Book vaccination Slot on WhatsApp - ದೇಶದಾದ್ಯಂತ ನಡೆಯುತ್ತಿರುವ ಲಸಿಕೆಯ ಅಭಿಯಾನವನ್ನು ಪೂರ್ಣಗೊಳಿಸಲು, ಎಲ್ಲಾ ಅಪ್ಲಿಕೇಶನ್ಗಳು ದೊಡ್ಡ ಪ್ರಮಾಣದಲ್ಲಿ. ಭಾಗವಹಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ವಾಟ್ಸಾಪ್ ಕೂಡ ಈ ಓಟದಲ್ಲಿ ಹಿಂದುಳಿದಿಲ್ಲ. ಕಂಪನಿಯು Mygov India ಮತ್ತು Health Ministryಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹೌದು, ಇನ್ಮುಂದೆ ಯಾವುದೇ ಬಳಕೆದಾರರು ಲಸಿಕೆ ಪಡೆಯಲು ತಮ್ಮ ಸ್ಲಾಟ್ ಅನ್ನು WhatsApp ನಲ್ಲಿಯೇ ಬುಕ್ ಮಾಡಬಹುದು. ಇದೆ ವೇಳೆ, ಲಸಿಕೆ ಪಡೆದ ಬಳಕೆದಾರರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (Vaccination Certificate) WhatsApp ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು. ಕಂಪನಿಯ ಈ ಉಪಕ್ರಮವು ದೇಶದ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಪ್ರಯೋಜನಕಾರಿಯಾಗಿದೆ. ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾತ್ಕಾರ್ಟ್ (Will Cathcart) ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.
Today we’re partnering with @MoHFW_INDIA and @mygovindia to enable people to make their vaccine appointments via WhatsApp. Spread the word: https://t.co/2oB1XJbUXD https://t.co/yvF6vzPHI1
— Will Cathcart (@wcathcart) August 24, 2021
ಈ ಕುರಿತು ಟ್ವೀಟ್ ಮಾಡಿರುವ ವಿಲ್ ಕ್ಯಾತ್ಕಾರ್ಟ್, ಇದೀಗ ಎಲ್ಲಾ ಬಳಕೆದಾರರು ತಮ್ಮ ವ್ಯಾಕ್ಸಿನೇಷನ್ ಸ್ಲಾಟ್ ಅನ್ನು WhatsApp ನಲ್ಲಿಯೇ ಬುಕ್ ಮಾಡಬಹುದು. (How to download Vaccination Certificate) ಇದಕ್ಕಾಗಿ ಕಂಪನಿ Mygov India ಮತ್ತು Health Ministryಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಇನ್ಮುಂದೆ ನೀವು ಸುಲಭವಾಗಿ ಲಸಿಕೆಗಾಗಿ ಅಪಾಯಿಂಟ್ಮೆಂಟ್ ಪಡೆಯಬಹುದು.
ಇದನ್ನೂ ಓದಿ-COVID-19 Vaccine Certificate : ಲಸಿಕೆ ಹಾಕಿಸಿಕೊಂಡ ನಂತರ ಈ ತಪ್ಪು ಮಾಡಿದವರಿಗೆ ಸರ್ಕಾರದ ಎಚ್ಚರಿಕೆ
WhatsAppನಲ್ಲಿ ಸ್ಲಾಟ್ ಬುಕ್ ಮಾಡುವುದು ಹೇಗೆ?
>> ಎಲ್ಲಕ್ಕಿಂತ ಮೊದಲು WhatsApp ನ ಅಧಿಕೃತ ಲಿಂಕ್ ಆಗಿರುವ https://wa.me/919013151515 ಮೇಲೆ ಕ್ಲಿಕ್ ಮಾಡಿ.
>> ಈ ಲಿಂಕ್ ನಿಮ್ಮನ್ನು @MyGovIndia ಕೊವಿಡ್ ಹೆಲ್ಪ್ ಡೆಸ್ಕ್ ಗೆ ಕೊಂಡೊಯ್ಯಲಿದೆ.
>> ಅಲ್ಲಿರುವ 'Book Slot' ಆಯ್ಕೆಯ ಮೇಲೆ ಕ್ಲಿಕ್ಕಿಸಿ.
>> ಸ್ಲಾಟ್ ಬುಕ್ ಮಾಡಿದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ.
Vaccination Certificate ಹೇಗೆ ಡೌನ್ಲೋಡ್ ಮಾಡಬೇಕು?
ಈ ಕುರಿತು ಹೇಳಿಕೆ ನೀಡಿರುವ ವಿಲ್ ಕ್ಯಾತ್ಕಾರ್ಟ್, 'ಒಂದು ವೇಳೆ ಈಗಾಗಲೇ ನೀವು ಲಸಿಕೆಯನ್ನು ಹಾಕಿಸಿಕೊಂಡಿದ್ದರೆ, ನೀವು ನಿಮ್ಮ ವ್ಯಾಕ್ಕ್ಸಿನೆಶನ್ ಸರ್ಟಿಫಿಕೆಟ್ ಕೂಡ ಡೌನ್ಲೋಡ್ ಮಾಡಬಹುದು. ಈ ತಿಂಗಳು ಇದುವರೆಗೆ ಸುಮಾರು 3 ಮಿಲಿಯನ್ ಗೂ ಅಧಿಕ ಜನರು ಈ ಹೆಲ್ಪಲೈನ್ ಸಂಖ್ಯೆಯನ್ನು ಬಳಕೆ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-Corona Vaccine: ಮೂರನೇ ತರಂಗಕ್ಕೆ ಮುಂಚಿತವಾಗಿ ಭಾರತಕ್ಕೆ ಮತ್ತೊಂದು ಲಸಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ