UNSC: ತಾಲಿಬಾನ್ ಆಳ್ವಿಕೆಯ ಕುರಿತು UNSCಯಲ್ಲಿ ಭಾರತದ ಪ್ರಸ್ತಾವನೆಯಿಂದ ಅಂತರ ಕಾಯ್ದುಕೊಂಡ ಚೀನಾ-ರಷ್ಯಾ, ಅವಸರವೇನಿದೆ ಎಂದು ಪ್ರಶ್ನಿಸಿದ ಡ್ರ್ಯಾಗನ್

UNSC: ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಆಳ್ವಿಕೆಯ ನಂತರ, ಭಾರತದ ನೇತೃತ್ವದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (United Nations Security Counsil) ಆಫ್ಘಾನ್ ಭೂಮಿಯನ್ನು ಬೇರೆ ಯಾವುದೇ ದೇಶದ ವಿರುದ್ಧ ಬಳಸಬಾರದೆಂಬ ನಿರ್ಣಯವನ್ನು ಅಂಗೀಕರಿಸಿದೆ. 

Written by - Nitin Tabib | Last Updated : Sep 1, 2021, 12:27 PM IST
  • ಅಫ್ಘಾನಿಸ್ಥಾನದ ಮಣ್ಣಿನ ದುರ್ಬಳಕೆಯ ಕುರಿತು UNSCಯಲ್ಲಿ ಭಾರತದ ಪ್ರಸ್ತಾವನೆ.
  • ಪ್ರಸ್ತಾವನೆಗೆ ಮತ ಚಲಾವಣೆಯ ವೇಳೆ ಕಣ್ಮರೆಯಾದ ರಷ್ಯಾ ಮತ್ತು ಚೀನಾ.
  • ಇದರಲ್ಲಿ ಅಷ್ಟೊಂದು ಅವಸರವೇನು? ಎಂದು ಪ್ರಶ್ನಿಸಿದ ಡ್ರ್ಯಾಗನ್
UNSC: ತಾಲಿಬಾನ್ ಆಳ್ವಿಕೆಯ ಕುರಿತು UNSCಯಲ್ಲಿ ಭಾರತದ ಪ್ರಸ್ತಾವನೆಯಿಂದ ಅಂತರ ಕಾಯ್ದುಕೊಂಡ ಚೀನಾ-ರಷ್ಯಾ, ಅವಸರವೇನಿದೆ ಎಂದು ಪ್ರಶ್ನಿಸಿದ ಡ್ರ್ಯಾಗನ್  title=
Indian Resolution In UNSC(File Photo)

UNSC: ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಆಳ್ವಿಕೆಯ ನಂತರ, ಭಾರತದ ನೇತೃತ್ವದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (United Nations Security Counsil) ಆಫ್ಘಾನ್ ಭೂಮಿಯನ್ನು ಬೇರೆ ಯಾವುದೇ ದೇಶದ ವಿರುದ್ಧ ಬಳಸಬಾರದೆಂಬ ನಿರ್ಣಯವನ್ನು ಅಂಗೀಕರಿಸಿದೆ. ತಾಲಿಬಾನ್ (Taliban)  ಆಳ್ವಿಕೆಯ ನಂತರ ಅಫಘಾನ್ ಮಣ್ಣಿನ ದುರ್ಬಳಕೆಯ ಬಗ್ಗೆ ಕಾಳಜಿ ಹೊಂದಿರುವ ಈ ಪ್ರಸ್ತಾವನೆಯಲ್ಲಿ (Indian Resolution) ಭಾರತವು ಸಕ್ರಿಯ ಪಾತ್ರವನ್ನು ಹೊಂದಿದೆ. ಆದರೆ, ಸೋಮವಾರ ಅಂಗೀಕಾರಗೊಂಡ ಈ ನಿರ್ಣಯದ ಮೇಲೆ ಮತ ಚಲಾಯಿಸುವ ವೇಳೆ ಚೀನಾ ಮತ್ತು ರಷ್ಯಾವನ್ನು ಕಾಣೆಯಾಗಿದ್ದರು, ಚೀನಾ (China) ಹಾಗೂ ರಷ್ಯಾ (Russia) ಬಹಿರಂಗವಾಗಿ ತಾಲಿಬಾನ್ ಅನ್ನು ಬೆಂಬಲಿಸುತ್ತಿದ್ದಾರೆ. ಇದಷ್ಟೇ ಅಲ್ಲ, ಭಾರತದ ಸಾಂಪ್ರದಾಯಿಕ ಎದುರಾಳಿ ಚೀನಾ ಈ ಪ್ರಸ್ತಾಪದ ಅವಶ್ಯಕತೆ ಏನು ಮತ್ತು ಅದನ್ನು ತರಬೇಕಾದರೆ, ಅದು ಏಕೆ ಇಷ್ಟು ಬೇಗ ಎಂದು ಪ್ರಶ್ನಿಸಿದೆ. ಇದು ಮಾತ್ರವಲ್ಲ, ಈ ಸಮಯದಲ್ಲಿ ಚೀನಾ ಜಾಗತಿಕ ಸಮುದಾಯವು ತಾಲಿಬಾನ್ ಜೊತೆ ಮಾತನಾಡಿ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದೆ.

ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದಿಂದ ಸಂಪೂರ್ಣ ಹೊರಬಿದ್ದ ಅಮೆರಿಕ ಸೇನೆ; ತಾಲಿಬಾನ್ ಸಂಭ್ರಮಾಚರಣೆ

ಚೀನಾಗಿಂತಲೂ  ಒಂದು ಅಡಿ ಮುಂದೆ ಇಟ್ಟಿರುವ ರಷ್ಯಾ, ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುವುದನ್ನು ವಿರೋಧಿಸಿದೆ. ಉನ್ನತ ಕೌಶಲ್ಯ ಹೊಂದಿರುವ  ಮತ್ತು ವೃತ್ತಿಪರ ಆಫ್ಘನ್ನರನ್ನು ದೇಶದಿಂದ ಓಡಿಸಿದರೆ, ಅಫ್ಘಾನಿಸ್ತಾನವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಂಬಾ ದುರ್ಬಲವಾಗುತ್ತದೆ ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಎಂದು ರಷ್ಯಾ ಹೇಳಿದೆ. ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದಲ್ಲಿ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಪೂರ್ವ ತುರ್ಕಸ್ತಾನ್ ಇಸ್ಲಾಮಿಕ್ ಚಳವಳಿಯ ಹೆಸರನ್ನು ಸೇರಿಸಲು ಚೀನಾ ಬಯಸಿದೆ. ಇತ್ತೀಚೆಗೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಎರಡು ಭಯೋತ್ಪಾದಕ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್-ಸಂಬಂಧಿತ ಭಯೋತ್ಪಾದಕ ಸಂಘಟನೆ ISIS-K ವಹಿಸಿಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನ್ ತೊರೆಯುವುದಕ್ಕೂ ಮುನ್ನ ತಾಲಿಬಾನಿಗಳಿಗೆ ಭಾರಿ ನೋವು ನೀಡಿದ ಅಮೇರಿಕಾ, ಮಾಡಿದ್ದೇನು ತಿಳಿಯಲು ಸುದ್ದಿ ಓದಿ?

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ, ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಇ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳನ್ನು ನಿರ್ಮೂಲನೆ ಮಾಡುವ ಅಗತ್ಯತೆಯನ್ನು ಭಾರತ ಒತ್ತಿ ಹೇಳಿದೆ. ಆದರೆ, ಭದ್ರತಾ ಮಂಡಳಿಯ ಸಭೆಯಲ್ಲಿ ರಷ್ಯಾ ಮತ್ತು ಚೀನಾದ ವರ್ತನೆ ಆಶ್ಚರ್ಯಕರವಾಗಿತ್ತು. ತಾಲಿಬಾನ್ ಆಡಳಿತವನ್ನು ಎರಡೂ ದೇಶಗಳು ಬಹಿರಂಗವಾಗಿ ಬೆಂಬಲಿಸುತ್ತಿರುವುದನ್ನು ಗಮನಿಸಲಾಗಿದ್ದು, ಇಡೀ ವಿಶ್ವವೇ ಆತಂಕದಲ್ಲಿದೆ. ಇದು ಮಾತ್ರವಲ್ಲ, ಈ ಪ್ರಸ್ತಾಪವು ಅಫ್ಘಾನಿಸ್ತಾನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅಲ್ಲಿನ ಸರ್ಕಾರವು ಸಂಪನ್ಮೂಲಗಳಿಗೆ ಪ್ರವೇಶವನ್ನು ಹೊಂದಿರುವುದಿಲ್ಲ ಎಂದು ರಷ್ಯಾ ಹೇಳಿದೆ. ಇದು ಅಫ್ಘಾನಿಸ್ತಾನದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು ಎಂದು ತನ್ನ ವಾದ ಮಂಡಿಸಿದೆ.

ಇದನ್ನೂ ಓದಿ-Kabul Attack: ಕಾಬೂಲ್ ದಾಳಿಗೆ ಸ್ನೇಹಿತರ ನಡುವೆ ಘರ್ಷಣೆ, ಬ್ರಿಟನ್ ವಿರುದ್ಧ ಗಂಭೀರ ಆರೋಪ ಮಾಡಿದ ಅಮೆರಿಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News