Coffee Face Pack: ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಬ್ಯೂಟಿ ಪಾರ್ಲಗೆ ಹೋಗಬೇಕು ಎಂದೇನಿಲ್ಲ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳ ಮೊರೆ ಹೋಗುವ ಅಗತ್ಯವಿಲ್ಲ. ಮನೆಯಲ್ಲಿರುವ ಹಲವು ಪದಾರ್ಥಗಳು ಕೂಡ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಅಂತಹದರಲ್ಲೇ ಒಂದು ಕಾಫಿ ಪುಡಿ. ಸಾಮಾನ್ಯವಾಗಿ ಕಾಫಿ ಎಂದೊಂಡನೆ ಒಂದು ಸಿಪ್ ಕಾಫಿ ಕುಡಿದರೆ ಎಷ್ಟು ಚೆನ್ನಾಗಿರುತ್ತದೆ ಎಂದೆನಿಸುತ್ತದೆ. ಆದರೆ ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ಆರೋಗ್ಯ ತಜ್ಞರ ಪ್ರಕಾರ, ಕಾಫಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ. ಇದನ್ನು ಫೇಸ್ ಸ್ಕ್ರಬ್, ಫೇಸ್ ಪ್ಯಾಕ್ ಸೇರಿದಂತೆ ಹಲವು ರೀತಿಯಲ್ಲಿ ಮುಖಕ್ಕೆ ಬಳಸಬಹುದು.
ಈ ಲೇಖನದಲ್ಲಿ ಕಾಫಿಯನ್ನು ಹೇಗೆ ಬಳಸಬೇಕೆಂದು ನಾವು ನಿಮಗೆ ಹೇಳುತ್ತಿದ್ದೇವೆ, ಅದನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸುಂದರವಾದ ತ್ವಚೆ ನಿಮ್ಮದಾಗಬಹುದು.
1. ಡೀಪ್ ಕ್ಲೆನ್ಸಿಂಗ್ಗಾಗಿ ಕಾಫಿ:
ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದರ ಬಳಕೆಯಿಂದ, ಡೆಡ್ ಸ್ಕಿನ್ ಸಮಸ್ಯೆಯಿಂದ (Dead Skin Problem) ನೀವು ಪರಿಹಾರ ಪಡೆಯುವುದು ಮಾತ್ರವಲ್ಲದೆ, ನಿಮ್ಮ ಚರ್ಮದ ಹೊಳಪನ್ನು ಮರಳಿ ಪಡೆಯಬಹುದು.
>> ಕಾಫಿ, ಬಿಳಿ ಸಕ್ಕರೆ ಮತ್ತು ನಿಂಬೆ ರಸವನ್ನು ಬೆರೆಸಿ, ನೀವು ದಪ್ಪ ಪೇಸ್ಟ್ ತಯಾರಿಸಬೇಕು.
>> ಈ ಪೇಸ್ಟ್ ಅನ್ನು ಮುಖ, ಕುತ್ತಿಗೆ ಮತ್ತು ದೇಹದ ಮೇಲೆ ಹಚ್ಚಬಹುದು.
>> ಪ್ಯಾಕ್ ಅನ್ನು ಸ್ವಲ್ಪ ಸಮಯ ಹಾಗೆಯೇ ಬಿಡಿ, ಬಳಿಕ ಅದನ್ನು ನಿಜಾನವಾಗಿ ಉಜ್ಜುತ್ತಾ ಮಸಾಜ್ ಮಾಡಿರಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
>> ಈ ಸ್ಕ್ರಬ್ ಅನ್ನು ಬಳಸಿದ ನಂತರ ನಿಮ್ಮ ಚರ್ಮದ ವ್ಯತ್ಯಾಸವನ್ನು ನೀವು ನೋಡುತ್ತೀರಿ.
ಇದನ್ನೂ ಓದಿ- Egg White: ನಿಮಗೂ ಈ ರೀತಿ ಮೊಟ್ಟೆ ತಿನ್ನುವ ಅಭ್ಯಾಸವಿದೆಯೇ? ಇದರಿಂದ ನಿಮಗಾಗುವ ನಷ್ಟವೇನು ಗೊತ್ತೇ?
2. ಕಾಫಿ ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ:
ಕಾಫಿ ಮಾಸ್ಕ್ (Coffee Mask) ಚರ್ಮವನ್ನು ಬಿಗಿಗೊಳಿಸಲು ಪ್ರಯೋಜನಕಾರಿ. ಇದು ಚರ್ಮದಲ್ಲಿ ವಯಸ್ಸಾದ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
* ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಮೊಸರು ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಿ.
* ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.
* ಬಳಿಕ ಚರ್ಮವನ್ನು ಸ್ವಚ್ಚಗೊಳಿಸಿ ಈಗ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ.
* ಸ್ವಲ್ಪ ಸಮಯದ ನಂತರ ನೀವು ನಿಮ್ಮ ಮುಖವನ್ನು ಮೃದುವಾಗಿ ಮಸಾಜ್ ಮಾಡಿ, ಬಳಿಕ ಮುಖವನ್ನು ಸ್ವಚ್ಛಗೊಳಿಸಿ.
* ಉತ್ತಮ ಫಲಿತಾಂಶ ಪಡೆಯಲು ಇದನ್ನು ವಾರದಲ್ಲಿ 2 ರಿಂದ 3 ಬಾರಿ ಅನ್ವಯಿಸಿ.
3. ಕಾಫಿ ಮೊಡವೆಗಳನ್ನು ನಿವಾರಿಸುತ್ತದೆ (Coffee gets rid of acne):
ಕಾಫಿ ಪುಡಿಯು ಮೊಡವೆಗಳನ್ನು (Coffee Face Pack For Pimples) ತೊಡೆದುಹಾಕುತ್ತದೆ. ಕಾಫಿಯು ನೈಸರ್ಗಿಕ ಎಕ್ಸ್‌ಫೋಲಿಯೇಟರ್‌ಗಳನ್ನು ಹೊಂದಿರುತ್ತದೆ, ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳೊಂದಿಗೆ ಬೆರೆಸಿದಾಗ ಚರ್ಮದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ನಿಮಗೆ ಮೊಡವೆಗಳ ಸಮಸ್ಯೆ ಇದ್ದರೆ, ಕಾಫಿಯನ್ನು ಬಳಸುವುದು ಪರಿಣಾಮಕಾರಿ ಆಯ್ಕೆಯಾಗಿದೆ.
>> ಮೊದಲು ನೀವು ಕಾಫಿ ಬೀಜಗಳನ್ನು ಮುಖಕ್ಕೆ ಹಚ್ಚಿ.
>> ಹೀಗೆ ಮಾಡುವುದರಿಂದ, ಡೆಡ್ ಸ್ಕಿನ್ ಸಮಸ್ಯೆಯನ್ನು ನಿವಾರಿಸಲಾಗುತ್ತದೆ ಮತ್ತು ಮೊಡವೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.
>> 3 ಚಮಚ ಕಾಫಿ ಪುಡಿ, ಒಂದು ಚಮಚ ಕಡಲೆ ಹಿಟ್ಟು, 3 ಚಮಚ ಜೇನುತುಪ್ಪ ತೆಗೆದುಕೊಳ್ಳಿ.
>> ಬಳಿಕ 2 ಚಮಚ ಅಲೋವೆರಾ ಜೆಲ್ ಮತ್ತು 2 ರಿಂದ 3 ಹನಿ ಲ್ಯಾವೆಂಡರ್ ಸಾರಭೂತ ತೈಲವನ್ನು ಇದರೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.
>> ಈ ಫೇಸ್ ಪ್ಯಾಕ್ ಅನ್ನು 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ- Diabetes: ನಿಮ್ಮ ಅಡುಗೆಮನೆಯಲ್ಲಿರುವ ಈ ಮಸಾಲೆಗಳು ಮಧುಮೇಹಕ್ಕೆ ರಾಮಬಾಣ
4. ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ
ಸೂರ್ಯನ ಹಾನಿಕಾರಕ ಕಿರಣಗಳು ಚರ್ಮಕ್ಕೆ ಹಾನಿಕಾರಕ. ಈ ಟ್ಯಾನಿಂಗ್ ನಿಂದಾಗಿ, ಪಿಗ್ಮೆಂಟೇಶನ್ ಮತ್ತು ಚರ್ಮವು ಮಂಕಾಗಿ ಕಾಣುತ್ತದೆ. ಕಾಫಿಯು ಪಾಲಿಫಿನಾಲ್‌ಗಳನ್ನು ಹೊಂದಿದ್ದು ಅದು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ.
ಇದಕ್ಕಾಗಿ, ಒಂದು ಚಮಚ ಕಾಫಿಯಲ್ಲಿ ಒಂದು ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ.
ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ 15 ನಿಮಿಷಗಳ ಕಾಲ ಇರಿಸಿ ನಂತರ ನೀರಿನಿಂದ ತೊಳೆಯಿರಿ.
5. ಕಣ್ಣುಗಳ ಊತವನ್ನು ನಿವಾರಿಸಿ:
ನಿಮ್ಮ ಕಣ್ಣುಗಳು ಊದಿಕೊಂಡಿದ್ದರೆ ಕಾಫಿಯು ಪರಿಹಾರವಾಗುತ್ತದೆ. ಕಾಫಿಯಲ್ಲಿ ಕೆಫೀನ್ ಕಂಡುಬರುತ್ತದೆ. ಕೆಫೀನ್ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಕೆಲಸ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ಚರ್ಮವನ್ನು ಬಿಗಿಗೊಳಿಸುತ್ತದೆ. ಈ ಕಾರಣದಿಂದಾಗಿ ಕಣ್ಣುಗಳ ಕೆಳಗೆ ಊತ ಕಡಿಮೆಯಾಗುತ್ತದೆ. ಇದಲ್ಲದೇ, ಕಣ್ಣುಗಳ ಊತವನ್ನು ಕಡಿಮೆ ಮಾಡಲು, ಬೆಚ್ಚಗಿನ ನೀರಿನಲ್ಲಿ ಕಾಫಿ ಪುಡಿಯನ್ನು ಬೆರೆಸಿ ಮತ್ತು ಹತ್ತಿ ಉಂಡೆಗಳ ಸಹಾಯದಿಂದ ಕಣ್ಣುಗಳ ಕೆಳಗೆ ಅನ್ವಯಿಸಿ.
ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ