾರ್ತಿಯರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. 150ನೇ ರ‍್ಯಾಂಕ್ ನ ಆಟಗಾರ್ತಿ ಎಮ್ಮಾ, 73ನೇ ಶ್ರೇಯಾಂಕಿತೆ ಫೆರ್ನಾಂಡಿಸ್ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದರು. ಟೂರ್ನಿಯಲ್ಲಿ ಒಂದೇ ಒಂದು ಸೆಟ್ ಬಿಟ್ಟುಕೊಡದೇ ಗ್ರ್ಯಾನ್ ಸ್ಲಾಮ್ ಕಿರೀಟ(Grand Slam) ಗೆಲ್ಲುವ ಮೂಲಕ ಎಲ್ಲರನ್ನೂ ಅವರು ಹುಬ್ಬೇರಿಸಿದರು.
An ace of a lifetime 🏆
This Emma Raducanu ace is our Serve of the Day, crowning her your 2021 US Open Women's Singles Champion.@Heineken_US | #USOpen pic.twitter.com/MLJRAsXLFh
— US Open Tennis (@usopen) September 11, 2021
ಎಮ್ಮಾ(Emma Raducanu) ತನಗಿಂತಲೂ ಹೆಚ್ಚು ಅನುಭವಿ ಆಟಗಾರ್ತಿಯರನ್ನು ಸೋಲಿಸುವ ಮೂಲಕ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು. ಅವರು ಪ್ರಶಸ್ತಿ ಗೆಲ್ಲುತ್ತಾರೆಂದು ಯಾರೂ ಊಹಿಸಿರಲಿಲ್ಲ. ಅತ್ತ 19 ವರ್ಷದ ಲೇಲಾ ಪ್ರಮುಖ ಆಟಗಾರ್ತಿಯರಿಗೆ ಸೋಲಿನ ರುಚಿ ತೋರಿಸಿ ಫೈನಲ್ ಪ್ರವೇಶಿಸಿದ್ದರು.
ಇದನ್ನೂ ಓದಿ: ಪೋಷಕರು ಜೊತೆ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿ ನೀರಜ್ ಚೋಪ್ರಾ ಹೇಳಿದ್ದೇನು?
ಫೈನಲ್ ಪ್ರವೇಶಿಸಿದ ಬಳಿಕ ಇಬ್ಬರೂ ಆಟಗಾರ್ತಿಯರು ‘ನಾವು ಇಲ್ಲಿದ್ದೇವೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ವೆಂದು ಹೇಳಿಕೊಂಡಿದ್ದರು. ಪ್ರಶಸ್ತಿ ಗೆದ್ದ ಎಮ್ಮಾ ಹೊಸ ಇತಿಹಾಸ ರಚಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ‘ಪ್ರಶಸ್ತಿ ಗೆದ್ದಿರುವುದು ನನಗೆ ತಡೆಯಲಾರದಷ್ಟು ಖುಷಿಯಾಗಿದೆ’ ಎಂದು ಅವರು ಸಂಭ್ರಮಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.